ರಾಯಚೂರು ಮಾರ್ಚ್ 06 (ಕರ್ನಾಟಕ ವಾರ್ತೆ): ರಾಯಚೂರು ನಗರದ ಸೀಮಾಂತರದಲ್ಲಿ ಬರುವ ವಾರ್ಡ್ ನಂ. 05ರ ವೆಂಕಟೇಶ್ವರ ಕೌಂಟಿ, ನಿವೇಶನ ಮುನ್ಸಿಪಾಲ್ ನಂ. 1-11-66/05/47,48,49&50 ರಲ್ಲಿ ಶ್ರೀ ಮೊಹಮ್ಮದ್ ಶಬ್ಬಿರ್ ತಂದೆ ಹಮೀದ್ ಪಾಟೇಲ್ ಇವರು ಧಾರ್ಮಿಕ ಉದ್ದೇಶಕ್ಕಾಗಿ ಪ್ರೇಯರ್ ಹಾಲ್ ಕಟ್ಟಡವನ್ನು ನಿರ್ಮಾಣ ಮಾಡಲು ಅರ್ಜಿ ಸಲ್ಲಿಸಿರುತ್ತಾರೆ.
ಈ ಸ್ಥಳದಲ್ಲಿ ನಕ್ಷೆ ಪ್ರಕಾರ ಕಟ್ಟಡ ಪರವಾನಿಗೆ ಕೋರಿ ಅರ್ಜಿ ಸಲ್ಲಿಸಿರುವುದರಿಂದ ಇದಕ್ಕೆ ಅಕ್ಕ-ಪಕ್ಕದ ಹಾಗೂ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆ ಇದ್ದಲ್ಲಿ ಈ ನೊಟೀಸ್ ಪ್ರಕಟಿಸಿದ (15) ದಿನಗಳ ಒಳಗಾಗಿ ದಾಖಲೆಳೊಂದಿಗೆ ಈ ಕಾರ್ಯಾಲಯಕ್ಕೆ ದೂರು ಸಲ್ಲಿಸತಕ್ಕದ್ದು, ಅವಧಿ ಮುಗಿದ ಮೇಲೆ ಆಕ್ಷೇಪಣೆ ತಕರಾರು ಸಲ್ಲಿಸಿದ್ದಲ್ಲಿ ಅದನ್ನು ಪರಿಗಣಿಸಲಾಗುವುದಿಲ್ಲವೆಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
