ತಾಳಿಕೋಟಿ: ಸಮೀಪದ ಮಿಣಜಗಿ ಗ್ರಾಮದ ದಿ.ಮಿಣಜಗಿ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘ ನಿ,ಇದರ ಐದು ವರ್ಷದ ಅವಧಿಯ ಆಡಳಿತ ಮಂಡಳಿ(2026-31) ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಂಘದ 11 ಜನರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಹಾಗೂ ನಂತರ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯ ಸಭೆಯಲ್ಲಿ ನಿರ್ದೇಶಕ ಎಂ.ಬಿ. ಬಾಗೇವಾಡಿ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಮತ್ತು ಬಿ.ಎಸ್.ಬಿರಾದಾರ ಉಪಾಧ್ಯಕ್ಷರಾಗಿ ಸರ್ವಾನುಮತದಿಂದ ಮರುಆಯ್ಕೆ ಆಗಿದ್ದಾರೆ. ಆಡಳಿತ ಮಂಡಳಿಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಬಿ.ಬಾಗೇವಾಡಿ ಅವರು ಮಾತನಾಡಿ ಸಂಘದ ಎಲ್ಲ ನಿರ್ದೇಶಕರು ನಮ್ಮಿಬ್ಬರ ಮೇಲೆ ಮೊದಲಿನಂತೆ ವಿಶ್ವಾಸವಿರಿಸಿ ಮತ್ತೇ ನಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ ಅವರ ವಿಶ್ವಾಸವನ್ನು ಉಳಿಸಿಕೊಂಡು ಎಲ್ಲರ ಸಹಕಾರದೊಂದಿಗೆ ಸಂಘವನ್ನು ಇನ್ನಷ್ಟು ಪ್ರಗತಿ ಪಥದತ್ತ ತೆಗೆದುಕೊಂಡು ಹೋಗಲು ಶಕ್ತಿ ಮೀರಿ ಪ್ರಯತ್ನಿಸುತ್ತೇವೆ ಎಂದರು. ಈ ಸಮಯದಲ್ಲಿ ಸಂಘದ ಆಡಳಿತ ಮಂಡಳಿಯ ನೂತನ ನಿರ್ದೇಶಕರಾದ ಬಿ.ಜಿ.ಬಿರಾದಾರ,ಎಸ್. ಟಿ.ಯಾಳವಾರ,ಎಸ್.ಸಿ.ಬಿರಾದಾರ, ಬಿ.ಎಸ್.ಬಿರಾದಾರ, ಬಿ.ಜೆ.ಪೂಜಾರಿ,ಎಲ್.ಆರ್.ಚವ್ಹಾಣ, ಟಿ.ಜಿ.ಬಶಟ್ಟಿ, ಮಹಿಳಾ ನಿರ್ದೇಶಕರಾದ ಬಿ.ಎಸ್.ಬಿರಾದಾರ, ಎನ್.ಕೆ.ಜಂಬಗಿ ಹಾಗೂ ಸಂಘದ ಸಿಬ್ಬಂದಿಗಳು ಮತ್ತಿತರರು ಇದ್ದರು.


