ಲಿಂಗಸಗೂರು, ಮಾ.11 – ತಾಲೂಕಿನ ಗುಂಡಸಾಗರದ 15 ವರ್ಷದ ವಿದ್ಯಾರ್ಥಿ ಕಾರ್ತಿಕ್ ತಂದೆ ಬಸವರಾಜಪ್ಪ ಸೂಡಿ ನಿಗೂಢವಾಗಿ ಸಾವಿಗೀಡಾಗಿದ್ದು, ಈ ಸಂಬಂಧ ಅದೇ ಗ್ರಾಮದ ಮೂವರ ವಿರುದ್ಧ ಲಿಂಗಸಗೂರು ಠಾಣೆಯಲ್ಲಿ ಕೊಲೆಯ ಪ್ರಕರಣ ದಾಖಲಾಗಿದೆ. ಕಾರ್ತಿಕ್ ಒಂಬತ್ತನೇ ತರಗತಿ ಓದುತ್ತಿದ್ದ ಭಾನುವಾರ ಮದುವೆ ಕಾರ್ಯಕ್ರಮವೊಂದರಲ್ಲಿ ಊಟ ಮುಗಿಸಿದ್ದ ಕಾರ್ತಿಕ್, ಲಿಂಗಸಗೂರಿಗೆ ಹೋಗಿ ಬರುವುದಾಗಿ ತಿಳಿಸಿದ್ದ. ಆದರೆ, ಕಾರ್ತಿಕ್‌ನನ್ನು ಆತನ ಗೆಳೆಯರಾದ ಮುತ್ತಪ್ಪ, ವಿನೋದ ಹಾಗೂ ಸಾಹಿಲ್ ಸೇರಿ ಮೋಟಾರ್ ಸೈಕಲ್ ಮೇಲೆ ಕರೆದೊಯ್ದು, ಆತನನ್ನು ಕೊಲೆ ಮಾಡಿ, ಶವವನ್ನು ಕರಡಕಲ್ಲ ಕೆರೆ ಹತ್ತಿರ ಬಿಸಾಕಿದ್ದಾರೆಂದು ಬಾಲಕನ ತಂದೆ ಆರೋಪಿಸಿದ್ದಾರೆ. ಕರಡಕಲ್ ಕೆರೆ ಬಳಿ ಮಧ್ಯಾಹ್ನದ ಅವಧಿಯಲ್ಲಿ ನಡೆದಿರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದ್ದು ಕಾರ್ತಿಕ್ ತಂದೆ ಬಸವರಾಜ ಅಮೀನಪ್ಪ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆಂದು ತಿಳಿದು ಬಂದಿದೆ .

Leave a Reply

Your email address will not be published. Required fields are marked *