ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಇಂದು ಸ್ಥಳೀಯ ಅಂಬೇಡ್ಕರ್ ಸರ್ಕಾರಿ ಪೋಸ್ಟ್ ಮೆಟ್ರಿಕ್ ಬಾಲಕಿಯರ ಹಾಸ್ಟಲ್‌ನಲ್ಲಿ ಲಯನ್ಸ್ ಕ್ಲಬ್ ಆಶ್ರಯದಲ್ಲಿ ವಿಶೇಷವಾಗಿ ಮಹಿಳಾ ಲಯನ್ಸ್ ನಾಯಕತ್ವದಲ್ಲಿ ಉಚಿತ ಡೆಂಟಲ್ ಚೆಕ್-ಅಪ್ ಕ್ಯಾಂಪ್ ನಡೆಸಲಾಯಿತು.

ಈ ಕಾರ್ಯಕ್ರಮವು ಬಿಂದು ಡೆಂಟಲ್ ಕ್ಲಿನಿಕ್‌ಗೆ ಸೇರಿದ ಡಾ.ಬಿಂದು ಅವರ ಮೇಲ್ವಿಚಾರಣೆಯಲ್ಲಿ ನಡೆಯಿತು. ಹಾಸ್ಟಲ್‌ನಲ್ಲಿರುವ ಬಾಲಕಿಯರಿಗೆ ದಂತ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಾ ಉಚಿತವಾಗಿ ದಂತ ತಪಾಸಣೆ ನಡೆಸಲಾಯಿತು. ಈ ಸೇವಾ ಕಾರ್ಯಕ್ರಮದಲ್ಲಿ ಲಯನ್ ತನುಜ, ಲಯನ್ ಸರೋಜ ಮಾಡಸಿರವಾರ, ಲಯನ್ ಶ್ರೇಯ, ಪದ್ಮ ವೆಂಕಟೇಶ, ರೇಖಾ ಉಡಬಲ್, ಉಷಾ ಪ್ರಭಾಕರ, ಮಂಜುಳ ಜಗದೀಶ, ಹಾಗೂ ಇತರ ಲಯನ್ಸ್ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ನಂತರ ಡಾ.ಬಿಂದು ಮಾತನಾಡಿ, ನಿಮ್ಮ ಹಾಸ್ಟಲ್ ನಲ್ಲಿ ಯಾರಾದರೂ ದಂತ ಸಮಸ್ಯೆಯಿಂದ ಬಳಲುತ್ತಿದ್ದರೆ, ಅವರಿಗೆ ಉಚಿತವಾಗಿ ವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ ವಿದ್ಯಾರ್ಥಿನಿಯರು, ಡಾ.ಬಿಂದು ಅವರನ್ನು ಸನ್ಮಾನಿಸಿದರು.

Leave a Reply

Your email address will not be published. Required fields are marked *