ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜನಪರ ಬಣ ತಾ,ಘಟಕ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್ ರವರ ಮೂಲಕ ಮನವಿ ಸಲ್ಲಿಸಿ ಜಿಲ್ಲಾಧ್ಯಕ್ಷರಾದ ರಂಗರಾವ್ ಕುಲಕರ್ಣಿ ಮಾತನಾಡಿ ಪಟ್ಟಣದ ಪುರಸಭೆ ವತಿಯಿಂದ ಪಟ್ಟಣದ ವಿವಿಧ ವಾರ್ಡ ಗಳಲ್ಲಿ ಸಾರ್ವಜನಿಕರಿಗೆ ಕಸವನ್ನು ಸಂಗ್ರಹಿಸುವುದಕ್ಕೆ ನೀಡುವುದಕ್ಕೆಂದು ಅಂದಾಜು 21ಸಾವಿರದ ನಾಲ್ಕನೂರ ಐವತ್ತು ಡಸ್ಟ್ ಬಿನ್ ಗಳನ್ನು 32 ಲಕ್ಷ ವೆಚ್ಚದಲ್ಲಿ ಖರೀದಿ ಮಾಡಬೇಕಾಗಿರುವ ಡಸ್ಟ್ ಬಿನ್‌ಗಳನ್ನು ಕಡಿಮೆ ಪ್ರಮಾಣದಲ್ಲಿ ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿರುವ ಡಸ್ಟ್ ಬಿನ್ ಗಳನ್ನು ಹೆಚ್ಚಿನ ಮೋತ್ತಕ್ಕೆ ಖರೀದಿ ಮಾಡಿರುವುದಾಗಿ ತಿಳಿದುವರುತ್ತದೆ 10 ಲೀ ಸಾಮಾರ್ಥ್ಯದ ಡಸ್ಟ್ ಬಿನ್‌ಗಳು ಸಾರ್ವಜನಿಕರ ಬಳಕೆಗೆ ಯೋಗ್ಯವಾಗಿಲ್ಲ ಅದ್ದರಿಂದ ಡಸ್ಟ್ ಬಿನ್ ಗಳನ್ನುಪೂರೈಕ್ಕೆ ಮಾಡಿದ ಗುತ್ತಿದಾರರ ಮೇಲೆ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಹಾಗೂ ಪುರಸಭೆವತಿಯಿಂದ ಸಾರ್ವಜನಿಕರಿಗೆ ಡಸ್ಟ್ ಬಿನ್ ವಿತರಣೆ ಮಾಡಿರುವ ಕುರಿತು ಸೂಕ್ತವಾದ ದಾಖಲಾತಿಯನ್ನು ನಿರ್ವಹಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಉಪಾಧ್ಯಕ್ಷರಾದ ಇರ್ಫಾನ್ ಧಣಿ, ರಾಮಣ್ಣನಾಯಕ, ಕೃಷ್ಣದಾನಿ, ಉಸ್ಮಾನ್ ಸಾಬ್,ಯಲ್ಲಪ್ಪನಾಯಕ, ರಾಘವೇಂದ್ರ ನಾಯಕ, ವಿಶ್ವನಾಥ ಪವಾರ್, ಅಮರೇಶ ಪಾಟೀಲ್, ಗಂಗಾಧರ ಪವಾರ್,ಬಾಬಾ ಸಾಬು ಸೇರಿದಂತೆ ಇನ್ನಿತರರು ಇದ್ದರು.

