ಸಂಶೋಧನಾ ವಿಷಯವು ಸಾಮಾಜಿಕವಾಗಿ ಪ್ರಸ್ತುತ ಮತ್ತು ಸಂದರ್ಭೋಚಿತವಾಗಿರಬೇಕು. ಸಂಶೋಧನಾ ವಿಷಯವನ್ನು ಆಯ್ಕೆ ಮಾಡುವಾಗ ಸಂಶೋಧಕರು ಅದರ ಪ್ರಸ್ತುತತೆ ಮತ್ತು ಸಮಾಜದಲ್ಲಿರುವ ಸಮಸ್ಯೆ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಟಿ.ಆರ್.ಸುಬ್ರಹ್ಮಣ್ಯ ಹೇಳಿದರು.ಕಲಬುರಗಿ ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಕಚೇರಿ ಸೋಮವಾರ ಆಯೋಜಿಸಿದ್ದ ವಿದ್ವತ್ಪೂರ್ಣ ಬರವಣಿಗೆಯಲ್ಲಿ ಸಂಶೋಧನೆಯ ಪ್ರಸ್ತುತತೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಂಶೋಧನೆ ಪ್ರಮುಖ ಪಾತ್ರ:ಐತಿಹಾಸಿಕವಾಗಿ ಸಂಶೋಧನೆಯು ಪ್ರಪಂಚದಾದ್ಯAತ ಸಾಮಾಜಿಕ ಸುಧಾರಣೆ ಮತ್ತು ಕಾನೂನು ಬೆಳವಣಿಗೆ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ೧೬ನೇ ಶತಮಾನದ ವಿದ್ವಾಂಸರ ಸಂಶೋಧನಾ ಕಾರ್ಯಗಳು ಜಗತ್ತಿನ ಪ್ರಮುಖ ಕಾನೂನು ಸುಧಾರಣೆಗಳಿಗೆ ಕೊಡುಗೆ ನೀಡಿವೆ. ಸಂಶೋಧನೆಯು ನಿಜವಾದ ಸಾಮಾಜಿಕ ಸವಾಲುಗಳನ್ನು ಪರಿಹರಿಸಬೇಕು. ಅರ್ಥಪೂರ್ಣ ನೀತಿ ಮತ್ತು ಕಾನೂನು ಬದಲಾವಣೆಗೆ ಕೊಡುಗೆ ನೀಡಬೇಕು. ಸಂಪನ್ಮೂಲಗಳ ಕೊರತೆಯ ಹೊರತಾಗಿಯೂ, ನಮ್ಮ ಹಿಂದಿನ ಸಂಶೋಧಕರು ಪ್ರಾಮಾಣಿಕತೆ ಮತ್ತು ಬದ್ಧತೆಯೊಂದಿಗೆ ಪರಿಣಾಮಕಾರಿ ಕೃತಿ ರಚಿಸಿದ್ದಾರೆ. ವಿದ್ವಾಂಸರು ಹಿಂದಿನ ಸಂಶೋಧಕರೊAದಿಗೆ ಧನಾತ್ಮಕ ಭಿನ್ನಾಭಿಪ್ರಾಯ ಹೊಂದದ ಹೊರತು ಹೊಸ ಜ್ಞಾನ ಸೃಷ್ಠಿಸಲು ಸಾಧ್ಯವಿಲ್ಲ. ಭಾರತದಲ್ಲಿ ಕ್ರಿಯಾಶೀಲ ಸಂಶೋಧನಾ ಕಾರ್ಯಗಳು ನಿರ್ಭಯಾ ತಿದ್ದುಪಡಿ ಕಾಯ್ದೆ ಮತ್ತು ಕಾನೂನು ನೆರವು, ಪರಿಹಾರ ಮತ್ತು ಕಾನೂನುಗಳ ಪ್ರಾಯೋಗಿಕ ಅನುಷ್ಠಾನದಂತಹ ಕಾನೂನು ಸುಧಾರಣೆಗಳಿಗೆ ಕಾರಣವಾಗಿವೆ ಎಂದು ಹೇಳಿದರು.ಸುಸ್ಥಿರ ಚಿಂತನೆ ಚರ್ಚೆ:ಪ್ರೊ.ಸುಬ್ರಹ್ಮಣ್ಯ ಅವರು ಅಂತರ-ಪೀಳಿಗೆಯ ಸಮಾನತೆಯ ಪರಿಕಲ್ಪನೆ ಮತ್ತು ಸಂಶೋಧನೆಯಲ್ಲಿ ಸುಸ್ಥಿರ ಚಿಂತನೆಯ ಪ್ರಾಮುಖ್ಯತೆ ಕುರಿತು ಚರ್ಚಿಸಿ, ಜಲಪೈಗುರಿಯಲ್ಲಿ ನಡೆದ ವಾಮಾಚಾರಕ್ಕೆ ಸಂಬAಧಿಸಿದ ಘಟನೆಗಳನ್ನು ಅವರು ಮನವೊಲಿಸುವ ಮತ್ತು ಸಾಮಾಜಿಕವಾಗಿ ಪ್ರಭಾವ ಬೀರುವ ಸಂಶೋಧನೆಯ ಉದಾಹರಣೆಯಾಗಿ ಉಲ್ಲೇಖಿಸಿದರು. ಪ್ರಸ್ತುತ ಹಾಗು ಪ್ರಮುಖ ಜಾಗತಿಕ ಸಮಸ್ಯೆಗಳ ಕುರಿತು ಅಧ್ಯಯನ ಕೈಗೊಳ್ಳಲು ವಿದ್ವಾಂಸರನ್ನು ಪ್ರೋತ್ಸಾಹಿಸಿದರು. ವಿದ್ವಾಂಸರು ಸಂಶೋಧನಾ ಕರ್ತೃತ್ವವನ್ನು ಅಭಿವೃದ್ಧಿಪಡಿಸಲು, ಅಸ್ತಿತ್ವದಲ್ಲಿರುವ ವ್ಯವಸ್ಥೆ ಪ್ರಶ್ನಿಸಲು, ಅನ್ವೇಷಿಸಲು ಮತ್ತು ವಿಮರ್ಶಾತ್ಮಕವಾಗಿ ವಿಶ್ಲೇಷಿಸುವಂತೆ ಒತ್ತಾಯಿಸಿದರು. ಗೌರವ ಅತಿಥಿಯಾಗಿದ್ದ ಸಿಯುಕೆಯ ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸಿಯುಕೆ ಕಾನೂನು ಅಧ್ಯಯನ ನಿಕಾಯದ ಡೀನ್ ಪ್ರೊ.ಬಸವರಾಜ್ ಎಂ. ಕುಬಕಡ್ಡಿ ಮಾತನಾಡಿ, ಕಾನೂನು ಸಂಶೋಧನೆಯು ಸಾಮಾಜಿಕ ಅಗತ್ಯಗಳಿಗೆ ಕೊಡುಗೆ ನೀಡಬೇಕು. ಕಲಬುರಗಿ ಪ್ರದೇಶದಲ್ಲಿ ೧೧ನೇ ಶತಮಾನದಲ್ಲಿ ಜನಿಸಿದ ಕಾನೂನು ವಿದ್ವಾಂಸರಾದ ಸಂತ ವಿಜ್ಞಾನೇಶ್ವರರು ಸಮಾಜ ಸುಧಾರಕರಾಗಿದ್ದು, ಸಮಾಜದ ಸುಧಾರಣೆಗೆ ಶ್ರಮಿಸಿದರು. ೧೨ನೇ ಶತಮಾನದಲ್ಲಿ ಭಗವಾನ್ ಬಸವೇಶ್ವರರು ತಮ್ಮ ವಚನಗಳ ಮೂಲಕ ಆ ಕಾಲದ ಸಾಮಾಜಿಕ ಅನಿಷ್ಠವಾಗಿದ್ದ ತಾರತಮ್ಯ ನಿರ್ಮೂಲನೆ ಮಾಡಲು ಪ್ರಯತ್ನಿಸಿದರು. ಪ್ರತಿಯೊಬ್ಬ ಕಾನೂನು ವಿದ್ವಾಂಸರು ಸಮಾಜದ ಸುಧಾರಣೆಗೆ ಕೊಡುಗೆ ನೀಡುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದರು.ವಿದ್ಯಾರ್ಥಿ ಕಲ್ಯಾಣ ಇಲಾಖೆಯ ಸಹಾಯಕ ಡೀನ್ ಡಾ.ಮಲ್ಲಿಕಾರ್ಜುನ್ ಹೂಗರ್ ಸ್ವಾಗತಿಸಿದರು, ಡಾ. ಕೆ.ಎಂ.ಕೃಷ್ಣ ಶೇಖರ್ ಶರ್ಮಾ ನಿರೂಪಿಸಿದರು, ಡಾ.ಜಗದೀಶ್ ಚಂದ್ರ ಟಿ.ಜಿ. ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಮುಖ್ಯ ವಾರ್ಡನ್ ಡಾ. ಬಸವರಾಜ್ ಎಂ.ಎಸ್. ವಂದಿಸಿದರು. ಶಿಕ್ಷಕರು, ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ”
ಸಂಶೋಧನೆಯ ಗುಣಮಟ್ಟ ಬಹಳ ಮುಖ್ಯ. ಸಂಶೋಧನೆಯಲ್ಲಿ ಗುಣಮಟ್ಟ, ಸ್ವಂತಿಕೆ ಮತ್ತು ಪ್ರಭಾವಶಾಲಿ ಪಾಂಡಿತ್ಯದ ಮೇಲೆ ಕೇಂದ್ರೀಕರಿಸುವುದು ಇಂದಿನ ತುರ್ತು ಅಗತ್ಯ.

Leave a Reply

Your email address will not be published. Required fields are marked *