ನ್ಯೂಡೆಲ್ಲಿಯಲ್ಲಿ ಮಾ.6 ರಿಂದ 14ರವರೆಗೆ ವರ್ಲ್ಡ್ ಪ್ಯಾರಾ ಅಥ್ಲೆಟಿಕ್ ಗ್ರಾಂಡ್ ಪ್ರಿಕ್ಸ್ ಗೆ ಸಿಂಧನೂರಿನ ಸರ್ಕಾರಿ ಪದವಿ ಮಹಾ ವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಶಿವ.ಕೆ ಅವರು, ಈ ಚಾಂಪಿಯನ್ ಶಿಪ್ ಗೆ ಇಂಟರ್-ನ್ಯಾಷನಲ್ ಟೆಕ್ನಿಕಲ್ ಅಫೀಶಿಯಲ್ ಆಗಿ ಆಯ್ಕೆಯಾಗಿದ್ದಾರೆ ಎಂದು ಪ್ಯಾರಾ ಒಲಂಪಿಕ್ ಕಮಿಟಿ ಆಫ್ ಇಂಡಿಯಾದಿಂದ ಪತ್ರ ಬಂದಿದೆ ಎಂದು ಪ್ರಾಂಶುಪಾಲರು ತಿಳಿಸಿದರು.
ಆಯ್ಕೆಯಾದ ದೈಹಿಕ ಶಿಕ್ಷಕ ಶಿವ.ಕೆ ಅವರಿಗೆ ಕಾಲೇಜು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರು, ಸದಸ್ಯರು, ಹಾಗೂ ಪ್ರಾಂಶುಪಾಲರು, ಭೋದಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ.

