Category: ಜಿಲ್ಲಾ

ರಾಯಚೂರು ಉತ್ಸವದಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿ ಶಾಸಕ ತುರುವಿಹಾಳ ಕರೆ

ಮಸ್ಕಿ : ಬುದುವಾರ ಮದ್ಯಾಹ್ನ ಮಸ್ಕಿಯ ತಾಲೂಕಾ ಪಂಚಾಯ್ತಿಯ ಸಭಾಂಗಣದಲ್ಲಿ ಎಡೆದೊರೆ ನಾಡು ರಾಯಚೂರು ಉತ್ಸವ 2026 ರ ಪೂರ್ವಬಾವಿ ಸಭೆಯನ್ನು ನಡೆಸಲಾಯಿತು. ಅದರ ಅಧ್ಯಕ್ಷತೆಯನ್ನು ವಹಿಸಿದ್ದ ಮಸ್ಕಿ ಶಾಸಕ ಆರ್,ಬಸನಗೌಡ ತುರುವಿಹಾಳ ಮಾತನಾಡಿ ರಾಯಚೂರು ಉತ್ಸವ ಇದು ನಮ್ಮ ಉತ್ಸವ…

ಈಡಿಗರ ಬೇಡಿಕೆಗಳನ್ನು ರಾಜ್ಯ ಸರಕಾರ ನಿರ್ಲಕ್ಷ್ಯ ಮಾಡಿದರೆ ಉಗ್ರ ಹೋರಾಟ : ಪ್ರಣಾವಾನಂದ ಸ್ವಾಮೀಜಿ

ಅರಕೇರಾ : ರಾಜ್ಯ ಸರ್ಕಾರ ಈಡಿಗ ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸಲು ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರಣಾವನಂದ ಸ್ವಾಮೀಜಿ ಅವರು ಹೇಳಿದರು. ಅವರು ಅರಕೇರಾ ಪಟ್ಟಣದ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ಆರ್ಯ ಈಡಿಗ…

ಹಟ್ಟಿ ಚಿನ್ನದ ಗಣಿಯ ರಹೇಮತ್ ಫೌಂಡೇಶನ್ ನಿಂದ ಕಾರುಣ್ಯಾಶ್ರಮದಲ್ಲಿ ಹಾಸಿಗೆ ಹೊದಿಕೆ ವಿತರಣೆ ರಹೇಮತ್ ಫೌಂಡೇಶನ್ ಹಟ್ಟಿ ಚಿನ್ನದಗಣಿಯ ಪದಾಧಿಕಾರಿಗಳು ಕಾರುಣ್ಯಾಶ್ರಮಕ್ಕೆ ಭೇಟಿ ಕಾರುಣ್ಯಾಶ್ರಮವು ಕಲ್ಯಾಣ ಕರ್ನಾಟಕದ ಸ್ವರ್ಗದ ತಾಣವಾಗಿದೆ – ರಾಜ್ ಮಹಮ್ಮದ್

ಸಿಂಧನೂರು — ಲಿಂಗಸೂಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯ ರಹೇ ಮತ್ ಫೌಂಡೇಶನ್ ನ ಪದಾಧಿಕಾರಿಗಳು ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ…

ಪೊಲೀಸ್ ಠಾಣೆಗೆ ಎಸ್‌ಪಿ ಅರುಣಾಂಕ್ಷು ಗಿರಿ ಭೇಟಿ

ಲಿಂಗಸಗೂರು.ಜ.13 – ಪಟ್ಟಣದ ಪೊಲೀಸ್ ಠಾಣೆಗೆ ನೂತನ ಎಸ್‌ಪಿ ಅರುಣಾಂಕ್ಷು ಗಿರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು. ರಾತ್ರಿ ಗಸ್ತು ಸಮಯದಲ್ಲಿ ಎಮ್‌ಓಬಿ, ಬೀಗ ಹಾಕಿದ ಮನೆಗಳ ಮೇಲೆ…

ರಾಯಚೂರು ಜಿಲ್ಲಾ ಉತ್ಸವ-2026ಕ್ಕೆ ಕವಿತೆ ಕಳುಹಿಸಲು ಜನವರಿ 14 ಕೊನೆಯ ದಿನ

ರಾಯಚೂರು ಜನವರಿ 13 (ಕರ್ನಾಟಕ ವಾರ್ತೆ): 2026ರ ಜನವರಿ 29, 30 ಮತ್ತು 31ರಂದು ರಾಯಚೂರಿನಲ್ಲಿ ಜಿಲ್ಲಾಡಳಿತದಿಂದ ನಡೆಯಲಿರುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ನಿಮಿತ್ತ ಕವಿಗೋಷ್ಠಿ ನಡೆಸಲು ರಾಯಚೂರು ಜಿಲ್ಲಾಡಳಿತವು ರಾಯಚೂರು ಜಿಲ್ಲಾ ವ್ಯಾಪ್ತಿಯಲ್ಲಿನ ಕವಿಗಳಿಂದ ಸ್ವರಚಿತ ಕವಿತೆಗಳನ್ನು…

ಕಾರ್ಡಿಯಾಲಜಿಸ್ಟ್ ಹಾಗೂ ಇಎನ್‌ಟಿ ತಜ್ಞರ ನೇಮಕಕ್ಕೆ ಕರವೇ ಸ್ವಾಭಿಮಾನಿ ಸೇನೆ ಒತ್ತಾಯ

ಲಿಂಗಸಗೂರ : ಜ 14 . ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತಕ್ಷಣವೇ ಹೃದಯ ರೋಗ ತಜ್ಞರು ಕಾರ್ಡಿಯಾಲಜಿಸ್ಟ್ ಹಾಗೂ ಕಿವಿ–ಮೂಗು–ಗಂಟಲು ( ಇಎನ್‌ಟಿ ) ತಜ್ಞರನ್ನು ನೇಮಕ ಮಾಡಬೇಕೆಂದು ಕರವೇ ಸ್ವಾಭಿಮಾನಿ ಸೇನೆ ತಾಲೂಕ ಅಧ್ಯಕ್ಷ ಜಿಲಾನಿ ಪಾಶ ಆರೋಗ್ಯ ಸಚಿವರಿಗೆ…

ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನ ವೇತನ ಸಹಿತ ರಜೆ ಸೌಲಭ್ಯ

ರಾಯಚೂರು ಜನವರಿ 13 (ಕರ್ನಾಟಕ ವಾರ್ತೆ): ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯವನ್ನು ಉದ್ಯೋಗದಾತರು ಪಡೆಯಬೇಕು ಎಂದು ಕಲಬುರಗಿ ಪ್ರಾದೇಶಿಕ ಉಪ ಕಾರ್ಮಿಕ…

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕ್ರೀಡಾಪಟುಗಳಿಂದ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

ರಾಯಚೂರು ಜನವರಿ 13 (ಕರ್ನಾಟಕ ವಾರ್ತೆ): ಅಂತರಾಷ್ಟಿಯ, ರಾಷ್ಟ್ರ ಮತ್ತು ರಾಜ್ಯ ಮಟ್ಟದ ತಂಡಗಳನ್ನು ಪ್ರತಿನಿಧಿಸಿ ಸರ್ಕಾರದಿಂದ ಅಂಗೀಕೃತವಾದಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ ಸಹಾಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 2025-26ನೇ…

ಜನವರಿ 19ರಂದು ಜಿಲ್ಲಾಡಳಿತದಿಂದ ಮಹಾಯೋಗಿ ವೇಮನ ಜಯಂತಿ

ರಾಯಚೂರು ಜನವರಿ 13 (ಕರ್ನಾಟಕ ವಾರ್ತೆ): ಇಲ್ಲಿನ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜನವರಿ 19ರ ಬೆಳಿಗ್ಗೆ…

ಜನವರಿ 16ರಂದು ಮಾಡಿವಾಳ ಮಾಚಿದೇವ ಜಯಂತಿ ಪೂರ್ವಭಾವಿ ಸಭೆ

ರಾಯಚೂರು ಜನವರಿ 13 (ಕರ್ನಾಟಕ ವಾರ್ತೆ): ಜಿಲ್ಲಾಡಳಿತದ ವತಿಯಿಂದ ಫೆಬ್ರವರಿ 1ರಂದು ಮಾಡಿವಾಳ ಮಾಚಿದೇವ ಜಯಂತಿ ನಡೆಯಲಿದ್ದು, ಈ ಜಯಂತಿ ಅಂಗವಾಗಿ ಜನವರಿ 16ರ ಮಧ್ಯಾಹ್ನ 3.30ಗಂಟೆಗೆ ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ…