ಮಾನ್ವಿ : ಪಟ್ಟಣದ ಶ್ರೀ ಉದ್ಬವ ಆಂಜನೇಯ ಸ್ವಾಮಿ ದೇವಸ್ಥಾನ ಅವರಣದಲ್ಲಿ ಮಾನ್ವಿ ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ಆಯೋಜಿಸಲಾದ ಬೃಹತ್ ಹಿಂದೂ ಶೋಭಾಯಾತ್ರೆಗೆ ಶ್ರೀ ವಿರೂಪಾಕ್ಷ ಪಂಡೀತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಅವರು ಚಾಲನೆ ನೀಡಿ ಆಶೀರ್ವಚನ ನೀಡಿದರು. ಹಿಂದೂ ಸಂಸ್ಕೃತಿ, ಪರಂಪರೆ ಮತ್ತು ಧಾರ್ಮಿಕ ಐಕ್ಯತೆಯ ಪ್ರತೀಕವಾಗಿ ಈ ಶೋಭಾಯಾತ್ರೆ ಅತ್ಯಂತ ವೈಭವದಿಂದ ನಡೆಯಿತು.
ಶ್ರೀ ಉದ್ಬವ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಪ್ರಾರಂಭವಾದ ಶೋಭಾಯಾತ್ರೆ ಛತ್ರಪತಿ ಶಿವಾಜಿ ವೃತ್ತ, ಮಹರ್ಷಿ ವಾಲ್ಮೀಕಿ ವೃತ್ತ ಹಾಗೂ ಬಸವ ವೃತ್ತ ಮಾರ್ಗವಾಗಿ ಟಿಎಪಿಸಿಎಂಸಿ ಆವರಣ ತಲುಪಿತು. ಯಾತ್ರೆಯಲ್ಲಿ ಚಂಡಿ ವಾದ್ಯ, ನೀರಮಾನ್ವಿ ಡೊಳ್ಳುಕುಣಿತ, ಕೋಲಾಟ, ನಂದಿ ಕೋಲು ಕುಣಿತ, ಮರಗೋಲು ಮತ್ತು ಹಗಲುವೇಷ ಕಲಾತಂಡಗಳು ಸೇರಿದಂತೆ ವಿವಿಧ ಜನಪದ ಕಲಾತಂಡಗಳು ಭಾಗವಹಿಸಿ ಸಂಭ್ರಮ ಹೆಚ್ಚಿಸಿದರು.
ಕಾರ್ಯಕ್ರಮದಲ್ಲಿ ಕರೆಗುಡ್ಡ ಶ್ರೀ ಮಹಾಂತೇಶ್ವರ ಮಠದ ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಚೀಕಲಪರ್ವಿ ಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು, ಅಮರೇಶ್ವರ ಮಠದ ಶ್ರೀ ತೋಂಟದಾರ್ಯ ಮಹಾಸ್ವಾಮಿಗಳು, ಬಾಗಲವಾಡ ಶಿವಯ್ಯಸ್ವಾಮಿಗಳು, ಸುವರ್ಣಗಿರಿ ಮಠದ ಶಂಕರಯ್ಯಸ್ವಾಮಿಗಳು, ಮಾಜಿ ಸಂಸದ ಬಿ.ವಿ. ನಾಯಕ, ಮಾಜಿ ಶಾಸಕರಾದ ಬಸವನಗೌಡ ಬ್ಯಾಗವಾಟ ಹಾಗೂ ಗಂಗಾಧರನಾಯಕ, ಭಾರತೀಯ ಜನತಾ ಪಕ್ಷದ ಮಾನ್ವಿ ಮಂಡಲ ಅಧ್ಯಕ್ಷ ವೀರಭದ್ರಗೌಡ ಭೋಗವತಿ, ಶರಣೆಗೌಡ ನಕ್ಕುಂದಿ, ಮಾನ್ವಿ ಹಿಂದೂ ಸಮ್ಮೇಳನ ಸಮಿತಿ ಅಧ್ಯಕ್ಷ ನೀಲಕಂಠಪ್ಪ, ಶ್ರೀ ನಗರೇಶ್ವರ ಆರ್ಯವೈಶ್ಯ ಮಂಡಳಿಯ ತಾಲೂಕು ಅಧ್ಯಕ್ಷ ಆರ್. ಮುತ್ತುರಾಜ್ ಶೆಟ್ಟಿ, ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಹರಿಹರಪಾಟೀಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಾನ್ವಿ ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಯುವಕರು ಶೋಭಾ ಯಾತ್ರೆಯಲ್ಲಿ ಭಾಗವಹಿಸಿ ಧಾರ್ಮಿಕ ಉತ್ಸಾಹ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *