ಸಿಂಧನೂರು: ನಿರಂತರ ಕ್ರಿಯಾಶೀಲರಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಚರಿತ್ರೆಯನ್ನು ತಿಳಿದುಕೊಂಡು ಲಾರ್ಡ್ ಬೆಡೆನ್ ಪಾವೆಲ್ ಅವರ ಆಶಯದಂತೆ ಡಿ.ಎಲ್.ಇಡಿ. ಪ್ರಶಿಕ್ಷಣಾರ್ಥಿಗಳು ತಮ್ಮ ದೈನಂದಿನ ಜೀವನದೊಂದಿಗೆ ಉತ್ತಮ ಸಮಾಜ, ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಮುಂದಾಗಬೇಕು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾಗಿದೆ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪಾಲನೆ, ಪ್ರಾಮಾಣಿಕತನ, ಧೈರ್ಯ ತುಂಬುವ ಕಾರ್ಯ ಮಾಡುತ್ತಿದೆ, ಎಂದು ಉಪನ್ಯಾಸಕ ಕೆ.ಬಿ.ಹವಾಲ್ದಾರ್ ಹೇಳಿದರು.
ಅವರು ನಗರದ ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ರಾಯಚೂರು ಹಾಗೂ ಸ್ಥಳೀಯ ಸಂಸ್ಥೆ ಸಿಂಧನೂರು ಇವರ ಸಂಯುಕ್ತಾಶ್ರಯಲ್ಲಿ 2025-26 ನೇ ಸಾಲಿನ ಕಬ್ ಮಾಸ್ಟರ್, ಫ್ಲಾಕ್ ಲೀರ‍್ಸ್ ಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ಪ್ರಾರಂಭಿಕ ಶಿಬಿರವನ್ನು ವಾದ್ಯ ಬಾರಿಸುವುದರ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಹಾಗೂ ಸ್ಕೌಟ್ಸ್ ಗೈಡ್ಸ್ ಮುಕ್ತದಳ ಜಿಲ್ಲಾ ಸಹಾಯಕ ಆಯುಕ್ತ ಬೀರಪ್ಪ ಶಂಭೋಜಿ ಅವರು ಬೆಡನ್ ಪಾವೆಲ್ ಅವರ ಆರು ವ್ಯಾಯಾಮಗಳ ಬಗ್ಗೆ, ಪ್ರತಿಜ್ಞೆ, ಧ್ಯೇಯವಾಕ್ಯ, ಪ್ರಾರ್ಥನಾ ಗೀತೆ, ಧ್ವಜಗೀತೆ, ನಿಯಮ ಹಾಗೂ ನಾಲ್ಕು ಬಂಧಗಳ ಬಗ್ಗೆ ಶಿಬಿರಾರ್ಥಿಗಳಿಗೆ ತಿಳಿಸಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಉಪನ್ಯಾಸಕಿ ಮನಿಷಾ ಕಿರ್ಲೋಸ್ಕರ್ ಅವರು ಅಧ್ಯಕ್ಷತೆಯನ್ನು ವಹಿಸಿ ತರಬೇತಿಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು. ಎಸ್.ಜಿ.ವಿ. ಅಂಬಣ್ಣ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ ಶಿಬಿರಾರ್ಥಿಗಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಚಳುವಳಿಯ ಬಗ್ಗೆ ವಿವರಿಸಿದರು ಕಬ್ ಮಾಸ್ಟರ್ ಹಾಗೂ ಸ್ಥಳೀಯ ಸಂಸ್ಥೆಯ ಸಹ ಕಾರ್ಯದರ್ಶಿ ಶಂಕರದೇವರು ಹಿರೇಮಠ, ಸ್ಕೌಟ್ ಮಾಸ್ಟರ್ ಸಿದ್ದಪ್ಪ ಬಸರಕೋಡ, ಗೈಡ್ ಕ್ಯಾಪ್ಟನ್ ಆರತಿ ಮೇಡಮ್, ಉಪನ್ಯಾಸಕರಾದ ರಾಮೇಶ್ವರ ಡಾಣಿ, ಅಂಬಮ್ಮ, ಕೃಷ್ಣ ಉಪಸ್ಥಿತರಿದ್ದರು. ಪ್ರಾರಂಭಿಕ ಶಿಬಿರದಲ್ಲಿ ೬೪ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.


