ಮಾನ್ವಿ: ಪಟ್ಟಣದ ಲೊಯೋಲ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮವನ್ನು ಲೋಕಸಭೆಯ ಮಾದರಿಯ ಪ್ರತಿಕೃತಿಯ ಮೂಲಕ ಉದ್ಘಾಟಿಸಿ ತಾ.ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಹೀರೆಬಾದರದಿನ್ನಿ ಮಾತನಾಡಿ ಸಂವಿಧಾನ ರಚನೆಯಲ್ಲಿ ಡಾ||ಬಿ.ಆರ್.ಅಂಬೇಡ್ಕರ್ ರವರು ಹಾಗೂ ಅವರ ತಂಡದ ನಿರಂತರವಾದ ಪರಿಶ್ರಮದ ಫಲವಾಗಿ ವಿಶ್ವದಲ್ಲಿಯೇ ಅತ್ಯಂತ ವೈಶಿಷ್ಟವಾದ ಸಂವಿಧಾನವನ್ನು ರಚಿಸುವುದಕ್ಕೆ ಸಾಧ್ಯವಾಗಿದೆ ಪ್ರತಿಯೊಬ್ಬರು ಕೂಡ ಸಂವಿಧಾನದ ಆಶಯ, ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ತಿಳಿದುಕೊಂಡಾಗ ಮಾತ್ರ ಉತ್ತಮವಾದ ಸಮಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ತಾಲೂಕಿನ ವಿವಿಧ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಸಂವಿಧಾನ ವಿಷಯದ ಕುರಿತು ನಡೆದ ಕೊಲಾಜ್, ಪೇಸ್ ಪೇಂಟಿ೦ಗ್, ಆಶು ಭಾಷಣ, ರಂಗೋಲಿ ಮತ್ತು ಮಾದರಿ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದರು.
ತಾಲೂಕಿನ ಕಲ್ಮಠ ಶಾಲೆ, ಗಾಂಧೀ ಸ್ಮಾರಕ ಶಾಲೆ, ಸರಕಾರಿ ಬಾಲಕರ ಪ್ರೌಢ ಶಾಲೆ, ಸರಕಾರಿ ಪ್ರೌಢ ಶಾಲೆ ಕೋನಾಪುರ ಪೇಟ್, ಲೊಯೋಲ ಕಾಪೆಪಲಾಡಿ ಶಾಲೆ ಜಾಗೀರ ಪನ್ನೂರು, ಲೊಯೋಲ ಶಾಲೆ ಮಾನ್ವಿ ಹಾಗೂ ಕ್ಸೇವಿಯರ್ ಶಾಲೆ ಮಾನ್ವಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ಪಡೆದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಾ.ಅವಿನಾಶ ವಹಿಸಿದರು, ಲೊಯೋಲ ಪದವಿ ಕಾಲೇಜಿನ ಪ್ರಾಂಶುಪಾಲರಾದ ಫಾ. ವಿನೋದ ಪೌಲ್ , ಫಾ. ಪ್ರವೀಣ್ ಕುಮಾರ್ ನಿರ್ದೇಶಕರಾದ ಫಾ.ಸಿರಿಲ್ ರಾಜ್ , ಕ್ಸೇವಿಯರ್ ಶಾಲೆಯ ಮುಖ್ಯೋಪಾಧ್ಯಾಯರಾದ ಫಾ.ವಿಲ್ಸನ್ ಬೆನ್ನಿಸ್, ಕಲ್ಮಠ ಪ್ರೌಢ ಶಾಲೆ ದೈಹಿಕ ಶಿಕ್ಷಕರಾದ ಶಾಂತಯ್ಯ ಸ್ವಾಮಿ ಹೀರೆಮಠ, ಲೊಯೋಲ ಶಾಲೆ ಮುಖ್ಯೋಪಾಧ್ಯಾಯಿನಿ ಸಿ .ಜೂಲಿಯಟ್ ಮೋಂಥೆರೋ, ಲೊಯೋಲ ಸಮಾಜ ಸೇವಾ ಕೇಂದ್ರದ ಸಹಾಯಕ ನಿರ್ದೇಶಕರಾದ ಫಾ. ಜಾರ್ಜ ಪಿಂಟೋ, ಮರಿಯಪ್ಪ, ರಕ್ಷಿತಾ , ವಿಜಯಲಕ್ಷ್ಮಿ ಇದ್ದರು.
ಮಾನ್ವಿ: ಪಟ್ಟಣದ ಲೊಯೋಲ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.

