ರಾಯಚೂರು ಮಾರ್ಚ್ 05 (ಕರ್ನಾಟಕ ವಾರ್ತೆ): 2022ರಲ್ಲಿ ಪ್ರಥಮ ಮುದ್ರಣಗೊಂಡು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಯಾದ ಪುಸ್ತಕಗಳ ಪಟ್ಟಿಯನ್ನು ಇಲಾಖೆ ಅಧಿಕೃತ ವೆಬ್ ಸೈಟ್ dpl.karnataka.gov.in ನಲ್ಲಿ ದಿನಾಂಕ: 02-03-2026 ರಂದು ಪ್ರಕಟಿಸಲಾಗಿದೆ.
ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಯಾದ ಪುಸ್ತಕಗಳ ಲೇಖಕರು, ಲೇಖಕ-ಪ್ರಕಾಶಕರು, ಪ್ರಕಾಶಕರು ಮತ್ತು ಪುಸ್ತಕ ಮಾರಾಟಗಾರರ ಪುಸ್ತಕಗಳಲ್ಲಿ ಶೀರ್ಷಿಕೆ, ಲೇಖಕರ ಹೆಸರು, ಪ್ರಕಾಶಕರ ಹೆಸರು, ಮುಖಬೆಲೆ ಮತ್ತು ನಿಗದಿತ ಬೆಲೆಯಲ್ಲಿ ಹೆಚ್ಚು ಅಥವಾ ಕಡಿಮೆಯಾಗಿದ್ದಲ್ಲಿ, ಪುಸ್ತಕದ ಅಳತೆ, ಪುಟಸಂಖ್ಯೆ ಹಾಗೂ ಇತರೆ ಯಾವುದೇ ತಾಂತ್ರಿಕ ವ್ಯತ್ಯಾಸಗಳಿದ್ದಲ್ಲಿ ಅಧಿಕೃತ ಮಾಹಿತಿ/ದಾಖಲಾತಿಗಳೊಂದಿಗೆ ದಿನಾಂಕ: 16-03-2026ರ ಸಂಜೆ 5.30ರೊಳಗಾಗಿ ಆಯುಕ್ತರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪರ, 4ನೇ ಮಹಡಿ, ಡಾ.ಬಿ.ಆರ್.ಅಂಬೇಡ್ಕರ್ ವೀದಿ, ಬೆಂಗಳೂರು-560001 ಇವರಿಗೆ ಲಿಖಿತವಾಗಿ ಆಕ್ಷೇಪಣೆ ಸಲ್ಲಿಸಬಹುದು. ನಿಗದಿತ ಅವಧಿಯ ನಂತರ ಬರುವ ಮನವಿಯನ್ನು ಪರಿಗಣಿಸಲಾಗುವುದಿಲ್ಲ. ಮತ್ತು ಏಕಪಕ್ಷೀಯವಾಗಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿಗಳಾದ ಸಿದ್ಧಾರ್ಥ ಎ.ಭಾವಿಕಟ್ಟೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

