ರಾಯಚೂರು ಮಾರ್ಚ್ 23 (ಕರ್ನಾಟಕ ವಾರ್ತೆ): ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯದಲ್ಲಿನ ಹಳೆಯ ದಿನ ಪತ್ರಿಕೆಗಳು, ನಿಯತ ಕಾಲಿಕೆಗಳು ಹಾಗೂ ಪಠ್ಯಕ್ರಮಕ್ಕೆ ಇಲ್ಲದ ಪುಸ್ತಕಗಳನ್ನು ಹರಾಜು ಮೂಲಕ ವಿಲೇವಾರಿ ಮಾಡಲು ಮಾರ್ಚ್ 26ರ ಮಧ್ಯಾಹ್ನ 3 ಗಂಟೆಗೆ ಕಾಲೇಜಿನ ಗ್ರಂಥಾಲಯದಲ್ಲಿ ಹರಾಜು ಮೂಲಕ ಮಾರಾಟ ಮಾಡಲಾಗುತ್ತಿದ್ದು, ಆಸಕ್ತರು 1000ರೂ. ಮುಂಗಡ ಠೇವಣಿಯನ್ನರಿಸಿ, ಹರಾಜಿನಲ್ಲಿ ಭಾಗವಹಿಸಬಹುದಾಗಿದೆ.
ಹರಾಜಿನ ಮುನ್ನವೇ ಹಳೆಯ ಪುಸ್ತಕಗಳನ್ನು ಪರಿಶೀಲಿಸಿ, ಹರಾಜಿನಲ್ಲಿ ಪಾಲ್ಗೂಳ್ಳಬೇಕು. ಹರಾಜಿನಲ್ಲಿ ಯಶಸ್ವಿಯಾಗದವರುಗಳ ಮುಂಗಡ ಠೇವಣಿ ಮೊತ್ತವನ್ನು ಮಾರ್ಚ್ 26 ರಂದು ಹರಾಜು ಮುಕ್ತಾಯಗೊಂಡ ನಂತರ ಹಿಂತಿರುಗಿಸಲಾಗುವುದೆಂದು ಕಾಲೇಜಿನ ಪಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *