ರಾಯಚೂರು ಮಾರ್ಚ್ 17 (ಕರ್ನಾಟಕ ವಾರ್ತೆ): ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿವಿಧ ವಿಭಾಗಗಳ ಅನುಪಯುಕ್ತ ಉಪಕರಣಗಳನ್ನು/ ವಸ್ತುಗಳನ್ನು ನಿಯಮಾನುಸಾರ ವಿಲೇವಾರಿ ಮಾಡಲು ಮಾರ್ಚ್ 25ರ ಬೆಳಿಗ್ಗೆ 11.30ಕ್ಕೆ ರಂದು ಸಾರ್ವಜನಿಕವಾಗಿ ಹರಾಜು ಮಾಡಲು ತೀರ್ಮಾನಿಸಲಾಗಿದ್ದು, ಆಸಕ್ತ ಸಾರ್ವಜನಿಕರು ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ.
ಹರಾಜಿನಲ್ಲಿ ಸರ್ಕಾರವು ನಿಗಧಿಪಡಿಸಿರುವ ಮೊತ್ತಕ್ಕಿಂತ ಅತೀ ಹೆಚ್ಚಿನ ಬೆಲೆಯನ್ನು ಕೂಗಿದ ಬಿಡ್ಡುದಾರರು ತಕ್ಷಣವೇ ಹಣ ಸಂದಾಯ ಮಾಡಿ ರಶೀದಿಯನ್ನು ಪಡೆಯತಕ್ಕದ್ದು ಹಾಗೂ ತಮ್ಮ ಸ್ವಂತ ಖರ್ಚಿನಲ್ಲಿ ಬಂದು ಒಂದು ವಾರದೊಳಗೆ ಅನುಪಯುಕ್ತ ಉಪಕರಣಗಳನ್ನು/ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕು. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಪ್ರಾಚಾರ್ಯರನ್ನು ಅಥವಾ ಕಚೇರಿ ಅಧೀಕ್ಷಕರನ್ನು ಸಂಪರ್ಕಿಸಬಹುದಾಗಿದೆ ಎಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
