ಮಾನ್ವಿ: ಪಟ್ಟಣದ ತಹಶೀಲ್ದಾರ್ ಕಚೇರಿಯ ಅವರಣದಲ್ಲಿ ಗುರುವಾರ ತಹಶೀಲ್ದಾರ್ ಭೀಮರಾಯ ರಾಮಸಮುದ್ರ ಭಾರತದ ಜನಗಣತಿ 2027 ರ ಮಾನ್ವಿ ತಾಲೂಕಿನ ಗ್ರಾಮೀಣ ವಿಭಾಗದ ಮನೆಗಳ ಪಟ್ಟಿ ಮತ್ತು ಮನೆಗಣತಿ ಪ್ರಾರಂಭಕ್ಕೆ ಚಾಲನೆ ನೀಡಿ ಮಾತನಾಡಿ ಏ.1 ರಿಂದ ಏ.15 ರವರೆಗೆ ಸಾರ್ವಜನಿಕರಿಗೆ ತಮ್ಮ ಗಣತಿಯನ್ನು ತಾವೆ ಸ್ವಯಂ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿತು. ಮಾನ್ವಿ ತಾಲೂಕಿನ ಗ್ರಾಮೀಣ ವಿಭಾಗದಲ್ಲಿ 38 ಜನ ಗಣತಿ ಮೇಲ್ವೀಚಾರಕರ ಹಾಗೂ 239 ಗಣತಿದಾರರ ವ್ಯಾಪ್ತಿಯಲ್ಲಿ ಅಂದಾಜು 9 ಸಾವಿರಕ್ಕೂ ಹೆಚ್ಚು ನಾಗರಿಕರು ತಮ್ಮ ಮೋಬೈಲ್ ಗಳನ್ನು ಬಳಸಿಕೊಂಡು ತಾವೆ ಸ್ವಯಂ ಗಣತಿಯನ್ನು ದಾಖಲಿಸಿಕೊಂಡಿದ್ದಾರೆ. ಭಾರತದ ಜನಗಣತಿ 2027ರ ಮೊದಲ ಹಂತದಲ್ಲಿ ಏ.16ರಿಂದ ಮೇ. 15 ರವರೆಗೆ ಒಟ್ಟು 30 ದಿನಗಳಕಾಲ ಮಾನ್ವಿ ತಾಲೂಕಿನ ಗ್ರಾಮೀಣ ವಿಭಾಗದ ಮನೆಗಳ ಪಟ್ಟಿ ಮತ್ತು ಮನೆಗಣತಿಯನ್ನು ಗಣತಿದಾರರು ಮಾಡಿಕೊಂಡು ಮನೆಗಳಲ್ಲಿ ವಾಸ ಮಾಡುತ್ತಿರುವವರ 34 ಅಂಶಗಳ ಮಾಹಿತಿಯನ್ನು ಪಡೆದುಕೊಂಡು ದಾಖಲಿಸಿಕೊಳ್ಳುವ ಮೂಲಕ ಜನಗಣತಿಯನ್ನು ಯಶಸ್ವಿಗೊಳಿಸುವಂತೆ ಕೋರಿದರು.
ಮಾನ್ವಿ ತಾಲೂಕಿನ ಗ್ರಾಮೀಣ ವಿಭಾಗದ ಗಣತಿ ಮೇಲ್ವೀಚಾರಕರು ಹಾಗೂ ಗಣತಿದಾರರು ಭಾಗವಹಿಸಿದರು.
ಮಾನ್ವಿ: ಪಟ್ಟಣದ ತಹಶೀಲ್ದಾರ್ ಕಚೇರಿಯ ಅವರಣದಲ್ಲಿ ತಹಶೀಲ್ದಾರ್ ಭೀಮರಾಯ ರಾಮಸಮುದ್ರ ರವರು ಗ್ರಾಮೀಣ ಭಾಗದ ಮನೆಗಳ ಪಟ್ಟಿ ಮತ್ತು ಮನೆಗಣತಿಗೆ ಚಾಲನೆ ನೀಡಿದರು.

