ಲಿಂಗಸಗೂರು : ಮಾ 22 . ಒಂದು ತಿಂಗಳ ಕಾಲ ಪವಿತ್ರ ರಂಜಾನ್ ಮಾಸದ ಉಪವಾಸ ಆಚರಣೆಯ ಬಳಿಕ ಶುಕ್ರವಾರ ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಇಂದು ಲಿಂಗಸಗೂರು ತಾಲೂಕಿನಾದ್ಯಂತ ಈದ್ ಉಲ್ ಫಿತರ್ (ರಂಜಾನ್) ಹಬ್ಬವನ್ನು ಮುಸ್ಲಿಂ ಬಾಂಧವರು ಸಂಭ್ರಮದಿಂದ ಆಚರಿಸಿದರು .
ಈದ್ ಉಲ್ ಫಿತರ್ (ರಂಜಾನ್) ಹಬ್ಬದ ಹಿನ್ನೆಲೆಯಲ್ಲಿ ಇಂದು ಲಿಂಗಸಗೂರಿನ ಕರಡಕಲ್ ಕೆರೆಯ ಹತ್ತಿರದ ಈದ್ಗ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ನಮಾಜ್ ನೆರವೇರಿಸಿ ಈ ನಮಾಜ್ ನಲ್ಲಿ ನೂರಾರು ಮುಸ್ಲಿಂ ಬಾಂದವರು ನಮಾಜ್ ನಲ್ಲಿ ಪಾಲ್ಗೊಂಡರು.
ಈದ್ ಉಲ್ ಫಿತರ್ ( ರಂಜಾನ್ ) ಮಸೀದಿಗಳಲ್ಲಿ ಈದ್ ಪ್ರಾರ್ಥನೆಯನ್ನು ಮಾಡುವ ಮೂಲಕ ಪ್ರಾರಂಭವಾಗುತ್ತದೆ. ಈ ಹಿನ್ನೆಲೆಯಲ್ಲಿ ನಗರದ ಈದ್ಗ ಮೈದಾನದಲ್ಲಿ ನೂರಾರು ಮಂದಿ ಮುಸ್ಲಿ ಬಾಂದವರು ವಿಶೇಷ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದರು.ನಮಾಜ್ ಬಳಿಕ ಎಲ್ಲರೂ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡು ಬಳಿಕ ಬಡವರಿಗೆ ದಾನ ಧರ್ಮ ಮಾಡುವ ಮೂಲಕ ಹಬ್ಬ ಆಚರಿಸಿದರು .
ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಹಿರಿಯರು ,

