ಕವಿತಾಳ:`ಹನ್ನರಡನೇ ಶತಮಾನದ ಶರಣರಲ್ಲಿ ಅತ್ಯಂತ ಕ್ರಾಂತಿಕಾರಿ ಶರಣರಾದ ಮಡಿವಾಳ ಮಾಚಿದೇವರು ಅವರನ್ನು ವಚನ ಸಾಹಿತ್ಯದ ರಕ್ಷಕರು ಎಂದು ಕಲರೆಯಲಾಗಿದೆ, ಅವರ ಕಾಯಕ ನಿಷ್ಟೆ, ಕ್ರಾಂತಿಕಾರಿ ಮನೋಭಾವನೆಯಿಂದ ಸಮಾಜದಲ್ಲಿನ ಓರೆಕೊರೆಗಳನ್ನು ತಿದ್ದುವಲ್ಲಿ ಮತ್ತು ವಚನ ಸಾಹಿತ್ಯಗಳ ರಕ್ಷಣೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ ಶರಣರು ಇವರಾಗಿದ್ದರು’ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕಿರಿಲಿಂಗಪ್ಪ ಕವಿತಾಳ ಹೇಳಿದರು.
ಅವರು ಇಂದು ಪಟ್ಟಣ ಪಂಚಾಯತಿಯಲ್ಲಿ ಹಮ್ಮಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿಲ್ಲಿ ಭಾಗವಹಿಸಿ ಮಾತನಾಡಿದರು.
`ರಾಜ ಬಿಜ್ಜಳನ ದುರಾಡಳಿದಿಂದ ಅಂದಿನ ಶರಣರ ಮೇಲೆನ ದೌರ್ಜನ್ಯವನ್ನು ತಡೆಗಟ್ಟುವಲ್ಲಿ ಮತ್ತು ಸಮಾಜದಲ್ಲಿ ಭಾವೈಕ್ಯತೆಯನ್ನು ಮೂಡಿಸುವಲ್ಲಿ ಕ್ರಾಂತಿಕಾರಿ ವಚನಗಳ ಮೂಲಕ ಮತ್ತು ತಮ್ಮ ದೈರ್ಯದಿಂದ ವಚನ ಸಾಹಿತ್ಯಗಳನ್ನು ರಕ್ಷಣೆ ಂಆಡಿದ ಕೀರ್ತಿ ಇವರಿಗೆ ಸಲ್ಲುತ್ತದೆ’ ಎಂದರು.
ಮಡಿವಾಳ ಮಾಚಿದೇವ ಸಮೀತಿಯ ತಾಲ್ಲೂಕ ಸದಸ್ಯ ದೇವರಾಜ ಮಡಿವಾಳ ಮಾತನಾಡಿ `ಮಾಚಿದೇವರು ಅನುಭವ ಮಂಟಪದಲ್ಲಿ ಆಗಿನ ಕಾಲದಲ್ಲಿಯೇ ಕ್ರಾಂತಿಕಾರಿ ಮನೋಭಾವನೆಗಳನ್ನು ಹೊಂದಿದ ಶರಣರಾಗಿದ್ದು ಸಮಾಜದಲ್ಲಿನ ಅಂಕುಡೊಕುಗಳನ್ನು ಮತ್ತು ಸಮಾಜದಲ್ಲಿನ ಕೊಳೆಯನ್ನು ತೊಳೆಯುವ ಮೂಲಕ ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಿದ ಮಹಾನ್ ಶರಣರಲ್ಲಿ ಒಬ್ಬರು’ ಎಂದರು.
ದಲಿತ ಮುಖಂಡ ಯಾಕೂಬ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮಲ್ಲಪ್ಪ ಬಸಾಪೂರ ಮಾತನಾಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದ್ಯರಾದ ಮಲ್ಲಿಕಾರ್ಜುನಗೌಡ, ನಾಮನಿರ್ದೇಶನ ಸದ್ಯರಾದ ಅಯ್ಯಪ್ಪತೋಳ, ಅಯ್ಯಪ್ಪ ನಿಲೋಗಲ್, ಮೌನೇಶ ನಾಯಕ್ ದೊರೆ, ಮುಖಂಡರಾದ ತಿಪ್ಪಯ್ಯಸ್ವಮಿ, ಯಮನಪ್ಪ ದಿನ್ನಿ, ಕರಿಯಪ್ಪ ಅಡ್ಡೆ, ಕರಿಯಪ್ಪ ತೋಳ, ಯಲ್ಲಪ್ಪ ಮಾಡಗಿರಿ, ಹನುಮಂತ ಅರಕೇರಿ, ಈರಣ್ಣ ಕೆಳಗೇರಿ, ಮೌನೇಶ,ಚಾಂದಪಾಷಾ ಹಾಗೂ ಮಡಿವಾಳ ಸಮಾಜದ ಮುಖಂಡರಾದ ಸಣ್ಣಕರಿಯಪ್ಪ, ಯಮನೂರಪ್ಪ, ವೆಂಕಟೆಶ್ ಫೋಟೋ ಸ್ಟುಡಿಯೋ, ಶೇಖರಪ್ಪ, ಉಮೇಶ್, ಅಮರೇಶ, ವೀರೇಶ, ರಮೆಶ, ಅಮರೇಶ, ವೆಂಕಟೇಶ್, ಶಿವಕುಮಾರ, ಪ್ರದೀಪಕುಮಾರ, ನಾಗರಾಜ, ಮಾಚಿದೇವ, ಆಂಜಿನೆಯ್ಯ, ಯಮನೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನಂತರ ಮಡಿವಾಳ ಸಮಾಜದ ವತಿಯಿಂದ ನೂತನ ಪಟ್ಟಣಪಂಚಾಯತಿ ಅಧ್ಯಕ್ಷರ ಪರವಾಗಿ ಅವರ ಪತಿ ತಿಪ್ಪಯ್ಯಸ್ವಾಮಿ ಮತ್ತು ಉಪಾದ್ಯಕ್ಷರ ಪತಿ ಓವಣ್ಣ ಕಡತಲ್, ನಾಮನಿರ್ದೆಶಿತ ಸದಸ್ಯರಾದ ಅಯ್ಯಪ್ಪ ನಿಲೋಗಲ್, ಮೌನೇಶ ನಾಯಕ್ ದೊರೆ, ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಯಮನಪ್ಪ ದಿನ್ನಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

Leave a Reply

Your email address will not be published. Required fields are marked *