ತಾಳಿಕೋಟಿ: ತಾಲೂಕಿನ ಸುಕ್ಷೇತ್ರ ನಾವದಗಿ ಗ್ರಾಮ ಬ್ರಹನ್ಮಠದಲ್ಲಿ ಷ.ಬ್ರ. ಶ್ರೀ ರಾಜ ಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯ ಮಹಾಸ್ವಾಮಿಗಳವರ ಗುರು ಪಟ್ಟಾಧಿಕಾರದ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ನಡೆಯುತ್ತಿರುವ ಪುರಾಣ ಕಾರ್ಯಕ್ರಮದಲ್ಲಿ ಪೂಜ್ಯ ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರನ್ನು ಬಸವನ ಬಾಗೇವಾಡಿಯ ಮ.ನಿ.ಪ್ರ.ಶ್ರೀ ಶಿವಪ್ರಕಾಶ ಮಹಾಸ್ವಾಮಿಗಳು ಸನ್ಮಾನಿಸಿ ಗೌರವ ಸಮರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಪುರಾಣಿಕ ರಾಚಯ್ಯ ಹಿರೇಮಠ ಹಾಗೂ ಭಕ್ತರು ಇದ್ದರು.

