ಬಳಗಾನೂರು :2021 ರ ಉಪ ಚುನಾವಣೆಯಲ್ಲಿ ಕಾಂಗ್ರೇಸ್ ಮುಳಗುವ ಹಡಗು ಎಂದು ಬಹಳಷ್ಟು ಜನ ಗೇಲಿ ಮಾಡಿದ್ದರು. ರಾಜ್ಯದ ಬಿಜೆಪಿಯ ಮುಂಖ್ಯ ಮಂತ್ರಿ ಯಾದಿಯಾಗಿ ಅವರ ಸಚಿವ ಸಂಪೂಟದ ಸಹುದ್ದೋಗಳು ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಯೊಂದು ಗ್ರಾಪಂ ಗೆ ಒಬ್ಬ ಸಚಿವರಂತೆ ಬೀಡುಬಿಟ್ಟಿದ್ದರು ಆದರೆ ಮಸ್ಕಿ ಕ್ಷೇತ್ರದ ಮತದಾದರು ಕ್ಷೇತ್ರದ ರೈತರ ಮಗನೆಂದೆ ಹೆಸರಾದ ಆರ್. ಬಸನಗೌಡ ತುರ್ವಿಹಾಳರಿಗೆ ಆರ್ಶಿವಾದ ಮಾಡಿ ರಾಜ್ಯ ಹಾಗೂ ರಾಷ್ಟ್ರ ನಾಯಕರ ಕಣ್ಣು ತೆರೆಸಿದ ಮಸ್ಕಿ ವಿಧಾನಸಬಾ ಕ್ಷೇತ್ರ ಕಾಂಗ್ರೇಸ್‌ಗೆ ಪುರ್ನಜನ್ಮ ನೀಡಿದ ಕೇತ್ರವಾಗಿದೆ ಎಂದು ಪಟ್ಟಣದ ಕಾಂಗ್ರೇಸ್ ಮುಖಂಡ ಮಸ್ಕಿ ಗ್ರಾಮೀಣ ಪ್ರಚಾರ ಸಮಿತಿಯ ಅಧ್ಯಕ್ಷರಾದ ಸಂಜಯಕುಮಾರ ಜೈನ್ ತಿಳಿಸಿದರು.36 ಸಾವಿರ ಅಧಿಕ ಮತಗಳ ಅಂತರದಿಂದ ಗೆದ್ದು ಆಡಳಿತ ಸರಕಾರಕ್ಕೆ ಶೇಡ್ಡು ಹೋಡೆದ ರೈತ ನಾಯಕ ಆರ್. ಬಸನಗೌಡ ತುರ್ವಿಹಾಳರಾಗಿದ್ದಾರೆ. 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಸಹ ಮತ್ತೊಮ್ಮೆ ಭರ್ಜರಿ ಜಯ ಸಾಧಿಸುವುದರ ಮೂಲಕ ಮಸ್ಕಿ ವಿಧಾನಸಭಾಕ್ಷೇತ್ರವನ್ನು ಕಾಂಗ್ರೇಸ್ ಭದ್ರಕೋಟೆ ಎಂದು ಸಾಭಿತು ಪಡಿಸಿದ ರೈತನಾಯಕನಿಗೆ ಸಚಿವ ಸ್ಥಾನ ನೀಡಿ ಗೌರವಿಸಿವದು ಹೈಕಮಾಂಡ್ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.

