ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ: ರಂಗೋಲಿ ಸ್ಪರ್ಧೆ- ಆರೋಗ್ಯ ಇಲಾಖೆಯ ಮಹಿಳಾ ಸಿಬ್ಬಂದಿಯಿಂದ ಅರಳಿದ ಮಹಿಳೆಯರ ಆತ್ಮಗೌರವದ ಚಿತ್ತಾರಗಳು,
ರಾಯಚೂರು:ಮಾ,10: ಜಗತ್ತಿನಾದ್ಯಂತ ಮಹಿಳಾ ದಿನಾಚರಣೆಯು ಹೆಣ್ಣು ಮಕ್ಕಳ ಆಸ್ಥಿತ್ವ, ಗುರಿ ಸಾಧನೆಯನ್ನು ಜಗದೆಲ್ಲಡೆ ಪಸರಿಸುವಂತೆ ಮಾಡುವ ಅಧ್ಭುತ ದಿನವಾಗಿದೆ. ಇಡಿ ಮಾರ್ಚ್ ತಿಂಗಳು ಮಹಿಳೆಯರ ಕಾರ್ಯ ಚಟುವಟಿಕೆಗಳನ್ನು ಗುರ್ತಿಸುವ ಕಾರ್ಯ ನಿರಂರವಾಗಿ ನಡೆಯುವುದು. ಹೆಣ್ಣು ತಾಯಿಯಾಗಿ, ಸಹೋದರಿಯಾಗಿ, ಸ್ನೇಹಿತೆಯಾಗಿ, ಪತ್ನಿಯಾಗಿ, ಮಗಳಾಗಿ…
