ಮಸ್ಕಿ : ಪಾಲಕ ಪೋಷಕರ ಸಹಕಾರ ವಿಶ್ವಾಸ ದಿಂದ ಸರ್ಕಾರಿ ಶಾಲೆಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯುತ್ತದೆ. ಹಾಗಾಗಿ ಸಮುದಾಯದ ಸಹಭಾಗಿತ್ವದೊಂದಿಗೆ ಪೋಷಕರು– ಶಿಕ್ಷಕರ ಮಹಾಸಭೆ ಹಮ್ಮಿಕೊಳ್ಳಲಾಗಿದೆ’ ಎಂದು ಶಾಲೆಯ ಮುಖ್ಯ ಗುರುಗಳಾದ ಪರಮಪ್ಪ ರವರು ಹೇಳಿದರು.

ಪಟ್ಟಣದ ಗಾಂಧಿನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪೋಷಕರು– ಶಿಕ್ಷಕರ ಮಹಾಸಭೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರ ವಿತರಣೆ, ಉಚಿತ ಆರೋಗ್ಯ ತಪಾಸಣೆ ಜತೆಗೆ ಪೂರಕ ಪೌಷ್ಟಿಕ ಆಹಾರ ವಿತರಣೆ ಎಲ್ಲವೂ ಇಲಾಖೆಯ ನಿಯಮಾನುಸಾರ ಉಚಿತವಾಗಿ ವಿತರಿಸಲಾಗುತ್ತಿದೆ.ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು’ ಎಂದರು.
ಅದೇ ರೀತಿ ಹುಲಿರಾಜ ರವರ ಶಾಲೆ ಮಕ್ಕಳು ಕುರಿತು ಮಾತನಾಡಿದರು
ಹಾಗೂ .ಡಿ.ಎಂ.ಸಿ
ಅಧ್ಯಕ್ಷರು, ಸದಸ್ಯರು,ಕಾರ್ಯಕ್ರಮದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.

ನಂತರ ಮಸ್ಕಿ ಪಟ್ಟಣದ ಎಸ್ ಬಿ.ಐ.ಬ್ಯಾಂಕ್ ನ ಸಿಬ್ಬಂದಿಗಳ ವತಿಯಿಂದ ಮಕ್ಕಳಿಗೆ ಉಚಿತವಾಗಿ ನೋಟ ಪುಸ್ತಕ ವಿತರಣೆ ಮಾಡಲಾಯಿತು.

ಈ ವೇಳೆ,ಎಸ್.ಡಿ.ಎಂ.ಸಿ
ಅಧ್ಯಕ್ಷರು, ಸದಸ್ಯರು,ಹಾಗೂ ಸಹ ಶಿಕ್ಷಕರಾದ ಶ್ರೀಮತಿ ಸಾವಿತ್ರಿ,ಅತಿಥಿ ಶಿಕ್ಷಕಿ ಜ್ಯೋತಿ,ರಮೇಶ್ ಸೇರಿದಂತೆ ಪಾಲಕರು,ಪೋಷಕರು ಮಕ್ಕಳು ಇದ್ದರೂ

Leave a Reply

Your email address will not be published. Required fields are marked *