ಅರಕೇರಾ : ಮುಸ್ಲಿಮರ ಪವಿತ್ರ ರಂಜಾನ್ ಹಬ್ಬವನ್ನು ಪಟ್ಟಣದಲ್ಲಿ ಶನಿವಾರ ಶ್ರದ್ದಾ ಮತ್ತು ಭಕ್ತಿಯಿಂದ ರಂಜಾನ ಹಬ್ಬ ಆಚರಣೆಮಾಡಿದರು. ಶುಕ್ರವಾರ ಆಗಸದಲ್ಲಿ ಚಂದ್ರ ಗೋಚರಿಸಿದ ತರುವಾಯ ಕಳೆದ ಮೂವತ್ತು ದಿನಗಳ ಕೈಗೊಂಡಿದ್ದ ಉಪವಾಸ ಅಂತ್ಯಗೊಳಿಸಿದರು.
ಮುಂಜಾನೆಯಿಂದಲೇ ಹೊಸ ಬಟ್ಟೆಗಳನ್ನು ತೊಟ್ಟು ಮಕ್ಕಳು .ಹಿರಿಯರು ಜಾಮೀಯ ಮಸೀದಿ ಸೇರಿದಂತೆ ಪಟ್ಟಣದಲ್ಲಿನ ೩ ಮಸೀದಿಯಲ್ಲಿ ವಿಶೇಷಪ್ರಾರ್ಥನೆ ಸಲ್ಲಿಸಿದರು.ನಂತರ ಸಾವಿರಾರು ಮುಸ್ಲಿಮರು ಪಟ್ಟಣದ ಹೊರವಲಯದಲ್ಲಿನ ಈದ್ಗಾ ಮೈದಾನಕ್ಕೆ ಹೋಗಿ ಸಾಮೂಹಿಕ ಪ್ರಾರ್ಥನೆ ನೆರವೇರಿಸುವ ಮೂಲಕ ರಂಜಾನ್ ಆಚರಣೆಮಾಡಿದರು. ಮುಸ್ಲಿಂ ಧರ್ಮಗುರು ಅಲಿಂಖಾಜಿ, ಹಾಫಿಜ್ ಬಾಷಸಾಬ ಇಸ್ಲಾಂ ದಾರ್ಮೀಕ ಉಪದೇಶ ನೀಡಿದರು.ಜಾಮೀಯಾ ಮಸೀದಿ ಅಧ್ಯಕ್ಷ ಜಲೀಲಾಸಾಬ ಸೇರಿದಂತೆ ಸಮಾಜದ ಬಾಂದವರು ಉಪಸ್ಥಿತರಿದ್ದರು.
ನಂತರ ಬಡಮುಸ್ಲಿಮರಿಗೆ ಬಟ್ಟೆ,ಆಹಾರಸಾಮಾಗ್ರಿ ,ಹಣವನ್ನು ದಾನವಾಗಿ ನೀಡುವ ಮೂಲಕ ಹಬ್ಬವನ್ನು ಆಚೆರಣೆ ಮಾಡುವದು ಪಟ್ಟನದಲ್ಲಿ ಕಂಡುಬಂದಿತು.
ಪಟ್ಟಣದಲ್ಲಿನ ಹಿರಿಯ ಮುಖಂಡರಾದ ಸತ್ಯನಾರಾಯಣನಾಯಕ ಮಾಜಿ ಜಿಲ್ಲಾಪಂಚಾಯತ ಸದಸ್ಯರ ನಿವಾಸದಲ್ಲಿ ಮುಸ್ಲಿಂ ಗುರುಗಳಾದ ಅಲಿಂಖಾಜಿಯವರಿಗೆ ಬಾಷಸಾಬ ಹಾಪಿಸಾಬ ಇಬ್ಬರನ್ನು ಸನ್ಮಾನಿಸಿಗೌರವಿಸಿ ವಿಳ್ಯೆಬಾಬತ್ತು ನೀಡಿ ಸತ್ಕಾರಿಸಲಾಯಿತು.ಅರಕೇರಾ ಪಟ್ಟಣದ ಈದ್ಗಾ ಮೈದಾನದಲ್ಲಿ ಅಗ್ರಹಾರ, ನಾಗೋಲಿ, ಪಿಲಿಗುಂಡ, ಭೂಮನಗುಂಡ, ಆಲ್ಕೋಡ ಗ್ರಾಮಸ್ಥರು ಸಾಮಾಹಿಕ ಪ್ರಾರ್ಥನೆ ಸಲ್ಲಿಸಿದರು.
ಪಟ್ಟಣದಲ್ಲಿನ ಮಾಜಿವ ಸಚಿವರಾದ ಕೆ,ಶಿವನಗೌಡನಾಯಕ, ಆರ್ ಡಿಸಿ ಬ್ಯಾಂಕ್ ನಿರ್ದೇಶಕರಾದ ಎ. ರಾಜಶೇಖರನಾಯಕ, ಕೆ.ಅನಂತರಾಜನಾಯ, ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರು ಹಾಲಿ ಸದಸ್ಯರು ತಿಮ್ಮಪ್ಪನಾಯಕ ಪೋಲಿಸ್ ಪಾಟೀಲ್. ಕಲ್ಪವೃಕ್ಷ ಸ,ಪ.ಸಂಘ ಅಧ್ಯಕ್ಷರಾದ ಬಸವರಾಜಪೂಜಾರಿ ಸೇರಿದಂತೆ ಪಟ್ಟಣದಲ್ಲಿನ ಪ್ರಮುಖ ಮುಖಂಡರುಗಳ ಮನೆಗೆ ತೆರಳಿ ಪಟ್ಟಣದಲ್ಲಿ ಶುಭಾಶಯವಿನಿಮಯ ಮಾಡಿಕೊಂಡರು.ಈದ್ಗಾ ಮೈದಾನದಲ್ಲಿ ದೇವದುರ್ಗ ಪೋಲಿಸ್ ಅಧಿಕಾರಿಗಳಾದ ವಿರೇಶ,ಹನುಮೇಶ ಬಂದೋಬಸ್ತೇರ್ಪಡಿಸಿದರು.

Leave a Reply

Your email address will not be published. Required fields are marked *