ಜಗವ ಕಾಣದ ಹಸುಗೂಸುಗಳ ಬಲಿ ತೆಗೆದುಕೊಳ್ಳುವುದಕ್ಕೋ? ಮಹಿಳೆಯರನ್ನು ಬಲಿ ತೆಗೆದುಕೊಳ್ಳುವುದಕ್ಕೋ? ವೃದ್ಧರನ್ನು ಬಲಿ ತೆಗೆದುಕೊಳ್ಳುವುದಕ್ಕೋ ?ಆಸ್ತಿಯನ್ನು ವಶಪಡಿಸಿಕೊಳ್ಳುವುದಕ್ಕೋ?ಸಾಮ್ರಾಜ್ಯವನ್ನು ನರ‍್ಮಾಣ ಮಾಡುವುದಕ್ಕೋ ? ಅಥವಾ ಸಾವನ್ನೇ ಗೆಲ್ಲುವುದಕ್ಕೋ ? ಎಂಬುದು ತಿಳಿಯದಾಗಿದೆ ಯಾಕೆಂದರೆ ಈ ಜಗತ್ತಿನಲ್ಲಿ ಯಾರೂ ಶಾಶ್ವತವಲ್ಲ ,ಯಾವುದೂ ಶಾಶ್ವತವಲ್ಲ ಹೆಣ್ಣಿಗಾಗಿ,
ಹೊನ್ನಿಗಾಗಿ, ಮಣ್ಣಿಗಾಗಿ ಬಡಿದಾಡಿದವರು ಎಂದೋ ನಾಶವಾಗಿ ಹೋಗಿದ್ದಾರೆ ಎಂಬ ಕಟು ಸತ್ಯವನ್ನು ಇಂದಿಗೂ ರ‍್ಥೈಸಿಕೊಳ್ಳದೆ ನಾನೇ ಎಲ್ಲಾ, ನನ್ನಿಂದಲೇ ಜಗತ್ತು ಎಂಬ ಅಹಂ ನ ಭ್ರಮೆಯಲ್ಲಿ ದುಸ್ಸಾಹಸ ಮಾಡುವವರಿಗೆ ಏನೆಂದು ಹೇಳಬೇಕು ಇದು ವಿರ‍್ಯಾಸದ ಸಂಗತಿಯಾಗಿದೆ.
ಹೌದು ಯಾವುದಕ್ಕಾಗಿ ಯುದ್ಧ ಈ ಜಗದಲ್ಲಿ ಮಹಾನ್ ಮಹಾನ್ ವ್ಯಕ್ತಿಗಳು ಬಂದು ಶಾಂತಿ ಸಾರಿದರು ಇನ್ನೂ ಹಡಗದ ಕ್ರೋಧ, ಕೋಪ, ಸಿಟ್ಟು, ದ್ವೇಷ ,ಅಸೂಯೆ, ನಾವು ನಾಗರೀಕರು ಎಂದು ಹೇಳಲು ನಾಚಿಕೆಯಾಗುವಂತಹ ವಿಷಯ
ಇದಾಗಿದೆ.
ಮದಮಸ್ಥರದಲ್ಲಿ ಯುದ್ಧ ಮಾಡುವವರಿಗೆ ಏನೆಂದು ಹೇಳಬೇಕು ಸಾಮ್ರಾಟ ಅಶೋಕ ಮಹಾನ್ ಚಕ್ರರ‍್ತಿ ಕ್ರಿಪೂ ೨೬೧ ರಲ್ಲಿ ಕಳಿಂಗ ಯುದ್ಧವನ್ನು ಮಾಡಿ ಕಳಿಂಗ ಯುದ್ಧದಲ್ಲಿ ಸಂಭವಿಸುವ ಸಾವು ನೋವುಗಳನ್ನು ನೋಡಿ ಮನಕುಲುಕಿ ಯುದ್ಧದಿಂದ ಏನನ್ನು ಜಯಿಸಲು ಸಾಧ್ಯವಿಲ್ಲ ಜಯಿಸಿದರೆ ಅದು ಸಾವು ಮಾತ್ರ ಎಂದು ತರ‍್ಮಾನಿಸಿ ಅಂದೇ ರ‍್ಮ ಯುದ್ಧವನ್ನು ಕೈಗೊಂಡ ವಿಚಾರವು ಗೊತ್ತಿದ್ದು ಗೊತ್ತಿಲ್ಲದಂತೆ ರ‍್ತನೆ ಮಾಡಿದರೆ ಏನು ರ‍್ಥ ? ಅದಕ್ಕೆ ಒಂದು ಸುಭಾಷಿತ ಬರುತ್ತದೆ ” ತಿಳಿದೂ ತಿಳಿದು,ತಿಳಿಯದ ಮರ‍್ಖನಿಗೆ ಹೇಳಲು ಯಾರಿಂದಲೂ ಸಾಧ್ಯವಿಲ್ಲ” ಎನ್ನುವಂತೆ ಎಲ್ಲಾ ಬಲ್ಲವರಿಗೆ ಹೇಳಲು ಯಾರಿಂದಲೂ ಸಾಧ್ಯವಿಲ್ಲ.
ಈ ಜಗತ್ತಿನಲ್ಲಿ ಎರಡು ಜಾಗತಿಕ ಮಹಾ ಯುದ್ಧಗಳಾದವು ೧೯೪೫ ಆಗಸ್ಟ್ ೬ ರಂದು ಹಿರೋಷಿಮಾದ ಮೇಲೆ ಆಗಸ್ಟ್ ೯ ರಂದು ನಾಗಸಕಿಯ ಮೇಲೆ ಅಣು ಬಾಂಬನ್ನು ಹಾಕಿದ್ದರಿಂದ ಸುಮಾರು ೨೫ ಮಿಲಿಯನ್ ಜನರು ಪ್ರಾಣ ಕಳೆದುಕೊಂಡರು, ಮತ್ತು ೫೦ ಮಿಲಿಯನ್ ಜನರು ಅಂಗವಿಕಲರಾದರು, ಮಿಲಿಯಗಟ್ಟಲೆ ಜನರು ಯುದ್ಧದ ನಂತರ ಹಸಿವು ಮತ್ತು ರೋಗಗಳಿಂದ ಮರಣ ಹೊಂದಿದರು, ಅಪಾರ ಸಂಖ್ಯೆಯಲ್ಲಿ ಮನೆ, ಕೈಗಾರಿಕೆಗಳು, ಸಾರಿಗೆ ಮತ್ತು ಸಂರ‍್ಕಗಳ ವ್ಯವಸ್ಥೆಗಳು ಹಾನಿಗೊಂಡವು ಇದು ಎರಡನೇ ಜಾಗತಿಕ ಯುದ್ಧದಿಂದಾದ ಪರಿಣಾಮ ಇಂತಹ ಅಮಾನವೀಯ ಘಟನೆ ನಡೆದು ಹೋಯಿತು ಆದುದರಿಂದ ಇಂತಹ ಘಟನೆ ಮತ್ತೆ ಎಂದೂ ನಡೆಯಬಾರದೆಂದು ೧೯೪೫ ಅಕ್ಟೋಬರ್ ೨೪ ರಂದು ವಿಶ್ವ ಸಂಸ್ಥೆ ಸ್ಥಾಪನೆಯಾಯಿತು ವಿಶ್ವಸಂಸ್ಥೆ ಸ್ಥಾಪನೆಯಾಗಿ ಇಡೀ ವಿಶ್ವಕ್ಕೆ ಶಾಂತಿಯನ್ನು ಸ್ಥಾಪಿಸಲು ಅಂದಿನಿಂದ ಇಂದಿನವರೆಗೂ ಪ್ರಯತ್ನಿಸುತ್ತಿದೆ ಆದರೆ ಇಂದಿನವರೆಗೂ ಮನುಷ್ಯನ ಮನಸ್ಸು ಬದಲಾಗುತ್ತಿಲ್ಲ ಮಾನವೀಯ ಮೌಲ್ಯಗಳು ಪ್ರತಿಯೊಬ್ಬ ವ್ಯಕ್ತಿಯಲ್ಲಿ ಬರಬೇಕು ಮಾನವರನ್ನು ಮಾನವರನ್ನಾಗಿ ಕಾಣುವ ಮನೋಭಾವನೆ ಎಲ್ಲಿಯವರೆಗೆ ಬರುವುದಿಲ್ಲವೋ ಅಲ್ಲಿಯವರೆಗೆ ಈ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯ ಎನ್ನುವುದು ಈಗ ನಡೆದ ಯುದ್ಧವೇ ಸಾಕ್ಷಿಯಾಗಿದೆ.
ಎರಡು ದೇಶಗಳ ,ಇಬ್ಬರು ವ್ಯಕ್ತಿಗಳ ಸ್ವರ‍್ಥಕ್ಕಾಗಿ ಯುದ್ಧಗಳು ನಡೆಯುತ್ತವೆ ಆದರೆ ಆ ಇಬ್ಬರು ವ್ಯಕ್ತಿಗಳ ಸ್ವರ‍್ಥದಿಂದ ಜನಸಾಮಾನ್ಯರ ಸಾವು ನೋವುಗಳಾಗುತ್ತವೆ ಯಾರ ತಪ್ಪು ಯಾರಿಗೆ ಶಿಕ್ಷೆ ? “ಎಮ್ಮೆಗೆ ಜ್ವರ ಬಂದರೆ ಕೋಣಕ್ಕೆ ಬರೆ ” ಎನ್ನುವಂತಾಗಿದೆ ಪರಿಸ್ಥಿತಿ ಇಬ್ಬರ ಸ್ವರ‍್ಥಕ್ಕಾಗಿ ಅದೆಷ್ಟೋ ಸಾವು ನೋವುಗಳು ಸಂಭವಿಸುತ್ತಿವೆ ಇದಕ್ಕೆ ಅಂತ್ಯ ಯಾವಾಗ ?
ಗೌತಮ ಬುದ್ಧ ಸಾರಿದ ಅಹಿಂಸೆಯ ತತ್ವ , ಏಸು ಸಾರಿದ ಪ್ರೀತಿ, ಶಾಂತಿ ಮಂತ್ರ, ಪೈಗಂಬರ್ ಸಾರಿದ ಕರುಣೆ, ಜಗಜ್ಯೋತಿ ಬಸವೇಶ್ವರರು ಸಾರಿದ “ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯ್ , ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯ್ ಕೂಡಲಸಂಗಮದೇವಯ್ಯ ಇವ ನಮ್ಮ ಮನೆಯ ಮಗನೆಂದೆನಿಸಯ್ಯ್ ” ಎನ್ನುವ ಇಂತಹ ಹಲವಾರು ವಿಚಾರಗಳು ವೇದಿಕೆಯ ಭಾಷಣಕ್ಕೆ ಸೀಮಿತವಾಗಿವೆ “ಹೇಳೋದು ಶಾಸ್ತ್ರ ತಿನ್ನೋದು ಬದನೆಕಾಯಿ”ಎನ್ನುವಂತಾಗಿದೆ ಇಂದಿನ ಪರಿಸ್ಥಿತಿ.
ನಾನೇ ಶ್ರೇಷ್ಠ ನನ್ನಿಂದಲೇ ಜಗತ್ತು ಈ ಜಗತ್ತುನ್ನು ನಾನೇ ಆಳಬೇಕು ಎಂಬ ಅಹಂನ್ನು ಬಿಡಬೇಕಾಗಿದೆ ಜಗತ್ತನ್ನೇ ಗೆಲ್ಲಬೇಕೆನ್ನುವ ಮಹತ್ವಕಾಂಕ್ಷಿ ಯಾದ ಅಲೆಕ್ಸಾಂಡರ್ ಮಹಾಶಯ ತನ್ನ ಸಾವಿನ ಸಂರ‍್ಭದಲ್ಲಿ ಕೆಲವೊಂದು ಮಾತುಗಳನ್ನು ಹೇಳುತ್ತಾನೆ ಏನೆಂದರೆ, ವೈದ್ಯನನ್ನು ಕರೆಯಿಸಿ ವೈದ್ಯನಿಗೂ ರ‍್ಥವಾಗಲಿ ಸಾವನ್ನು ಗೆಲ್ಲುವುದಕ್ಕೆ ಆಗುವುದಿಲ್ಲ ! ಎಂಬುದು ಹಾಗೆಯೇ ನನ್ನ ಶವವನ್ನು ತೆಗೆದುಕೊಂಡು ಹೋಗುವಾಗ ನಾನು ಇಲ್ಲಿಯವರೆಗೂ ಗಳಿಸಿದ ಹಣವನ್ನು ನನ್ನ ಶವದ ಹಿಂದೆ ತೂರಿಕೊಂಡು ಬನ್ನಿ ! ಮತ್ತು ನನ್ನ ಶವವನ್ನು ಶವಪೆಟ್ಟಿಗೆಯಲ್ಲಿಟ್ಟಾಗ ನನ್ನ ಎರಡು ಕೈಗಳು ಶವ ಪೆಟ್ಟಿಗೆಯಿಂದ ಹೊರ ಚಾಚಿರಬೇಕು ! ಯಾಕೆಂದರೆ ಈ ಜಗತ್ತಿಗೆ ನನ್ನಿಂದಾದರೂ ರ‍್ಥವಾಗಲಿ, ಗಳಿಸಿದ್ದೆಲ್ಲವನ್ನು ನಾನು ಇಲ್ಲಿಯೇ ಬಿಟ್ಟು ಬರಿಗೈಯಿಂದ ಹೋಗುತ್ತಿದ್ದೇನೆ ಎಂದು ಎಲ್ಲರಿಗೂ ರ‍್ಥವಾಗಲಿ “ಇರುವಾಗ ಎಲ್ಲಾ ಹೋಗುವಾಗ ಏನೂ ಇಲ್ಲ” ಎಂಬ ನೀತಿ ಈ ಜಗತ್ತಿಗೆ ರ‍್ಥವಾಗಲೆಂದು ಹೇಳಿದ ಅಲೆಕ್ಸಾಂಡರ್ ಮಾತನ್ನಾದರೂ ರ‍್ಥೈಸಿಕೊಂಡು ಯುದ್ಧ ಯಾತಕ್ಕೋ ? ಸಾವನ್ನೇ ಗೆಲ್ಲುವುದಕ್ಕೋ ! ಎಂಬುದನ್ನು ವಿರ‍್ಶಿಸಿಕೊಂಡು ಯುದ್ಧವನ್ನು ತ್ಯಾಗ ಮಾಡಿ ಮಾನವರು ಮಾನವರಾಗಿ ಬದುಕುವ ಗುಣ, ಶಕ್ತಿ-ಸಾರ‍್ಥ್ಯ ಪ್ರತಿಯೊಬ್ಬರಿಗೂ ಬರಲಿ “ಜಗದಲ್ಲಿ ಶಾಂತಿ ನೆಲೆಸಲಿ”….
ಸುಭಾಸ ರ‍್ವಾಪೂರು ಬರಹಗಾರರು, ಪತ್ರರ‍್ತರು ಸಿಂಧನೂರು.
