ಕವಿತಾಳ : ಸಮೀಪದ ವಟಗಲ್ ಗ್ರಾಮದಲ್ಲಿ ಈಶ್ವರ ದೇವಸ್ಥಾನ ದಲ್ಲಿ ಶಿವನಿಗೆ ಮಹಾರುದ್ರಾಭಿಷೇಕ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಗ್ರಾಮದ ಯುವಕರೆಲ್ಲರೂ ಒಂದಾಗಿ ಇಲ್ಲಿನ ಈಶ್ವರ ದೇವಸ್ಥಾನದಲ್ಲಿ ಸತತ 4ನೇ ವರ್ಷದ “ಮಹಾರುದ್ರಾಭಿಷೇಕ” ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ನೆರವೇರಿಸಿದರು.
ಮುಂಜಾನೆಯಿಂದ ಈಶ್ವರನಿಗೆ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ ಹಾಗೂ ಬಿಲ್ವಾರ್ಚನೆಗಳನ್ನು ಮಾಡಲಾಯಿತು. ಸ್ವಾಮೀಜಿ ಗಳ ಸಮ್ಮುಖದಲ್ಲಿ ಹನ್ನೊಂದು ಬಾರಿ ರುದ್ರಾಭಿಷೇಕವನ್ನು ಪಠಿಸುವ ಮೂಲಕ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು.
ವಟಗಲ್ ಗ್ರಾಮದ ಯುವಕರು ಕಳೆದ ನಾಲ್ಕು ವರ್ಷಗಳಿಂದ ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದು, ದೇವಸ್ಥಾನದ ಅಲಂಕಾರದಿಂದ ಹಿಡಿದು ಪ್ರಸಾದ ಎಲ್ಲಾ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು.
ಭಕ್ತರು ಆಗಮಿಸಿ ಈಶ್ವರನ ದರ್ಶನ ಪಡೆದರು.
“ನಮ್ಮ ಗ್ರಾಮದ ಶಾಂತಿ ಮತ್ತು ಸಮೃದ್ಧಿಗಾಗಿ ಯುವಕರೆಲ್ಲರೂ ಸೇರಿ ಪ್ರತಿ ವರ್ಷದಂತೆ ಈ ಬಾರಿಯೂ 4ನೇ ವರ್ಷದ ಮಹಾರುದ್ರಾಭಿಷೇಕವನ್ನು ಹಮ್ಮಿಕೊಂಡಿದ್ದೇವೆ. ಹಿರಿಯರ ಮಾರ್ಗದರ್ಶನ ಹಾಗೂ ಗ್ರಾಮಸ್ಥರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ,” ಎಂದು ಯುವಕರು ಈ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿದರು

