[2:09 am, 27/11/2025] IRFAN Balaganur: ರಾಜ್ಯ ಚುನಾವಣಾ ಆಯೋಗವು ಸಂವಿಧಾನದ ಪರಿಚ್ಛೇದ 243-ಜೆಡ್ ರಲ್ಲಿ ಪ್ರದತ್ತವಾದ ಅಧಿಕಾರದ ಮೇರೆಗೆ ಕರ್ನಾಟಕ ಪೌರಸಭೆಗಳ ಅಧಿನಿಯಮ, 1964 ರ ಪ್ರಕರಣ 17 ಮತ್ತು 19 ಹಾಗೂ ಕರ್ನಾಟಕ ಪೌರಸಭೆಗಳ (ಕೌನ್ಸಿಲರುಗಳ ಚುನಾವಣೆ) ನಿಯಮಗಳು, 1977ರ ನಿಯಮ 3(1) ರನ್ವಯ ಅನುಬಂಧ-1 ರಲ್ಲಿ ಹೆಸರಿಸಲಾದ ಹೊಸದಾಗಿ ರಚನೆಯಾಗಿರುವ 04 ಪಟ್ಟಣ ಪಂಚಾಯತಿಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಅನುಬಂಧ -02 ರಲ್ಲಿ ಹೆಸರಿಸಲಾದ ವಾರ್ಡುಗಳಿಗೆ ಉಪ ಚುನಾವಣೆಯನ್ನು ಈ ಕೆಳಕಂಡ ಚುನಾವಣಾ ವೇಳಾಪಟ್ಟಿಯನುಸಾರ ನಡೆಸಲು ಆದೇಶಿಸಲಾಗಿದೆ.
ಚುನಾವಣಾ ವೇಳಾಪಟ್ಟಿ
ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕ ಮತ್ತು ದಿನ 02/12/2025
2) ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ 09/12/2025
3) ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ
10/12/2025
4) ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ
12/12/20255) ಮತದಾನವನ್ನು ನಡೆಸಬೇಕಾದ ದಿನಾಂಕ21/12/2025 ಭಾನುವಾರ
ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ನಾಯಂಕಾಲ 5.00 ಗಂಟೆಗಳ ವರೆಗೆ)
ಮತ ಎಣಿಕೆ ಫಲಿತಾಂಶ 24 /12/2025
ವಿವಿಧ ಕಾರಣಗಳಿಂದ ತೆರವಾಗಿರುವ ತುರುವಿಹಾಳ 4 ನೇ ವಾರ್ಡ್ ಪಟ್ಟಣ ಪಂಚಾಯಿತಿ ಉಪಚುನಾವಣೆ ವೇಳಾಪಟ್ಟಿಯನ್ನು ಅಧೀನ ಕಾರ್ಯದರ್ಶಿಗಳ ಆದೇಶದ ಅನುಸಾರ ರಾಜ್ಯ ಚುನಾವಣಾ ಆಯೋಗವು ವೇಳಾಪಟ್ಟಿಯನ್ನು ಪ್ರಕಟಿಸಿದೆ..
[2:11 am, 27/11/2025] IRFAN Balaganur: ಹೇಳಿಕೆ: ತುರುವಿಹಾಳ ಪಟ್ಟಣ ಪಂಚಾಯಿತಿಯ ನಾಲ್ಕನೇ ವಾರ್ಡ್ ನ ಉಪ ಚುನಾವಣೆ.
ರಾಜ್ಯ ಚುನಾವಣೆ ಆಯೋಗದ ಆದೇಶದನ್ವಯ ಚುನಾವಣೆ ಆಯೋಗವು ನೀಡಿರುವ ವೇಳಾಪಟ್ಟಿಯಂತೆ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದೆ ಕಟ್ಟುನಿಟ್ಟಾಗಿ ಚುನಾವಣೆಯನ್ನ ನಡೆಸುತ್ತೇವೆ..ಅರುಣ್ ದೇಸಾಯಿ ತಹಶೀಲ್ದಾರ್ ಸಿಂಧನೂರ್
