ಮಸ್ಕಿ :- ಕಳೆದೆರಡು ದಿನಗಳಿಂದ ಉನ್ನತ ಶಿಕ್ಷಣ ಇಲಾಖೆ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ಸಂದರ್ಶನದ ಮೂಲಕ ಆರಂಭವಾಗಿದೆ,
ಆದರೆ ಉನ್ನತಶಿಕ್ಷಣ ಇಲಾಖೆಯ ದ್ವಂದ್ವ ನಿಲುವಿನಿಂದ 6000 ಕ್ಕೂ ಅಧಿಕ ಹಿರಿಯ ಅತಿಥಿ ಉಪನ್ಯಾಸಕರು ಕೆಲಸಕಳೆದುಕೊಂಡು ಅವರ ಕುಟುಂಬಗಳು ಬೀದಿಪಾಲಾಗುವ ದುರಂತದಾಯಕ ಪರಿಸ್ಥಿತಿ ಬಂದಿದೆ.
ಅದರಬಗ್ಗೆ ಮಸ್ಕಿಯ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ಅತಿಥಿ ಉಪನ್ಯಾಸಕರಾದ ಪ್ರಭುದೇವ ಸಾಲಿಮಠ,ಹುಚ್ಚೇಶ ನಾಗಲೀಕರ್ ಮತ್ತು ಡಾಕ್ಟರ್,ಪಂಪಾಪತಿ ನಾಯಕ ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಂಡು ಈ ಅವೈಜ್ಞಾನಿಕ ನೇಮಕಾತಿ ಪ್ರಕ್ರಿಯೆಯನ್ನು ಕೂಡಲೆ ಕೈಬಿಟ್ಟು ಸೇವಾ ಜೇಷ್ಠತೆಯ ಅನುಗುಣವಾಗಿ ಮುಂದುವರೆಸಿ ಉದ್ಯೋಗ ಭದ್ರತೆ ನೀಡಿ ಬೀದಿಪಾಲಾಗುತ್ತಿರುವ ಸಾವಿರಾರು ಅತಿಥಿ ಉಪನ್ಯಾಸಕರ ಬದುಕಿಗೆ ಭದ್ರತೆ ನೀಡಬೇಕೆಂದು ಆಗ್ರಹಿಸಿದರು.
ಉನ್ನತಶಿಕ್ಷಣ ಇಲಾಖೆ ನ್ಯಾಯಾಲಯದ ಆದೇಶ ವೆಂಬ ನೆಪವೊಡ್ಡಿ ಮಾನವೀಯತೆ ಮತ್ತು ನಮ್ಮ ಸುದೀರ್ಗ ಸೇವೆಯನ್ನು ಮಣ್ಣುಪಾಲು ಮಾಡಿ ಮರಣಶಾಸನವನ್ನು ಬರೆಯಹೊರಟಿದೆ.
ನಕಲಿ ಪಿ,ಹೆಚ್,ಡಿ,ನಕಲಿ ಅಂಗವಿಕಲ ಪ್ರಮಾಣಪತ್ರ ಪಡೆದವರಿಗೆ ಮಣೆಹಾಕಿ ನಮ್ಮ ಪ್ರಾಮಾಣಿಕ ಸೇವೆಗೆ ಅವಮಾನ ಮಾಡುತ್ತಿದ್ದಾರೆ.
ನೆರೆಯ ರಾಜ್ಯಗಳು ಸೇವಾ ಭದ್ರತೆ ನೀಡಿ ಹಿರಿಯ ಅತಿಥಿ ಉಪನ್ಯಾಸಕರನ್ನು ಗೌರವಯುತವಾಗಿ ನೋಡಿಕೊಳ್ಳುತ್ತಿದೆ.
ಆದರೆ ಕರುಣೆಗೆ ಹೆಸರಾದ ಕರ್ನಾಟಕದ ಮಣ್ಣಿನ ಸರಕಾರ ನಿರ್ದಯಿ ನಿರ್ದಾರಗಳನ್ನು ತೆಗೆದುಕೊಂಡು ಕರುಣೆ,ಸೇವೆ,ಮಾನವೀಯತೆ,ಪ್ರಾಮಾಣಿಕತೆ,ಸಮಾನತೆ,ಸಾಮಾಜಿಕ ನ್ಯಾಯವೆಂಬ ಶಬ್ದಗಳಿಗೆ ಅವಮಾನ ಮಾಡುತ್ತಿದೆ.
ಕೂಡಲೆ ಸಂದರ್ಶನವನ್ನು ನಿಲ್ಲಿಸಿ ಸುದೀರ್ಘ ಸೇವೆ ಸಲ್ಲಿಸಿರುವ ಅತಿಥಿ ಉಪನ್ಯಾಸಕರನ್ನೇ ಮುಂದುವರೆಸದಿದ್ದರೆ ಉಪನ್ಯಾಸಕರ ಸರಣಿ ಆತ್ಮಹತ್ಯಗಳಿಗೆ ಸರಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಮನಿಯವರ ನೇತೃತ್ವದಲ್ಲಿ ಗದಗಿನಲ್ಲಿ ಕಳೆದ ಮೂರುದಿನಗಳಿಂದ ಅನಿರ್ಧಿಷ್ಠಾವಧಿ ಪ್ರತಿಭಟನೆ ನಡೆದಿದೆ.
ಅದಕ್ಕೆ ಬೆಲೆಕೊಡದೆ ಹೋದರೆ ಚಳಿಗಾಲದ ಅಧಿವೇಷನ ನಡೆಯುವ ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಅಲ್ಲೋಲಕಲ್ಲೋಲ ಸೃಷ್ಠಿಸಬೇಕಾಗುತ್ತದೆಂದು ಎಚ್ಚರಿಸಿದರು.

Leave a Reply

Your email address will not be published. Required fields are marked *