ಮಾನ್ವಿ : ಇಂದು ಪಟ್ಟಣದ ಪ್ರಸಿದ್ದ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಲೊಯೋಲ ಶಿಕ್ಷಣ ಸಂಸ್ಥೆಯಲ್ಲಿ ವಿಭಿನ್ನ ರೀತಿಯಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಯಲ್ಲಪ್ಪ ಹೀರೆಬಾದರದಿನ್ನಿ ವಕೀಲರು ಮತ್ತು ಪ್ರಧಾನ ಕಾರ್ಯದರ್ಶಿಗಳು ತಾಲೂಕ ವಕೀಲರ ಸಂಘ ಮಾನವಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಸಂವಿಧಾನ ರಚನೆಯಲ್ಲಿ ಡಾ||ಬಿ.ಆರ್.ಅಂಬೇಡ್ಕರ್ ಅವರ ಪಾತ್ರ ಹಾಗೂ ಅವರ ತಂಡ ಪಟ್ಟ ಕಷ್ಟಗಳ ಕುರಿತು ವಿವರಿಸಿದರು. ಸಂವಿಧಾನದ ಆಶಯ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ಮಾತನಾಡುತ್ತಾ ನಮ್ಮ ಸಂವಿಧಾನವು ಧೀರ್ಘ ಮತ್ತು ಬರವಣಿಗೆಯ ಸಂವಿಧಾನವಾಗಿದೆ. ಇದನ್ನು ಯಾವುದೇ ದೇಶಗಳ ಸಂವಿಧಾನಕ್ಕೆ ಹೋಲಿಸಲು ಸಾಧ್ಯವಿಲ್ಲ. ಸಂಸ್ಥೆಯಗಳು ಇಂತಹ ವಿಭಿನ್ನ ರೀತಿಯಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳಲ್ಲಿ ಸಂವಿಧಾನದ ಕುರಿತು ಅರಿವು ಹಾಗೂ ಜಾಗೃತಿ ಮೂಡಿಸುವಂತಹ ಕಾರ್ಯ ಮಾಡುತ್ತಿರುವುದು ಜೊತೆಗೆ ಮಾಡುವುದು ಕೂಡಾ ತುಂಬಾ ಅವಶ್ಯಕ ಎಂದರು.
ಕಾರ್ಯಕ್ರಮಕ್ಕೆ ಪೂರ್ವದಲ್ಲಿ ಮಾನ್ವಿ ತಾಲೂಕಿನ ವಿವಿಧ ಪ್ರೌಢ ಶಾಲೆಗಳಿಂದ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಕೊಲಾಜ್, ಪೇಸ್ ಪೇಂಟಿಂಗ್, ಆಶು ಭಾಷಣ, ರಂಗೋಲಿ ಮತ್ತು ಮಾದರಿ ಪ್ರದರ್ಶನ ಈ ಎಲ್ಲಾ ಸ್ಪರ್ಧೆಗಳಿಗೆ ಸಂವಿಧಾನ ವಿಷಯ ವಸ್ತುವನ್ನಿಟ್ಟು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಗಳಿಗೆ ಕಲ್ಮಠ ಶಾಲೆ, ಗಾಂಧೀ ಸ್ಮಾರಕ ಶಾಲೆ, ಸರಕಾರಿ ಬಾಲಕರ ಪ್ರೌಢ ಶಾಲೆ, ಸರಕಾರಿ ಪ್ರೌಢ ಶಾಲೆ ಕೋನಾಪುರ ಪೇಟ್, ಲೊಯೋಲ ಕಾಪೆಪಲಾಡಿ ಶಾಲೆ ಜಾಗೀರ ಪನ್ನೂರು, ಲೊಯೋಲ ಶಾಲೆ ಮಾನ್ವಿ ಹಾಗೂ ಕ್ಸೇವಿಯರ್ ಶಾಲೆ ಮಾನ್ವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ಮತ್ತು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನಾ ಪ್ರಮಾಣ ಪತ್ರಗಳನ್ನು ವಿತರಿಸಿಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಫಾ.ಅವಿನಾಶ, ಫಾ. ವಿನೋದ ಪೌಲ್ ಪ್ರಾಂಶುಪಾಲರು ಲೊಯೋಲ ಪದವಿ ಕಾಲೇಜು, ಫಾ. ಪ್ರವೀಣ್ ಕುಮಾರ್ ಪ್ರಾಂಶುಪಾಲರು ಲೊಯೋಲ ಪದವಿ ಕಾಲೇಜು, ಫಾಸಿರಿಲ್ ರಾಜ್ ನಿರ್ದೇಶಕರು ಲೊಯೋಲ ಶಾಲೆ, ಫಾ.ವಿಲ್ಸನ್ ಬೆನ್ನಿಸ್, ಮುಖ್ಯೋಪಾಧ್ಯಾಯರು ಕ್ಸೇವಿಯರ್ ಶಾಲೆ, ಶಾಂತಯ್ಯ ಸ್ವಾಮಿ ಹೀರೆಮಠ ದೈಹಿಕ ಶಿಕ್ಷಕರು ಕಲ್ಮಠ ಪ್ರೌಢ ಶಾಲೆ, ಸಿ ಜೂಲಿಯಟ್ ಮೋಂಥೆರೋ ಮುಖ್ಯೋಪಾಧ್ಯಾಯಿನಿ ಲೊಯೋಲ ಶಾಲೆ ಮಾನ್ವಿ ಫಾ. ಜಾರ್ಜ ಪಿಂಟೋ ಸಹಾಯಕ ನಿರ್ದೇಶಕರು ಲೊಯೋಲ ಸಮಾಜ ಸೇವಾ ಕೇಂದ್ರ ಇವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಮರಿಯಪ್ಪ ಇವರು ನಿರೂಪಿಸಿದರು, ರಕ್ಷಿತಾ ಸ್ವಾಗತಿಸಿದರು ಹಾಗೂ ಶ್ರೀಮತಿ ವಿಜಯಲಕ್ಷ್ಮಿ ಇವರು ವಂದಿಸಿದರು.

Leave a Reply

Your email address will not be published. Required fields are marked *