ತಾಳಿಕೋಟೆ:ಧರ್ಮದಿಂದ ನಡೆವವರ ಜೊತೆ ಭಗವಂತ ನಿಲ್ಲುತ್ತಾನೆ ಧರ್ಮಾತ್ಮರೂ ಕಡಿಮೆಯಿದ್ದರೂ, ಅಧರ್ಮಿಗಳ ಸಂಖ್ಯೆ ಹೆಚ್ಚಿದ್ದರೂ ಕೊನೆಗೆ ಧರ್ಮವೇ ಗೆಲ್ಲುತ್ತದೆ ಎಂಬುದಕ್ಕೆ ಮಹಾಭಾರತ ಸಾಕ್ಷಿಯಾಗಿದೆ ಎಂದು ಪುರಾಣಿಕ ಮಸೂತಿ(ಕೊಲ್ಹಾರ)ಯ ಶಿವಲಿಂಗಯ್ಯ ಶರಣರು ಪುರಾಣಿಕಮಠ

ಹೇಳಿದರು.

ಅವರು ಪಟ್ಟಣದ ಸಾಂಭಪ್ರಭು ಶರಣಮುತ್ಯಾರವರ ದೇವಸ್ಥಾನದ ಆವರಣದಲ್ಲಿ ಇದೇ ಮಾ.08 ರಂದು ಜರುಗಲಿರುವ ಸಾಂಭಪ್ರಭು ಶರಣಮುತ್ಯಾರವರ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರಾರಂಭಗೊಂಡ ಮುಗಳಖೋಡ ಯಲ್ಲಾಲಿಂಗ ಮಹಾರಾಜರ ಮಹಾಪುರಾಣ ಪ್ರಾರಂಭೋತ್ಸವದಲ್ಲಿ ಪುರಾಣಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು.

ಅತಿಥಿಗಳಾಗಿದ್ದ ಯಾದಗಿರಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ ಯಡಿಯಾಪುರ, ಭಕ್ತಿಯಿದ್ದಲ್ಲಿ ಶಕ್ತಿಯಿರುತ್ತದೆ. ಇಂಜಿನಿಯರಿಂಗ ಮುಗಿಸಿ ಇಂಜಿನಿಯರ್ ಹುದ್ದೆ ಸಿಗುವಂತೆ ಮಾಡೆಂದು ವರಕೇಳಲು ಹೋದ ನನಗೆ ಮುಗಳಕೋಡ ಅಜ್ಜನವರು ನೌಕರಿ ಆಸೆ ಬಿಡಿಸಿ ತೋರಿದ ಹಾದಿಯಲ್ಲಿ ನಡೆದು ಇಂದು ಜಿ.ಪಂ ಅಧ್ಯಕ್ಷ ಗದ್ದುಗೆಯೇರುವಂತಾಯಿತು. ಎಂದರು.

ಎಸ್.ಕೆ.ಕಾಲೇಜಿನ ನಿವೃತ್ತ ಪ್ರಾಚಾರ್ಯ ಆರ್.ಎನ್.ಪಾಟೀಲ,ಮನುಷ್ಯರ ಬಳಿ ಅಳಿಯದಂತಹ ಅಪಾರ ಬೋಗ-ಭಾಗ್ಯ ಸಂಪತ್ತಿದ್ದರೂ ಭಗವಂತನ ಬಗೆಗೆ ಜ್ಞಾನ, ಚಿಂತನೆ ಇಲ್ಲದಿದ್ದರೆ ಅದು ಹೆಣಕ್ಕೆ ಸಮಾನ ಎಂದು ಅನುಭಾವಿಗಳು ಹೇಳಿದ್ದಾರೆ. ಆದ್ದರಿಂದ ಶರಣರು-ಸಂತರು ಮಾರ್ಗದಲ್ಲಿ ನಡೆದು ಬದುಕು ಸಾರ್ತಕಗೊಳಿಸಿಕೊಳ್ಳಬೇಕು ಎಂದರು.

ಸಮ್ಮುಖವನ್ನು ವಹಿಸಿದ್ದ ಸ್ಥಳೀಯ ಕೈಲಾಸಪೇಟೆಯ ಬಸವಪ್ರಭು ದೇವರು, ಖಾಸ್ಗತೇಶ್ವರಮಠದ ಆಡಳಿತಾಧಿಕಾರಿ ಮುರಿಗೇಶ ವಿರಕ್ತಮಠ ಆಶೀರ್ವಚನ ನೀಡಿದರು.

ವೇದಿಕೆಯಲ್ಲಿ ನೇತೃತ್ವವನ್ನು ವಹಿಸಿದ್ದ ಸಾಂಭಪ್ರಭು ಶರಣರಮಠದ ಬಸಣ್ಣನವರು ಶರಣರು, ಶರಣಪ್ಪನವರು ಶರಣರು ಹಾಗೂ ಕಾಶಿಬಾಯಿ ಅಮ್ಮನವರು ಭಂಟನೂರ, ವಜ್ಜಲ ಶರಣರು, ಐ.ಬಿ.ಪಾಟೀಲ ಮಿಣಜಗಿ ಉಪಸ್ಥಿತರಿದ್ದರು,

ಸಂಗೀತಸೇವೆಯನ್ನು ಹುಣಸಗಿಯ ಸಂಗೀತ ಶಿಕ್ಷಕ ಅಶೋಕ ರಾಜನಕೋಳೂರ, ಹಾಗೂ ತಬಲಾ ಸೇವೆಯನ್ನು ಚೋಕಾವಿಯ ಬಸನಗೌಡ ಬಿರಾದಾರ ನೀಡುತ್ತಿದ್ದಾರೆ.

ಶರಣಗೌಡ ಪೊಲೀಸ್ ಪಾಟೀಲ ಕರಿಭಾವಿ ಸ್ವಾಗತಿಸಿದರು. ವಿಜಯಪುರ ಮಹಿಳಾ ವಿ.ವಿ.ನ ವಿಜಯಕುಮಾರ ಎಸ್.ಹಿರೇಮಠ ನಿರ್ವಹಿಸಿದರು.

ಸಂಗಮೇಶ ಶರಣರ ವಂದಿಸಿದರು. ಸಿದ್ದನಗೌಡ ಪೊಲೀಸ್ ಪಾಟೀಲ, ಬಿ.ಕೆ.ಬಿರಾದಾರ, ಮಲ್ಲಣ್ಣ ಶರಣರ, ಕಾಶಿರಾಯ ದೇಸಾಯಿ ಸಿದ್ದಣ್ಣ ಶರಣರ ಅಸಂಖ್ಯಾತ ಭಕ್ತಾದಿಗಳು ಉಪಸ್ಥಿತರಿದ್ದರು.

ಶರ್ಮುದ್ದಿನ್ ನದಾಫ ಭಕ್ತಾದಿಗಳಿಗೆ ನುಚ್ಚು-ಮಜ್ಜಿಗೆ-ಹುಣಸಿಹಿಂಡಿ ಪ್ರಸಾದ ಸೇವೆ ಅರ್ಪಿಸಿದರು.

Leave a Reply

Your email address will not be published. Required fields are marked *