ತಾಳಿಕೋಟಿ: ಪಟ್ಟಣದ ವಿ.ಕೆ.ಹೆಚ್.ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷ,ಸಮಾಜ ಸೇವಕ ಪ್ರಹ್ಲಾದ ಹಜೇರಿ ಇವರನ್ನು ನಾವದಗಿ ಗ್ರಾಮ ಬ್ರಹನ್ಮಠದ ಕಾರ್ಯಕ್ರಮದಲ್ಲಿ ಗೌರವ ಸಮರ್ಪಣೆ ಸಲ್ಲಿಸಲಾಯಿತು. ನಾವದಗಿ ಗ್ರಾಮದ ಬ್ರಹನ್ಮಠದಲ್ಲಿ ಪೂಜ್ಯ ಷ.ಬ್ರ.ಶ್ರೀ ರಾಜ ಗುರು ರಾಜೇಂದ್ರ ಒಡೆಯರ ಶಿವಾಚಾರ್ಯ ಮಹಾಸ್ವಾಮಿಗಳವರ ದ್ವಿತೀಯ ವರ್ಷದ ವಾರ್ಷಿಕೋತ್ಸವ ಅಂಗವಾಗಿ ನಡೆಯುತ್ತಿರುವ ಗುಡ್ಡಾಪುರದ ಶ್ರೀ ದಾನಮ್ಮ ದೇವಿಯ ಪುರಾಣ ಕಾರ್ಯಕ್ರಮದಲ್ಲಿ ದಾಸೋಹ ಸೇವೆ ಗೈದ ಇವರನ್ನು ಪರಮಪೂಜ್ಯರು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಪೂಜ್ಯರು ಮಾತನಾಡಿ 20 ದಿನಗಳ ಈ ಒಂದು ವಿಶೇಷ ಕಾರ್ಯಕ್ರಮಕ್ಕೆ ಬಹಳಷ್ಟು ಮಹನೀಯರು ದಾಸೋಹ ಹಾಗೂ ಇತರ ಕಾರ್ಯಗಳಲ್ಲಿ ತಮ್ಮ ತನು ಮನ ಧನದ ಸಹಕಾರವನ್ನು ನೀಡಿದ್ದಾರೆ. ಇವತ್ತು ತಾಳಿಕೋಟಿಯ ಸಮಾಜ ಸೇವಕ ಶಿಕ್ಷಣ ಪ್ರೇಮಿಗಳಾದ ಹಜೇರಿಯವರು ಪ್ರಸಾದ ಸೇವೆಯನ್ನು ಮಾಡಿದ್ದಾರೆ ಅವರಿಗೆ ನಾನು ಆಶೀರ್ವಾದ ರೂಪದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ಶಹಾಪೂರ ತಾಲೂಕಿನ ಹೋತಪೇಟೆ ಕೈಲಾಸ ಆಶ್ರಮದ ಪೂಜ್ಯ ಶಿವಲಿಂಗ ಶರಣರು, ಗುರಯ್ಯ ಶಾಸ್ತ್ರಿಗಳು, ಸಾಹಿತಿ ಬಸವರಾಜ ಗೊರಜಿ,ಪುರಾಣಿಕ ರಾಚಯ್ಯ ಹಿರೇಮಠ,ವಿಠಲಸಿಂಗ್ ಹಜೇರಿ, ಗ್ರಾಮದ ಗಣ್ಯರು ಹಿರಿಯರು ಹಾಗೂ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಇದ್ದರು.

