ತಾಳಿಕೋಟಿ : ಮೇಲೆಶ್ವರ ಗ್ರಾಮದ ಹತ್ತಿರ ಪ್ರಜಾಸೌಧ ನಿರ್ಮಾಣಕ್ಕೆ ಆಯ್ಕೆ ಮಾಡಿದ ಸ್ಥಳ ಪಟ್ಟಣದಿಂದ 4 ರಿಂದ 5 ಕಿ ಮೀ ದೂರ ಇರುವುದರಿಂದ ತಾಲೂಕಿನ ಸಾರ್ವಜನಿಕರಿಗೆ ತುಂಬಾ ಅನಾನುಕೂಲವಾಗುತ್ತದೆ ಇದನ್ನು ರದ್ದು ಪಡಿಸಿ ತಾಳಿಕೋಟಿ ಪಟ್ಟಣದಲ್ಲಿಯೇ ಪ್ರಜಾಸೌಧ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ತಾಳಿಕೋಟಿ ತಾಲೂಕ ಹೋರಾಟ ಸಮಿತಿಯ ಪದಾಧಿಕಾರಿಗಳು ಶುಕ್ರವಾರ ವಿಠ್ಠಲ ಮಂದಿರದಲ್ಲಿ ಕರೆದ ಪಟ್ಟಣದ ಸರ್ವ ಸಮಾಜದ ಗಣ್ಯರ ಹಾಗೂ ವ್ಯಾಪಾರಸ್ಥರ, ಅಸೋಷಿಯೇಷನಗಳ ಪೂರ್ವಬಾವಿ ಸಭೆಯಲ್ಲಿ ಫೆಬ್ರವರಿ 25ರಂದು ಸ್ವಯಂ ಪ್ರೇರಿತ ಸಂಪೂರ್ಣ ಬಂದಗೆ ಕರೆ ನೀಡಿ ಅಂದಿನಿಂದಲೇ ಅನಿರ್ದಿಷ್ಟಾವಧಿಯವರೆಗೆ ಧರಣಿ ಸತ್ಯಾಗ್ರಹ ಆರಂಭಿಸುವುದಾಗಿ ನಿರ್ಣಯಿಸಿದರು. ಸಭೆಯಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ಕಾಶಿನಾಥ ಮುರಾಳ, ಹಾಗೂ ವಿಜಯಸಿಂಗ್ ಹಜೇರಿ, ರವಿ ಕಟ್ಟಿಮನಿ ಅವರು ಮಾತನಾಡಿ ಅಂದು ಮುಂಜಾನೆ 10 ಗಂಟೆಗೆ ಅಂಬೇಡ್ಕರ್ ವೃತದಿಂದ ಬೃಹತ್ ಮೆರವಣಿಗೆ ಮೂಲಕ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಬಸವೇಶ್ವರ ವೃತ್ತಕ್ಕೆ ತಲುಪಿ ಅಲ್ಲಿಯೇ ಧರಣಿ ಆರಂಭಿಸಲಾಗುವುದು ಇದಕ್ಕೆ ಸರ್ವ ಸಮಾಜದವರೂ ಜ್ಯಾತ್ಯತೀತವಾಗಿ, ಪಕ್ಷಾತೀತವಾಗಿ ಈ ಹೋರಾಟಕ್ಕೆ ಸಹಕರಿಸಬೇಕೆಂದು ಕೇಳಿಕೊಂಡರು. ಸಭೆಯಲ್ಲಿ ಕಾರ್ಯಕ್ರಮದ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಗೌರವ ಅಧ್ಯಕ್ಷರಾದ ಎಸ್.ಬಿ.ಕಟ್ಟಿಮನಿ, ಅಧ್ಯಕ್ಷರಾದ ದಶರತಸಿಂಗ್ ಮನಗೂಳಿ, ಉಪಾಧ್ಯಕ್ಷರಾದ ಎಂ.ಕೆ.ಚೋರಗಸ್ತಿ,ಮುತ್ತಪ್ಪ ಚಮಲಾಪುರ,ಮಾಸೂಮಸಾಬ ಕೆಂಭಾವಿ, ಪರಶುರಾಮ ತಂಗಡಗಿ, ವೆಂಕಣ್ಣ ತಾಳಪಲ್ಲೆ,ಎಂ.ಆರ್. ಕತ್ತಿ, ಶರಣಗೌಡ ಪಾಟೀಲ,ಪ್ರಕಾಶ ಹಜೇರಿ, ತಿಪ್ಪಣ್ಣ ಸಜ್ಜನ, ಚನ್ನಬಸ್ಸು ದೇಸಾಯಿ, ತಿರುಪತಿ ನವಲೆ , ಶ್ರೀಶೈಲ್ ಬಬಲೇಶ್ವರ, ಮನೋಹರ ಪತ್ತಾರ, ಗಂಗಾಧರ ಕಸ್ತೂರಿ, ಮಂಜು ಶೆಟ್ಟಿ, ಸಿರಸಕುಮಾರ ಹಜೇರಿ, ಸುರೇಶ ಹಜೇರಿ, ಅಮಿತ್ ಮನಗೂಳಿ, ಶ್ರೀನಿವಾಸ್ ಸೋನಾರ್, ರಾಮಪ್ಪ ಕಟ್ಟಿಮನಿ, ಜುಮ್ಮಣ್ಣ ನಾಲತವಾಡ ಯಂಕಪ್ಪ ಗೊಲ್ಲರ, ಸಂಜು ಬರದೇನಾಳ, ನಾರಾಯಣ ಹಿಂಗಮೋರೆ, ಬಸ್ಸು ಕೊಡೇಕಲ್, ಹಾಗೂ ಸರ್ವ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *