ಕವಿತಾಳ : ಪಟ್ಟಣ ಸಮೀಪದ ಮಸ್ಕಿ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ವಟಗಲ್ ಗ್ರಾಮ ಪಂಚಾಯತಿ ಮುಂದೆ ಇಂದು ಕೂಲಿಕಾರರು ಪ್ರತಿಭಟನೆ ನೆಡೆಸಿದರು.

ಉದ್ಯೋಗ ಖಾತರಿ ಕೆಲಸದ ಕೂಲಿಕಾರರಿಗೆ ಕೇವಲ ೬೦ರೂಪಾಯಿ ಕೂಲಿ ಹಾಕಿ ಅನ್ಯಾಯ ಮಾಡಿದ್ದು ಮತ್ತು ಸಾರ್ವಜನಿಕರ, ಶಾಲಾ ಮಕ್ಕಳ ,ಸೌಕರ್ಯಗಳನ್ನು ನೀಡುವಲ್ಲಿ ಸ್ಥಳಿಯ ಆಡಳಿತ ವಿಫಲವಾಗಿದ್ದು, ಅಧಿಕಾರಿಗಳು ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ೧೫ನೇ ಹಣಕಾಸಿನಲ್ಲಿ ಲೂಟಿ ಮಾಡಿ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಅನ್ಯಾಯ ಎಸಗಿದ್ದಾರೆ, ನರೇಗಾ ಯೋಜನೆಯಡಿ ಮಾಡಿದ ಕಾಮಗಾರಿಗಳೆಲ್ಲವೂ ಗ್ರಾಮ ಪಂಚಾಯತಿ ಸದಸ್ಯರ ಮತ್ತು ಅವರ ಸಂಬAಧಿಕರ ಜಮೀನುಹಳ ಹತ್ತಿರ ಮರಂ ರಸ್ತೆ ಕಳಪೆ ಕಾಮಗಾರಿ ಮಾಡಿ, ಸಿಸಿ ರಸ್ತೆಗಳನ್ನು ಕೂಡ ಸದಸ್ಯರುಗಳ ಮನೆಯ ಅಕ್ಕಪಕ್ಕ ಮಾಡಿಕೊಂಡಿರುತ್ತಾರೆ ಎಂದು ಪ್ರತಿಭಟನೆಕಾರರು ಆರೋಪಿಸಿದ್ದಾರೆ.
ಗ್ರಾಮಸಭೆಯಲ್ಲಿ ಚರ್ಚಿಸಿದ ಕಾಮಗಾರಿಗಳನ್ನು ಮಾಡದೆ ತಮಗೆ ಅನುಕೂಲವಾದ ಸ್ಥಳದಲ್ಲಿ ಕಾಂಗಾರಿಗಳನ್ನು ಮಾಡಿ ಅನ್ಯಾಯವೆಸಗಿದ್ದಾಋಎ ಮತ್ತು ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಲಬೂತ ಸೌಕರ್ಯಗಳಾದ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆಗಾಗಿ ಮೂರು ವರ್ಷಗಳಿಂದ ಎಸ್ ಡಿ ಎಂಸ ಇಸದಸ್ಯರುಗಳು ಎಷ್ಟು ಕೆಳಿಕೊಂಡರು ಅವುಗಳತ್ತ ಗಮನ ಹರಿಸದೆಕಮಿಷನ್ ಆಸೆಗಾಗಿ ಗಟ್ಟಿಮುಟ್ಟಾದ ಕಂಪೌಡ್ ಕೆಡವಿ ಮತ್ತೆ ಮಾಡುವ ನೆಪವೊಡ್ಡಿ ಹಣ ಲೂಟಿ ಮಡುವ ಹುನ್ನಾರ ಹೊಂದಿದ್ದು ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಇಷ್ಟೆ ಅಲ್ಲದೆ ಇನ್ನು ಹತ್ತಾರೂ ಹಗರಣಗಳು ವಟಗಲ್ ಗ್ರಾಮ ಪಂಚಾಯತಿಯಲ್ಲಿ ನಡೆದಿದ್ದು ಸೂಕ್ತ ತನಿಖೆ ಮಾಡುವ ಮೂಲಕ ಕಾನೂಕ್ರಮಕ್ಕೆ ಮುಂದಾಗಬೇಕೆ ಎಂದು ಅಧಿಕಾರಿಗಳನ್ನು ಒತ್ತಾಯಿಸಲಾಗುವುದೆ ಎಂದು ಪ್ರತಿಭಟನೆಕಾರರು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ನೂರಾರು ಜನ ಪುರುಷ ಮತ್ತು ಮಹಿಳಾ ಕೂಲಿಕಾರರು ಬಾಗವಹಿಸಿದ್ದು ತಾಲ್ಲೂಕು ಪಂಚಾಯತಿ ಇಓ ಅಥವಾ ತಹಸೀಲ್ದಾರರು ಸ್ಥಳಕ್ಕೆ ಭೇಟಿ ಸಮಸ್ಯೆ ಪರಿಹರಿಸುವವರೆಗೆ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *