ತಾಳಿಕೋಟಿ: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳು ಕಡಿಮೆ ಆಗುತ್ತಿವೆ ಇದು ಕಳವಳಕಾರಿ ಸಂಗತಿಯಾಗಿದೆ ಇದರ ಕುರಿತು ಎಲ್ಲರೂ ಚಿಂತಿಸುವ ಅಗತ್ಯ ಇದೆ ಎಂದು ಸಾಹಿತಿ ಅಶೋಕ ಹಂಚಲಿ ಹೇಳಿದರು. ತಾಲೂಕಿನ ಚಬನೂರ ಕ್ರಾಸ್ ನಲ್ಲಿರುವ ಶ್ರೀ ಕರಬಸಪ್ಪಗೌಡ ಹಯ್ಯಾಳ ಗ್ರಾಮೀಣ ವಿದ್ಯಾವರ್ಧಕ ಸಂಘ ಇದರ ಅಡಿಯಲ್ಲಿ ನಡೆಯುತ್ತಿರುವ ಶ್ರೀ ತಾಯಮ್ಮ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಇವತ್ತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಒಳ್ಳೆಯ ಸಂಸ್ಕಾರಗಳನ್ನು ಕೊಡಬೇಕಾಗಿದೆ ಇದರಲ್ಲಿ ಪಾಲಕರ ಜವಾಬ್ದಾರಿಯೂ ಇದೆ ಅವರನ್ನು ಮೊಬೈಲ್ ದಾಸರಾಗದಂತೆ ನೋಡಿಕೊಳ್ಳಲು ಸ್ವತಃ ಪಾಲಕರು ಅವರ ಮುಂದೆ ಮೊಬೈಲ್ ಬಳಕೆ ಕಡಿಮೆ ಮಾಡಬೇಕು ಮಗು ಹೆತ್ತವರನ್ನು ಅನುಸರಿಸುತ್ತದೆ ಎಲ್ಲರೂ ಪೂರಕವಾಗಿ ಕೆಲಸ ಮಾಡಿದಾಗ ಮಾತ್ರ ಅವರ ಭವಿಷ್ಯವನ್ನು ನಿರ್ಮಾಣ ಮಾಡಲು ಸಾಧ್ಯ. ತಾಯಮ್ಮ ಸಂಸ್ಥೆ ಕೇವಲ ಮೂರು ವರ್ಷಗಳ ಅವಧಿಯಲ್ಲಿ ಗಮನಾರ್ಹವಾದ ಸಾಧನೆ ಮಾಡಿದೆ ಇದಕ್ಕೆ ನಿಮ್ಮ ಸಹಕಾರವೇ ಕಾರಣ ಅದು ಮುಂದೆಯೂ ಇದೆ ರೀತಿಯಾಗಿರಲಿ ಎಂದರು.ಸಾಸನೂರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪರಶುರಾಮ ಕಸನಕ್ಕಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಬದುಕಿಗೆ ಶ್ರೇಷ್ಠ ಗುರಿಯನ್ನು ಇಟ್ಟುಕೊಂಡು ಕಠಿಣ ಪರಿಶ್ರಮದ ಮೂಲಕ ಅದನ್ನು ಸಾಧಿಸಲು ಪ್ರಯತ್ನಿಸಬೇಕು. ತಾಯಮ್ಮ ಸಂಸ್ಥೆ ಈ ಭಾಗದ ಮಾದರಿ ಸಂಸ್ಥೆಯಾಗಿದೆ ಎಂದರು. ಸಮಾರಂಭದ ಸಾನಿಧ್ಯ ವಹಿಸಿದ್ದ ಕೊಕಟನೂರ ಗದ್ದಗಿ ಹಿರೇಮಠದ ಮ.ನಿ.ಪ್ರ. ಶ್ರೀ ಮಡಿವಾಳೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು.ಪೂಜ್ಯ ಕರಬಸಯ್ಯ ಸಿ.ಹಿರೇಮಠ(ಮುರಡಿ) ಸಮ್ಮುಖ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ರೀಡೆ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ತೋರಿದ ಮಕ್ಕಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ವೇದಿಕೆ ಕಾರ್ಯಕ್ರಮ ನಂತರ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಗಣ್ಯರಾದ ಬಸಯ್ಯ ಹಿರೇಮಠ, ಹಣಮಂತ್ರಾಯ ಚೌದ್ರಿ, ಚಂದ್ರಶೇಖರ ಕನಕರೆಡ್ಡಿ, ರಾಮಲಿಂಗಪ್ಪ ದೇಸಾಯಿ, ಪ್ರದೀಪ ದೇಸಾಯಿ, ಸಿದ್ದಲಿಂಗ ಗುಂಡಾಪುರ,ಕು. ತಾಯಮ್ಮ ಹಿರೇಮಠ, ವೆಂಕಟೇಶ ತಾಳಪಲ್ಲೆ,ಎಂ.ಡಿ.ಬಳಗಾರ, ರಾಮಚಂದ್ರಪ್ಪ ದೇಸಾಯಿ, ಮಶಾಕಸಾಬ ದೊಡಮನಿ, ಶಿವಲೀಲಾ ಹಿರೇಮಠ, ಬಸನಗೌಡ ಬಿಂಜಲಭಾವಿ, ಎಸ್.ಪಿ.ಹಿಪ್ಪರಗಿ, ಶಿವಶಂಕರಗೌಡ ಯಾದಗಿರಿ, ನಾಗು ದೇಸಾಯಿ, ಸಂಸ್ಥೆಯ ಅಧ್ಯಕ್ಷ ಶರಣಯ್ಯ ಹಿರೇಮಠ, ಉಪಾಧ್ಯಕ್ಷ ಶಶಿಧರ ಹಯ್ಯಾಳ,ಮು.ಗು.ಬಿ.ಎನ್. ಸಿದ್ದರೆಡ್ಡಿ, ಕಾರ್ಯದರ್ಶಿ ಮಡಿವಾಳಪ್ಪ ದೇಸಾಯಿ, ಆಡಳಿತ ಮಂಡಳಿ ನಿರ್ದೇಶಕರು, ಶಿಕ್ಷಕ ವರ್ಗ,ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು. ಕುಮಾರಿ ಲಕ್ಷ್ಮಿ ಪ್ರಾರ್ಥಿಸಿದರು. ಶಿಕ್ಷಕ ನಿಸಾರ್ ಮೂಕಿಹಾಳ ಸ್ವಾಗತಿಸಿದರು.ಬಸವರಾಜ್ ಸಿದರೆಡ್ಡಿ ವರದಿ ವಾಚಿಸಿದರು. ನಬಿಲಾಲ ಚಂದನಕೇರಿ ವಂದಿಸಿದರು.

Leave a Reply

Your email address will not be published. Required fields are marked *