ರಾಯಚೂರು ಮಾರ್ಚ್ 02 (ಕರ್ನಾಟಕ ವಾರ್ತೆ): ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯಿAದ 2026ರ ಮಾರ್ಚ್ 02ರ ಸೋಮವಾರ ದಂದು ನಡೆದ ದ್ವಿತೀಯ ಪಿಯುಸಿ-01ರ ಭೂಗೋಳ ಶಾಸ್ತç ಹಾಗೂ ಸಂಖ್ಯಾಶಾಸ್ತç ವಿಷಯದ ಪರೀಕ್ಷೆಯಲ್ಲಿ ಒಟ್ಟು 50 ವಿದ್ಯಾರ್ಥಿಗಳು ಗೈರು ಹಾಜರಿಯಾಗಿದ್ದಾರೆ.
ಜಿಲ್ಲೆಯ 43 ಪರೀಕ್ಷೆ ಕೇಂದ್ರಗಳಲ್ಲಿ ಭೂಗೋಳ ಶಾಸ್ತç ವಿಷಯದಲ್ಲಿ ಒಟ್ಟು 586 ನೋಂದಣೆಯಾಗಿದ್ದು, 557 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿಯಾಗಿದ್ದಾರೆ. 29 ವಿದ್ಯಾರ್ಥಿಗಳು ಗೈರು ಹಾಜರಿಯಾಗಿದ್ದಾರೆ.
ಸಂಖ್ಯಾಶಾಸ್ತç ವಿಷಯದಲ್ಲಿ ಒಟ್ಟು 700 ನೋಂದಣೆಯಾಗಿದ್ದು, 679 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿಯಾಗಿದ್ದಾರೆ. 21 ವಿದ್ಯಾರ್ಥಿಗಳು ಗೈರು ಹಾಜರಿಯಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕರಾದ ಸೋಮಶೇಖರಪ್ಪ ಹೋಕ್ರಾಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
