ಲಿಂಗಸಗೂರು : ಫೆ.19.ಪಟ್ಟಣದ ಪಂಚಮಸಾಲಿ ಮುಖಂಡರಾದ ಅಮರೇಶ್ ತಾವರಗೇರಾ ರವರ ಮನೆಗೆ ಖಾಸಗಿ ಕಾರ್ಯಕ್ರಮ ಕ್ಕೆ ಆಗಮಿಸಿದ್ದ ಕೇಂದ್ರದ ರಾಜ್ಯ ರೈಲ್ವೆ ಖಾತೆ ಮಾಜಿ ಸಚಿವ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಉತ್ತರ ಕರ್ನಾಟಕ ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಂದ ನೂತನ ಬಳ್ಳಾರಿ ಲಿಂಗಸಗೂರು.ಹಾಗೂ ರಾಯಚೂರು ಬೆಳಗಾವಿ ರೈಲು ಮಾರ್ಗಗಳ ಚಾಲನೆ ನೀಡಬೇಕೆಂದು ಮನವಿ ಸಲ್ಲಿಸಿದರು. ಉತ್ತರ ಕರ್ನಾಟಕ ಭಾಗದ ಬಳ್ಳಾರಿ ಲಿಂಗಸಗೂರ ನೂತನ ಮಾರ್ಗ ಸರ್ವೆಗೆ ಬಹು ದಿನಗಳ ಕನಸಾಗಿದ್ದ ಈ ಸರ್ವೆ ಕಾರ್ಯ ಈ ಹಿಂದೆ ಅಕ್ಟೋಬರ್ 2018 ಸರ್ವೆ ಕಾರ್ಯ ಪೂರ್ಣಗೊಳಿಸಿ ದಿನಾಂಕ 4-1-2019 ರಂದು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಈ ರೈಲ್ವೆ ಮಾರ್ಗ ಸಿರುಗುಪ್ಪ, ಸಿಂಧನೂರ್ ಸೇರಿದಂತೆ ಪ್ರಮುಖ ಪಟ್ಟಣಗಳನ್ನು ಹಾದು ಲಿಂಗಸಗೂರು ನಗರಕ್ಕೆ ಈಗಾಗಲೇ ಗದಗ ವಾಡಿ ರೈಲು ಮಾರ್ಗಕ್ಕೆ ನೀಲ ನಕ್ಷೆ ಕೂಡ ವರದಿ ಸಲ್ಲಿಕೆಯಾಗಿದ್ದು, ಇದರ ಮಾರ್ಗಕ್ಕೆ ಲಿಂಕ್ ಮಾಡುವಂತೆ ಬಳ್ಳಾರಿ ಲಿಂಗಸಗೂರ ಮಾರ್ಗ 132. 18 ಕಿ.ಮೀ, ಮತ್ತು ರಾಯಚೂರು ಯಿಂದ ಬೆಳಗಾವಿ, ರೈಲು ಮಾರ್ಗ ಇದರ ವಾಯ ಲಿಂಗಸಗೂರು, ಬಾಗಲಕೋಟ, ಸೇರಿದಂತೆ ಪ್ರಮುಖ ಪಟ್ಟಣಗಳಲ್ಲಿ ತಲಪುವಂತೆ ಇದರ ಉದ್ದ ಮಾರ್ಗ 344. 95ಕೀ,ಮೀ, ಉದ್ದದ ಇದರ ಸಂಪೂರ್ಣ ವರದಿ ಅಕ್ಟೋಬರ್ 2011 ರಲ್ಲಿ ಪ್ರಾರಂಭಗೊಂಡು ದಿನಾಂಕ 1-3 2012 ಸರ್ಕಾರಕ್ಕೆ ಸರ್ವೆ ಕಾರ್ಯದ ವರದಿ ಕೂಡ ಸಲ್ಲಿಕೆಯಾಗಿದ್ದು, ಈ ಎರಡು ಯೋಜನೆಗಳ ವರದಿಯಂತೆ ಮಾರ್ಗ ಸಂಚಾರಕ್ಕೆ ನಿರೀಕ್ಷಿತ ರೈಲ್ವೆ ಸಂಚಾರದ ಪ್ರಯಾಣಿಕರಿಗೆ ರೈಲು ಸಂಚಾರದ ವ್ಯವಸ್ಥೆ ಕಲ್ಪಿಸುವಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಏರಬೇಕೆಂದು ಮಾಜಿ ರೈಲ್ವೆ ಸಚಿವರಾದ ಯತ್ನಾಳ್ ಅವರಿಗೆ ಮನವಿ ಸಲ್ಲಿಸಿದರು, ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷರಾದ ನಾಗರಾಜ್ ಗಸ್ತಿ ವಕೀಲರು, ಉಪಾಧ್ಯಕ್ಷರಾದ ಕುಪ್ಪಣ್ಣ ಮಾಣಿಕ್ ವಕೀಲರು, ಲಿಂಗಸಗೂರು ರೈತ ಸಂಘದ ಅಧ್ಯಕ್ಷ ಸಂಗನಗೌಡ ಹೊಸೂರು,
ಮುಖಂಡ ಶಂಕರಗೌಡ ಅಮರಾವತಿ, ಅಮರೇಶ್ ತಾವರಗೇರ, ಶಿವಾನಂದ ಬಾದವಾಡಗಿ,ಸಿ ಸಿ ಕರಡಕಲ್ ವಕೀಲರು, ನಾಗಪ್ಪ ಬೋರಾವತ್, ಶರಣಪ್ಪ ಸುಂಕದ ಕರಡಕಲ್,ಶಿವುಕುಮಾರ್ ಶೀಲಾವಂತರ ವಕೀಲರು, ಮಲ್ಲಿಕಾರ್ಜುನ್ ನಾಡಗೌಡ್ರು, ಡಾ. ಸುಭಾಷ್ ಪಲ್ಲಿದ್, ರುದ್ರಗೌಡ ಬಿರಾದರ್ ಫೋಟೋಗ್ರಾಫಿ, ವೀರೇಶ್ ಯರಡೋಣಿ, ರಾಮ್ ಕುಮಾರ್ ಅಲಬನೂರ್ , ಭಾಗವಹಿಸಿದ್ದರು,

