ಲಿಂಗಸಗೂರು : ಫೆ 19 .ಪಟ್ಟಣದ ಮಾತೇ ಮಾಣಿಕೇಶ್ವರಿ ಮಠದ ಹತ್ತಿರವಿರುವ ವೀರೇಶ ಎನ್ನುವವರ ಹೋಟೇಲ್ ಗೆ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿ ಹೊಡೆದು ಹೋಟೆಲ್ ಗೆ ನುಗ್ಗಿದ್ದು ಇದರಿಂದ ಯಾವುದೆ ಪ್ರಾಣಾಪಾಯ ಸಂಭವಿಸಿಲ್ಲ.
ಇಂದು ಬೆಳಗ್ಗೆ ಸುಮಾರು 11 ಗಂಟೆಗೆ ಪಟ್ಟಣದ ಮಾತೇಮಾಣಿಕೇಶ್ವರಿ ಮಠದ ಹತ್ತಿರ ಬೀದರ ಶ್ರೀರಂಗಪಟ್ಟಣ 150ಎ ( ಎನ್ ಎಚ್ ) ರಾಷ್ಟಿಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ .
ಈ ಕಾರ್ ಅನ್ನು ಅಪ್ರಾಪ್ತರು ಚಲಾಯಿಸುತ್ತಿದ್ದರು ಎಂದು ಹೇಳಲಾಗುತ್ತಿದ್ದು ಗುರುಗುಂಟಾ ಕಡೆಯಿಂದ ಲಿಂಗಸಗೂರು ಪಟ್ಟಣಕ್ಕೆ ಬರುತ್ತಿರುವಾಗ ಅಪ್ರಾಪ್ತರು ಕಾರನ್ನು ಅತೀವೇಗವಾಗಿ ಚಲಾಯಿಸಿದ್ದೆ ಘಟನೆಗೆ ಕಾರಣ ಎನ್ನಲಾಗುತ್ತಿದೆ ಅತೀ ವೇಗದಿಂದ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿ ಹೋಡೆಯುತ್ತಾ ಹೋಟೇಲ್ ಕಂಪೌಂಡ ಗೋಡೆಗೆ ಗುದ್ದಿ ಕಾರು ಪಲ್ಟಿ ಹೊಡೆದು ಹೊಟೇಲ್ ಒಳಗೆ ನುಗ್ಗಿದೆ ಕಾರಿನಲ್ಲಿರುವವರು ಮಾತ್ರ ಪ್ರಾಣಾಪಾದಿಂದ ಪರಗಿದ್ದರೆಂದು ಹೇಳಲಾಗುತ್ತಿದೆ .
ಅನ್ಯ ಕಾರ್ಯಕ್ರಮದ ನಿಮಿತ್ಯವಾಗಿ ಇಂದು ಹೋಟೆಲ್ ಬಂದ್ ಮಾಡಲಾಗಿತ್ತು ಎಂದು ಹೇಳಲಾಗುತಿದ್ದು ಹೊಟೇಲ್ ತೆಗೆದಿದ್ದರೆ ಅಪಾಯ ಕಟಿಟ್ಟ ಬುತ್ತಿ .

