ಮಾನ್ವಿ ಛತ್ರಪತಿ ಶಿವಾಜಿ ಯುವ ಸೇನೆ ನೀರಮಾನ್ವಿ ಹಾಗೂ ಗ್ರಾಮದ ಹಿರಿಯರ ಸಂಯುಕ್ತಾಶ್ರಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 396 ನೆಯ ಜಯಂತೋತ್ಸವವನ್ನು ಅತಿ ವಿಜ್ರಂಭಣೆಯಿಂದ ಸರಳವಾಗಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ಸರ್ಕಲ್ ನಲ್ಲಿ ಊರಿನ ಹಿರಿಯರು ಹಾಗೂ ಗ್ರಾಮ ಘಟಕದ ಅಧ್ಯಕ್ಷ ರವಿ ತಿಮ್ಮಯ್ಯ ನಾಯಕ ಹಾಗೂ ಪದಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು ಈ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಮುಖಂಡರು ಹಾಜರಿದ್ದು ಶಿವಾಜಿ ಮಹಾರಾಜರ ಆದರ್ಶಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡರೆ ನಾವು ಎಲ್ಲರ ಜೊತೆ ಉತ್ತಮವಾಗಿ ಸಹಬಾಳ್ವೆಯಿಂದ ಇರಬಹುದಾಗಿದೆ ಕಾರಣ ಜಾತಿ ಭೇದವಿಲ್ಲದೆ ಎಲ್ಲರೂ ಒಗ್ಗಟ್ಟಾಗಿರಬೇಕೆಂದರು ಈ ಸಂದರ್ಭದಲ್ಲಿ ಕೇಂದ್ರೀಯ ಶಶಸ್ತ್ರ ಪಡೆಗೆ BSF ಗೆ ಆಯ್ಕೆಯಾಗಿರುವ ಜೆಲ್ಲಿ ಶಿವರಾಜ ನಾಗಪ್ಪ ನಾಯಕ ನೀರಮಾನ್ವಿ ಇವರನ್ನು ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಯುವ ಸೇನೆ ಬಳಗದಿಂದ ಸನ್ಮಾನಿಸಿ ಗೌರವಿಸಲಾಯಿತು ಈ ಸಂದರ್ಭದಲ್ಲಿ ಎಲ್ಲಾ ಸಮುದಾಯದ ಬಂಧುಗಳು ಪಕ್ಕದ ಗ್ರಾಮಗಳಾದ ಹರವಿ ಬೆಟ್ಟದೂರು ಕಪಗಲ್ ಸುಂಕೇಶ್ವರದ ಸಾದಪುರದ ಯುವಕರು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು ನಂತರ ಜಯಂತೋತ್ಸವದ ಅಂಗವಾಗಿ ಬಂದಂತ ಎಲ್ಲಾ ದೇಶಭಕ್ತರಿಗೆ ಸಿಹಿ ಹಂಚಲಾಯಿತು

Leave a Reply

Your email address will not be published. Required fields are marked *