ತಾಳಿಕೋಟೆ: ಪಟ್ಟಣದ
ಎಸ್.ಕೆ. ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಮಂಗಳವಾರ ಮಾರ್ಕೆಟ್ ಮೇಳ ಎಂಬ ವಿನೂತನ ವಿವಿಧ ವಸ್ತುಗಳ ಮತ್ತು ವಾಹನಗಳ ಮಾರಾಟ ಮತ್ತು ಪ್ರದರ್ಶನ
ಮೇಳವನ್ನು ಕಾಲೇಜು ಆವರಣದಲ್ಲಿ ಆಯೋಜಿಸಿದ್ದರು, ಪ್ರಥಮ ಬಾರಿಗೆ ನಡೆದ ಈ ಮೇಳದ ಉದ್ಘಾಟನೆಯನ್ನು ವೀರಶೈವ ವಿದ್ಯಾವರ್ಧಕ ಸಂಘದ ಚೇರಮನ್ ವ್ಹಿ.ಸಿ.ಹಿರೇಮಠ ರಿಬ್ಬನ್ ಕತ್ತರಿಸಿ ನೆರವೇರಿಸಿದರು. ಈ ಮೇಳದಲ್ಲಿ ವಿದ್ಯಾರ್ಥಿಗಳು ರುಚಿಕರವಾದ ಆಹಾರ ಪದಾರ್ಥಗಳ ಮಳಿಗೆಗಳು, ಆಕರ್ಷಕವಾದ ಬಟ್ಟೆ ಮಳಿಗೆಗಳು, ಮನರಜನೆಯ ಆಟಗಳು ಮತ್ತು ವಿಜಯಪುರದ ಪ್ರಸಿದ್ಧ ಕಾರಶೋರಮಗಳಾದ ಹ್ಯುಂಡೈ, ರೆನಾಲ್ಟ್‌, ಎಮ್.ಜಿ ಹೆಕ್ಟರ, ಮಾರುತಿ ಸೂಜುಕಿ, ಕೀಯಾ ಕಂಪನಿಗಳ ಕಾರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು ದ್ವಿಚಕ್ರ ವಾಹನ‌ ಬಜಾಜ್ ಮತ್ತು ಇವ್ಹಿ ಸ್ಕೂಟರ್ ವಾಹನಗಳು ಲಭ್ಯ ಇದ್ದವು. ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಥಳೀಯ ನಾಗರೀಕರು ನಿರೀಕ್ಷೆಗೂ ಮೀರಿ ಸೇರಿದರು. ಒಟ್ಟು 33 ಮಳಿಗೆಗಳನ್ನು ಹಾಕಲಾಗಿತ್ತು. ವಿದ್ಯಾರ್ಥಿಗಳ ಉದ್ಯಮಶೀಲತೆ ಹಾಗೂ ನವೀನ ಚಿಂತನೆಯನ್ನು ಉತ್ತೇಜಿಸುವುದು ಮೇಳದ ಉದ್ದೇಶವಾಗಿತ್ತು. ವಿ.ವೀ.ಸಂಘದ ಚೇರಮನ್ನರಾದ ವಿ.ಸಿ.ಹಿರೇಮಠ ಮೇಳವನ್ನು ಉದ್ಘಾಟಿಸಿದರು ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಎಮ್.ಎಸ್. ಸರಶೆಟ್ಟಿ ಸಹ ಕಾರ್ಯದರ್ಶಿಗಳು ಮತ್ತು ಬಿ.ಇಡಿ.ಕಾಲೇಜು ಚೇರಮನ್ ಕೆ.ಎಸ್.ಮುರಾಳ, ಪ.ಪೂ.ಕಾಲೇಜು ಚೇರಮನ್ ಎಮ್.ಆರ್ ಕತ್ತಿ, ನಿರ್ದೇಶ ಸಿ.ಆರ್.ಕತ್ತಿ , ಪ್ರಾಥಮಿಕ ಶಾಲೆಯ ಚೇರಮನ್ ಮುರಗೇಶ ವಿರಕ್ತಮಠ, ಬಾಲಕಿಯರ ಪ್ರೌಢಶಾಲೆಯ ಚೇರಮನ್ ಆಯ್.ಬಿ.ಬಿಳೇಬಾವಿ, ಬಾಲಕರ ಪ್ರೌಢಶಾಲೆಯ ಚೇರಮನ್ ಎಮ್.ಸಿ.ಕತ್ತಿ ಹಾಗೂ ನಿರ್ದೇಶಕರು ಸದಸ್ಯರು ಇದ್ದರು. ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಸ್ನೇಹಾ ನಾವದಗಿ,ರಮೇಶ ಜಾಧವ, ಈರಮ್ಮ ಲಕ್ಕಪ್ಪಗೋಳ, ಸಲ್ಮಾ ವಾಲಿಕಾರ ಪ್ರಾಚಾರ್ಯರಾದ ಡಾ. ದಯಾನಂದ ಮೂಗಡ್ಲಿಮಠ ಹಾಗೂ ಮಹಾವಿದ್ಯಾಲಯದ ಸಿಬ್ಬಂದಿವರ್ಗದವರು ಪದವಿ ಪೂರ್ವ ಕಾಲೇಜು ಪ್ರಾಚಾರ್ಯರಾದ ಕಿಶೋರಕುಮಾರ, ಬಾಲಕಿಯರ ಪ್ರೌಡಶಾಲೆಯ ಮುಖ್ಯೋಪಾಧ್ಯಾಯರಾದ ಡಾ.ಅನಿಲಕುಮಾರ ಇರಾಜ ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *