ಲಿಂಗಸಗೂರು, ಫೆ.20 -ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಬೇಸಿಗೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ತೊಂದರೆಯಾಗಬಾ ರದು. ಒಂದು ವೇಳೆ ಕುಡಿಯುವ ನೀರಿನ ಸಮಸ್ಯೆಗಳ ಅಭಾವ ಸೃಷ್ಟಿಯಾಗಿ ಕುರಿತು ದೂರು ಕೇಳಿ ಬಂದರೆ ನಿರ್ದಾ ಕ್ಷಣ್ಯವಾಗಿ ಗ್ರಾಮ ಪಂಚಾಯತ್ ಅಭಿ ವೃದ್ಧಿ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಶಾಸಕ ಮಾನಪ್ಪ ವಜ್ಜಲ್ ಅವರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಖಡಕ್ಕಾಗಿ ಎಚ್ಚರಿಕೆ ನೀಡಿದರು.

 

ತಾಲೂಕ ಪಂಚಾಯತ್ ಸಭಾಂಗಣದಲ್ಲಿ ಜರುಗಿದ – ಕುಡಿಯುವ ನೀರಿನ ತಾಲೂಕ ಮಟ್ಟದ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಮುಂಬರುವ ದಿನಗಳಲ್ಲಿ ಬೇಸಿಗೆ ಸಮಯದಲ್ಲಿ ಉದ್ಭವಿಸಬಹುದಾದ ಕುಡಿಯುವ ನೀರಿನ ಸಮಸ್ಯೆಗಳ ಪರಿಹಾರಕ್ಕಾಗಿ ಕೈಗೊಂಡಿರುವ ಮುಂಜಾಗ್ರತ ಕ್ರಮಗಳ ಕುರಿತು ಅವರು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.

ನಾಗರಹಾಳ ಗ್ರಾ. ಪಂ. ವ್ಯಾಪ್ತಿಯ ನವಲಿ ಜಾಕವೆಲ್ ಹತ್ತಿರ ವಿದ್ಯುತ್ ಪರಿವರ್ತಕ ಸುಟ್ಟಿದ್ದು ಹಲವು ಬಾರಿ ಜೆಸ್ಕಾಂ ಅಧಿಕಾರಿಗಳಿಗೆ ಪತ್ರ ಬರೆದರು ಸಹ ಸ್ಪಂದಿಸುತ್ತಿಲ್ಲ ಎಂದು ಪಿಡಿಓ ಅವರು ಶಾಸಕರ ಗಮನಕ್ಕೆ ತಂದಾಗ ಸಭೆಯಲ್ಲಿ ಹಾಜರಿದ್ದ ಜೆಸ್ಕಾಂ ಇಲಾಖೆಯ ಅಧಿಕಾರಿ ಸರಿಯಾದ ಮಾಹಿತಿ ಇಲ್ಲದೆ ಸಭೆಗೆ ಬಂದಿದ್ದರಿಂದ ಜೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸರಿಯಾದ ಮಾಹಿತಿ ಇಲ್ಲದೆ ಸಭೆಗೆ ನಾಮಕ ವಾಸ್ತೆ ಗೆ ಬಂದಿದ್ದೀರಾ..? ವಿದ್ಯುತ್ ಸಮಸ್ಯೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗುತ್ತಿದ್ದು ಗ್ರಾ.ಪಂ. ಪಿಡಿಒ ಅವರು ಎರಡು ಬಾರಿ ಪತ್ರ ಬರೆದರೂ ಸಹ ಯಾಕೆ ಕ್ರಮ ಕೈಗೊಂಡಿಲ್ಲ ನಿಮ್ಮಿಂದ ಪರಿಹಾರ ಸಿಗುವುದು ಯಾವಾಗ ಬೇಸಿಗೆ ಸಂದರ್ಭದಲ್ಲಿ ಎರಡು ನೂರರಿಂದ 300 ಫೀಟ್ ವರೆಗೆ ಬೋರ್ವೆಲ್ ಹಾಕಿ ಕುಡಿಯುವ ನೀರಿಗೆ ಪ್ರಯತ್ನಿಸಿದರು ಸಹ ನೀವು ಸರಿ ಯಾಗಿ ವಿದ್ಯುತ್ ಒದಗಿಸದಿದ್ದರೆ ಹೇಗೆ..? ಗ್ರಾಮೀಣ ಭಾಗದ ಹಳ್ಳಿಗಳ ಜನತೆಗೆ ಕುಡಿಯುವ ನೀರಿನ ವಿಚಾರದಲ್ಲಿ ಬೇಜವಾಬ್ದಾರಿ ತೋರಿಸಬೇಡಿ.

ಒಂದು ವೇಳೆ ಇದೇ ರೀತಿ ಬೇಸಿಗೆ ಸಂದರ್ಭದಲ್ಲಿ ನಿರ್ಲಕ್ಷ ವಹಿಸಿದರೆ ಜೆಸ್ಕಾಂ ಇಲಾಖೆಯವರ ವಿರುದ್ಧವು ಕ್ರಮ ಕೈಗೊಳ್ಳಲಾಗುವುದೆಂದು ಅವರು ಅಧಿಕಾರಿಗಳಿಗೆ ಎಚ್ಚರಿಸಿದರು. ತಕ್ಷಣವೇ ತಾಲೂಕಿನ ಎಲ್ಲಾ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿಗಳು ಎಲ್ಲಿ ನೀರಿನ ಸಮಸ್ಯೆ ಇದೆಯೋ ತಕ್ಷಣವೇ ಹಿರಿಯ ಅಧಿಕಾರಿಗಳಿಗೆ ವರದಿ ಮಾಡಿ. 15ನೇ ಹಣಕಾಸಿನಲ್ಲಿ ಪಂ.ಗಳಿಗೆ ಬಿಡುಗಡೆ ಯಾದ ಹಣವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಬೇಕು. ಅದೇ ರೀತಿ ವಿಬಿ ಜಿ ರಾಮಜಿ ಯೋಜನೆಯು ಕಟ್ಟುನಿ ಟ್ಟಾಗಿ ಸರ್ಕಾರದ ಆದೇಶದಂತೆ ಪಾಲಿಸ ಬೇಕು ಏನಾದರೂ ದೂರುಗಳು ಕೇಳಿ ಬಂದರೆ ನಿರ್ಧಾಕ್ಷಣವಾಗಿ ಕ್ರಮ ಕೈಗೊಳ್ಳ ಲಾಗುವುದೆಂದು ಅವರು ಸಭೆಯಲ್ಲಿ ಹಾಜರಿದ್ದ ಪಿಡಿಒಗಳಿಗೆ ಹಾಗೂ ಆಡಳಿತ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಯೋಜನೆ ಅನುಷ್ಠಾನಾಧಿಕಾರಿ ವಿಜಯಶಂಕರ್, ತಾಲೂಕ ಪಂ. ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *