Month: February 2026

ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ

ಕವಿತಾಳ : ಸಮೀಪದ ವಟಗಲ್ ಗ್ರಾಮದಲ್ಲಿ ಈಶ್ವರ ದೇವಸ್ಥಾನ ದಲ್ಲಿ ಶಿವನಿಗೆ ಮಹಾರುದ್ರಾಭಿಷೇಕ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಗ್ರಾಮದ ಯುವಕರೆಲ್ಲರೂ ಒಂದಾಗಿ ಇಲ್ಲಿನ ಈಶ್ವರ ದೇವಸ್ಥಾನದಲ್ಲಿ ಸತತ 4ನೇ ವರ್ಷದ “ಮಹಾರುದ್ರಾಭಿಷೇಕ” ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ನೆರವೇರಿಸಿದರು. ಮುಂಜಾನೆಯಿಂದ…

ಶರಣಬಸವೇಶ್ವರ ರಥೋತ್ಸವ ಅದ್ದೂರಿ

ತಾಲ್ಲೂಕಿನ ನಿಲೋಗಲ್ಲ ಗ್ರಾಮದ ಶರಣಬಸವೇಶ್ವರರ 49ನೇ ವರ್ಷದ ಜಾತ್ರೋತ್ಸವ ಕಾರ್ಯಕ್ರಮ ಶನಿವಾರ ಅದ್ದೂರಿಯಾಗಿ ನೆರವೇರಿತು. ಪ್ರಯುಕ್ತ ದೇವಸ್ಥಾನದಲ್ಲಿ ವಿವಿಧ ಪೂಜೆ, ರುದ್ರಾಭಿಷೇಕಚ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನೂತನ ರಥಕ್ಕೆ ಚಾಲನೆ ನೀಡಿದ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ‘ರಥ…

ಕರ್ನಾಟಕದ ಹವಾಮಾನ ವರದಿ

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕೆಲ ದಿನಗಳಿಂದ ಒಣ ಹವೆಯ (Weather Forecast) ವಾತಾವರಣವಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಇಂದೂ ಮುಂದುವರೆಯಲಿದ್ದು, ದಕ್ಷಿಣ ಒಳನಾಡಿನಲ್ಲಿಯೂ ಶುಷ್ಕ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಹತ್ತಾರು ದಿನಗಳಿಂದ ರಾಜ್ಯದಲ್ಲಿ ಒಣ…

ಮಾಜಿ ಯೋಧರಿಂದ ಪುಲ್ವಾಮಾದಲ್ಲಿ 2019ರಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್‌ಪಿಎಫ್ ಯೋಧರಿಗೆ ಗೌರವ ನಮನ

ರಾಯಚೂರು : ಪುಲ್ವಾಮಾದಲ್ಲಿ 2019ರಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್‌ಪಿಎಫ್ ಯೋಧರಿಗೆ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಶನಿವಾರ ಮಾಜಿ ಯೋಧರು ಗೌರವ ನಮನ ಸಲ್ಲಿಸಿದರು.ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ಮಾಜಿ…

ಪಾರ್ವತಿ-ಪರಮೇಶ್ವರ ಕಲ್ಯಾಣೋತ್ಸವ

ರಾಯಚೂರು: ಜಿಲ್ಲೆಯಾದ್ಯಂತ ಮಹಾಶಿವರಾತ್ರಿಯ ಸಡಗರ ಮನೆಮಾಡಿದ್ದು, ಐತಿಹಾಸಿಕ ಹಿನ್ನೆಲೆಯುಳ್ಳ ರಾಯಚೂರಿನ ಚಂದ್ರಮೌಳೇಶ್ವರ ದೇವಾಲಯದ ಆವರಣದಲ್ಲಿ ಪಾರ್ವತಿ ಪರಮೇಶ್ವರ ಕಲ್ಯಾಣೋತ್ಸವವು ಅತ್ಯಂತ ಭಕ್ತಿಭಾವ ಹಾಗೂ ಸಂಭ್ರಮ ಸಡಗರದಿಂದ ನೆರವೇರಿತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆದ ಈ ದಿವ್ಯ ಕಲ್ಯಾಣೋತ್ಸವವನ್ನ ಸಾವರಾರು ಭಕ್ತರು ಕಣ್ತುಂಬಿಕೊಂಡರು.ಮೆರವಣಿಗೆಯ…

ಶಿವರಾತ್ರಿ ಅಂಗವಾಗಿ ಮಂತ್ರಾಲಯಕ್ಕೆ ಜನಸಾಗರ

ರಾಯಚೂರು: ನಾಡಿನೆಲ್ಲೆಡೆ ಮಹಾ ಶಿವರಾತ್ರಿ ಅಂಗವಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ರಾಯಚೂರು ಜಿಲ್ಲೆಯ ಮಂತ್ರಾಲಯದಲ್ಲಿ ಭಕ್ತಿಭಾವದಿಂದ ಮಹಾ ಶಿವರಾತ್ರಿ ಆಚರಣೆ ನಡೆಯಿತು.ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥ ಶ್ರೀಗಳ ನೇತೃತ್ವದಲ್ಲಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಶಿವಲಿಂಗಕ್ಕೆ ಅಭಿಷೇಕ, ಅಲಂಕಾರ…

ಕಾರುಣ್ಯಾಶ್ರಮಕ್ಕೆ “ಸದ್ಗುರು ಶ್ರೀ ವಿರೂಪಾಕ್ಷೇಶ್ವರ ಕೃಪಾಭೂಷಣ” ಪ್ರಶಸ್ತಿ ಪ್ರದಾನ

ಮಾನ್ವಿ: ಮಹಾಶಿವರಾತ್ರಿಯ ಗಾರಿಗೆ ಜಾತ್ರಾ ಮಹೋತ್ಸವದ ಅಂಗವಾಗಿ ಮಾನ್ವಿ ನಗರದ ಕಲ್ಮಠದಲ್ಲಿ ಭಕ್ತಿಭಾವಭರಿತವಾಗಿ ವಿಶೇಷ ಸಮಾರಂಭ ಜರುಗಿತು. ಸಮಾಜಸೇವೆಯಲ್ಲಿ ಗಮನಾರ್ಹ ಕೊಡುಗೆ ನೀಡುತ್ತಿರುವ ಸಿಂಧನೂರು ನಗರದ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮಕ್ಕೆ “ಸದ್ಗುರು ಶ್ರೀ ವಿರೂಪಾಕ್ಷೇಶ್ವರ ಕೃಪಾಭೂಷಣ”…

ಪಡಿತರ ಅಕ್ರಮ ಸಾಗಾಟ-ಲಾರಿ ವಶಕ್ಕೆ

ಕವಿತಾಳ:- ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟಮಾಡಲಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣವನ್ನು ಕವಿತಾಳ ಪೊಲೀಸರು ಪತ್ತೆ ಹಚ್ಚಿ ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಇಂದು ಬೆಳಗಿನ ಜಾವ ೪ಗಂಟೆಯ ಸುಮಾರಿಗೆ ಹಾಲಾಪೂರ ಗ್ರಾಮದ ಮನೆಯ ಮುಂದೆ…

ಮಸ್ಕಿ ತಾಲೂಕಿನ ವಿವಿಧೆಡೆ ಸಂತ ಸೇವಾಲಾಲ್ ಜಯಂತಿ ಆಚರಣೆ

ಮಸ್ಕಿ: ಪಟ್ಟಣದಲ್ಲಿ ತಾಲೂಕಾಡಳಿತದಿಂದ ಸಂತ ಸೇವಾಲಾಲ್ ೨೮೭ನೇ ಜಯಂತಿಯನ್ನು ಭಾನುವಾರ ಆಚರಿಸಲಾಯಿತು. ತಹಸೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕಾಡಳಿತದಿಂದ ಸಂತ ಸೇವಾಲಾಲ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಜಯಂತಿ ಆಚರಿಸಿದರು. ಬಂಜಾರ ಸಮಾಜದಿಂದ ಮುದಗಲ್ ಕ್ರಾಸ್‌ನಲ್ಲಿರುವ ಸಂತ ಸೇವಾಲಾಲ್ ವೃತ್ತದ ನಾಮಫಲಕಕ್ಕೆ…

ಶ್ರದ್ಧಾಭಕ್ತಿಯಿಂದ ಮಹಾಶಿವರಾತ್ರಿ ಆಚರಣೆ

ಮಸ್ಕಿ : ಪದ್ಮಶಾಲಿ (ನೇಕಾರ) ಸಮಾಜದ ಕುಲದೇವರಾಗಿರುವ ಹಾಗೂ ಶಿವನ ಮಹಾನ್ ಭಕ್ತನಾಗಿದ್ದ ಶ್ರೀ ಭಕ್ತ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಭಕ್ತಿಭಾವದಿಂದ ಮತ್ತು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಭಕ್ತರ ಸಂಚಾರ ಹೆಚ್ಚಾಗಿದ್ದು, ವಿಶೇಷ ಪೂಜೆ, ಅಭಿಷೇಕ, ಪುಷ್ಪಾರ್ಚನೆ,…