ವಾಣಿಜ್ಯ ಎಲ್‍ಪಿಜಿ ಕೊರತೆಯಿಂದಾಗಿ ನಗರದಲ್ಲಿ ಹಲವೆಡೆ ಹೊಟೇಲ್‍ಗಳು ಮುಚ್ಚಲ್ಪಟ್ಟಿವೆ. ಆದುದರಿಂದ, ಸ್ವಲ್ಪ ಮಟ್ಟಿಗೆ ಹೋಟೆಲ್‍ಗಳಿಗೆ ಎಲ್‍ಪಿಜಿ ಪೂರೈಸುವ ಕುರಿತು ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸೋಮವಾರ ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಅನಿಲ ಪೂರೈಕೆ ಮಾಡುವ ತೈಲ ಕಂಪೆನಿಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಯಲಿದೆ. ಆನಂತರ ಮುಂದಿನ ನಿರ್ಧಾರವನ್ನು ತಿಳಿಸಲಾಗುವುದು ಎಂದು ಹೇಳಿದರು.

ಎರಡು ಕಾರ್ಗೋ ಹಡಗುಗಳು ಭಾರತಕ್ಕೆ ಬಂದಿರುವುದರಿಂದ ಎಲ್‍ಪಿಜಿ ಸಮಸ್ಯೆ ಕ್ರಮೇಣ ಬಗೆಹರಿಯುವ ಸಾಧ್ಯತೆಯಿದೆ. ಇರಾನ್, ಅಮೆರಿಕ-ಇಸ್ರೇಲ್ ನಡುವಿನ ಯುದ್ಧ ಇನ್ನೂ ನಿಂತಿಲ್ಲ. ಆದುದರಿಂದ, ಎಲ್‍ಪಿಜಿಯನ್ನು ಮಿತವಾಗಿ ಬಳಸುವುದು ಉತ್ತಮ ಎಂದು ಮುನಿಯಪ್ಪ ಸಲಹೆ ನೀಡಿದರು.

Leave a Reply

Your email address will not be published. Required fields are marked *