ಉತ್ತರಾಖಂಡ ರಾಜ್ಯದ ಶುಬ್ರುತ್ ಕುಮಾರ್ ಬಿಸ್ವಾಸ್ ನೇತೃತ್ವದಲ್ಲಿ ಬಂಗಾಲಿ ಆರ್.ಎಚ್.ಕ್ಯಾಂಪ್ 3ರಲ್ಲಿ ಸಭೆ ನಡೆಸಲಾಯಿತು. ದೇಶದಾದ್ಯಂತ ಬಂಗಾಲಿ ಜನರನ್ನು ಜಾಗೃತಿಗೊಳಿಸುವ ಹಾಗೂ ಹಕ್ಕುಗಳನ್ನು ಪಡೆಯುವ ಉದ್ದೇಶದಿಂದ ಸಭೆಗಳನ್ನು ನಡೆಸಿ ನಮ್ಮ ಜನತೆಯನ್ನು ಜಾಗೃತಿಗೊಳಿಸುತ್ತಿದ್ದೇವೆ ಎಂದರು.
ಈ ದೇಶವನ್ನು ವಿಭಜನೆ ಮಾಡು ಅಂತ ಯಾರು ಹೇಳಿಲ್ಲ. ನಾವು ಕೂಡ ಈ ದೇಶದ ನಿವಾಸಿಗಳೆ ಸ್ವಾಮಿ, ನಮಗೆ ಪೌರತ್ವ ಪಡೆಯಲು, ಮತದಾರರಾಗಿ ಹಕ್ಕು ಪಡೆಯಲು ಹಾಗೂ ಜಾತಿ ಪ್ರಮಾಣ ಪತ್ರ ಪಡೆಯಲು ಸೇರಿದಂತೆ ಇತರೆ ಹಕ್ಕು ಪಡೆಯಲು ಕೇಳಿದಾಗ ನಮ್ಮ ಪೂರ್ವಿಕರ ದಾಖಲಾತಿ ಕೇಳುತ್ತಿದ್ದೀರಿ, ಈ ದಾಖಲಾತಿ ಕೇಳುವವರು ಯಾರು ಇದ್ದಾರೋ ಅವರು ಮೊದಲು ದಾಖಲಾತಿ ಕೊಡಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಗೃಹ ಸಚಿವ ಲಾಲಕೃಷ್ಣ ಅಡ್ವಾಣಿ ಅವರು ಯಾವ ದಾಖಲಾತಿ ಕೊಟ್ಟಿದ್ದಾರೆ. ಅವರಿಗೆ ಒಂದು ಕಾನೂನು? ಪ್ರಶ್ನಿಸಲು ಹಿಂಜರಿಯುವ ಜನರಿಗೆ ಮತ್ತೊಂದು ಕಾನೂನಾ ? ಈ ಭಾರತ ದೇಶದ ಸ್ವತಂತ್ರ ಹೋರಾಟಗಾರರಲ್ಲಿ ನಮ್ಮ ಬಂಗಾಲಿ ಜನರು ಇದ್ದಾರೆ.
ನಾವು ಯಾವ ಪಕ್ಷದ ವಿರುದ್ದವು ಅಲ್ಲ, ಪರವು ಮಾತನಾಡಲು ಬಂದಿಲ್ಲ. ನಮ್ಮ ಹಕ್ಕುಗಳನ್ನು ಪಡೆಯಲು ಜನತೆಯನ್ನು ಜಾಗೃತಿಗೊಳಿಸಲು ಬಂದಿದ್ದೇವೆ, ಇನ್ನೂ ನಾವು ಪ್ರಶ್ನೆ ಮಾಡದೇ ಹೋದರೆ ಮುಂದಿನ ತಲೆಮಾರಿನ ನಮ್ಮ ಬಂಗಾಲಿ ಜನತೆ ನಮ್ಮನ್ನು ಕ್ಷಮಿಸುವುದಿಲ್ಲ. ಈ ಕಾರಣದಿಂದಾಗಿ ಇದೇ ಸೋಮವಾರ ಏ.20 ರಂದು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟಿಸಿ ನಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗೋಣ ಎಂದು ಬಂಗಾಲಿ ನಿವಾಸಿಗರಿಗೆ ಕರೆ ಕೊಟ್ಟರು.
ಇದೇ ವೇಳೆ: ಸುನೀಲ್ ಮೇಸ್ತ್ರಿ, ಸಾಗರ್ ಮಂಡಲ್, ಸರೋಜಿತ್ ಗಾಯಲ್, ಪ್ರಣಬ್ ಬಾಲ, ಸಾಧನ್ ಸನ್, ಪ್ರದೀಪ್ ದಾಸ್, ಧರ್ಮೇಂದ್ರ ಬಿಸ್ವಾಸ್, ನಿತಾಹಿ, ಪ್ರಮೋಥ ಮೇಸ್ತ್ರಿ, ಪ್ರಫುಲ್ ಬಿಸ್ವಾಸ್, ಸಮೀರ ರಾಯ್, ಸೇರಿದಂತೆ ಬಂಗಾಲಿ ಕ್ಯಾಂಪಿನ ನೂರಾರು ಜನರು ಉಪಸ್ಥಿತರಿದ್ದರು.

