ದಂಪತಿಗಳು ಸ್ವಯಂ ನಿರ್ಧಾರದ ತೆಗೆದುಕೊಂಡು ಚಿಕ್ಕ ಕುಟುಂಬ ಹೊಂದುವುದರಿಂದ, ತಾಯಿ ಮಕ್ಕಳ ಆರೋಗ್ಯ ಸುರಕ್ಷತೆ ಕೈಜೊಡಿಸಿದಂತಾಗುವುದು ಎಂದು ಚಂದ್ರಬಂಡಾ ಗ್ರಾಮದಲ್ಲಿ ಗರ್ಭಿಣಿ ಮಹಿಳೆಯ ಕುಟುಂಬದ ಸದಸ್ಯರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಐಇಸಿ ತಂಡದ ಮೂಲಕ ಆರೋಗ್ಯ ಶಿಕ್ಷಣ ನೀಡಲಾಯಿತು.

 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸುರೇಂದ್ರಬಾಬು ರವರ ನಿರ್ದೇಶನಂತೆ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಹಿನ್ನಲೆ ಚಂದ್ರಬಂಡಾ ಗ್ರಾಮಕ್ಕೆ ಬೇಟಿ ನೀಡಿದ ತಂಡವು, ಅಂಗನವಾಡಿಯಲ್ಲಿ ಲಸಿಕಾಕರಣಕ್ಕೆ ಮಕ್ಕಳೊಂದಿಗೆ ಆಗಮಿಸಿದ ತಾಯಂದಿರಿಗೆ, ಮಗುವಿಗೆ 12 ಮಾರಕ ರೋಗಗಳ ವಿರುದ್ಧದ ಎಲ್ಲಾ ಲಸಿಕೆಗಳನ್ನು ವಯಸ್ಸಿಗನುಸಾರವಾಗಿ ಹಾಕಿಸುವುದನ್ನು ಮರೆಯಬಾರದು ಎಂದು ತಿಳಿಸಲಾಯಿತು. ನಂತರದಲ್ಲಿ ಗ್ರಾಮದಲ್ಲಿ ಗರ್ಭಿಣಿ ಮಹಿಳೆಯರ ಮನೆಗಳಿಗೆ ಬೇಟಿ ನೀಡಿ, ಪ್ರತಿ ತಿಂಗಳು ವೈದ್ಯರ ಬಳಿ ನಿಯಮಿತವಾಗಿ ತಪಾಸಣೆ ಮಾಡಿಸುವುದರಿಂದ ರಕ್ತದೊತ್ತಡ, ಹೆಚ್‌ಬಿ ಪ್ರಮಾಣ, ತೂಕ, ಮಗುವಿನ ಬೆಳವಣಿಗೆ, ಇತರೆ ಯಾವುದಾದರೂ ಗಂಭೀರ ಆರೋಗ್ಯ ಸಮಸ್ಯೆಗಳು ಕಂಡು ಬಂದಲ್ಲಿ ತಕ್ಷಣ ಆರೈಕೆ, ಚಿಕಿತ್ಸೆಗೆ ಸಹಕಾರಿಯಾಗುವುದು, ಹೆರಿಗೆಯನ್ನು ಸರಕಾರಿ ಆಸ್ಪತ್ರೆಯಲ್ಲಿ ಮಾಡಿಸಲು ತಿಳಿಸಿ, ಮೊದಲ ಮಗುವಿನ ಜನನದ ನಂತರ ಎರಡನೆಯ ಮಗುವಿನ ಜನನದ ಮಧ್ಯ ಕನಿಷ್ಟ 03 ವರ್ಷಗಳ ಅಂತರವಿಡಲು ಉಚಿತ ತಾತ್ಕಾಲಿಕ ವಿಧಾನಗಳ ಅಳವಡಿಕೆಗೆ ದಂಪತಿಗಳು ನಿರ್ಧರಿಸಿ, ಅತಿ ಸರಳವಾದ ಹಾಗೂ ಮೂರು ತಿಂಗಳಿಗೊಮ್ಮೆ ಒಂದು ಬಾರಿ ಚುಚ್ಚುಮದ್ದು ರೂಪದಲ್ಲಿ ಪಡೆಯುವ “ಅಂತರ” ಚುಚ್ಚುಮದ್ದು ಅತ್ಯಂತ ಸರಳ, ಸುಲಭವಾಗಿದ್ದು ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರಕುತ್ತದೆ, ಅಲ್ಲದೆ ನುಂಗುವ ಮಾತ್ರೆಗಳಾದ ಮಾಲಾ-ಡಿ, ಛಾಯಾ ಮಾತ್ರೆಗಳು, ಹೆರಿಗೆ ತಕ್ಷಣವೇ ಪಿಪಿಐಯುಸಿಡಿ, ಕಾಪರ್‌-ಟಿ ಅಳವಡಿಸಬಹುದಾಗಿದ್ದು, ಜೊತೆಗೆ ಪುರುಷರಿಗೆ ನಿರೋಧ್‌ ಉಚಿತವಾಗಿ ಲಭ್ಯವಿದ್ದು ದಂಪತಿಗಳು ಹತ್ತಿರದ ಆಸ್ಪತ್ರೆಗೆ ತೆರೆಳಿ ಸೌಲಭ್ಯ ‌ಪಡೆಯಲು ವಿನಂತಿಸಲಾಯಿತು. ಜಿಲ್ಲಾ ಐಇಸಿ ತಂಡದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್‌ ದಾಸಪ್ಪನವರ, ಕೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜಾ ಕೆ, ಪಿಹೆಚ್‌ಸಿಓ ವಿಜಯ, ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಕುಮಾರ್ ನಾಯಕ, ವಿಜಯಕುಮಾರ ಟಿ, ಫಾರ್ಮಸಿ ಅಧಿಕಾರಿ ನಾಸೀರ್‌, ಆಶಾ ಕಾರ್ಯಕರ್ತೆ ಗಂಗಮ್ಮ, ನಿರ್ಮಲಾ, ಶರಣಮ್ಮ, ಅಂಗನವಾಡಿ ಕಾರ್ಯಕರ್ತೆ ದಸ್ತಗೀರಮ್ಮ, ಸೇರಿದಂತೆ ತಾಯಂದಿರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *