ಕೊಟ್ಟೂರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಭಾನುವಾರ ಭಕ್ತ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

ಜಾತ್ರಾ ಮಹೋತ್ಸವದ ನಿಮಿತ್ತ ಕೊಟ್ಟೂರೇಶ್ವರ ದೇವರ ಮೂರ್ತಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ವಿಶೇಷ ಹೂವಿನ ಅಲಂಕಾರ, ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ ಜರುಗಿದವು.

ನಂತರ ಪಲ್ಲಕ್ಕಿಯಲ್ಲಿ ಕೊಟ್ಟೂರೇಶ್ವರ ದೇವರ ಮೂರ್ತಿ ಮೆರವಣಿಗೆ ನಡೆಯಿತು. ಸಂಜೆ ದೇವಸ್ಥಾನ ಆವರಣದಿಂದ ಸಂಭ್ರಮದ ರಥೋತ್ಸವ ಜರುಗಿತು. ದೇವರನ್ನು ಕೈ ಮುಗಿದು ಭಕ್ತರು ಭಕ್ತಿ ಮೆರೆದರು.

ಸ್ಥಳೀಯ ಮುಖಂಡರು ಸೇರಿದಂತೆ ಗ್ರಾಮೀಣ ಭಾಗದ ಭಕ್ತರು ಇದ್ದರು.

Leave a Reply

Your email address will not be published. Required fields are marked *