ರಾಯಚೂರು ಫೆಬ್ರವರಿ 18 (ಕರ್ನಾಟಕ ವಾರ್ತೆ): ಗಣೇಕಲ್ ಜಲಾಯಶದಿಂದ ರಾಂಪೂರ ಕುಡಿಯುವ ನೀರಿನ ಜಲಾಶಯಕ್ಕೆ ನೀರನ್ನು ಹರಿಸುವ ವಿತರಣಾ ಕಾಲುವೆ 95, 96, 98, 98ಎ, 98ಬಿ, 99ಎ, 99 ಮತ್ತು 100ರವರೆಗೆ ಕಾಲುವೆಯ ಸುತ್ತಲಿನ ಪ್ರದೇಶದ ವ್ಯಾಪ್ತಿಯಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಫೆ.17ರಿಂದ ಮಧ್ಯರಾತ್ರಿ 12 ಗಂಟೆಯಿಂದ ಫೆ.21ರ ಮಧ್ಯೆರಾತ್ರಿ 12 ಗಂಟೆವರೆಗೆ 100 ಮೀಟರಗಳ ವಿತರಣಾ ಕಾಲುವೆಗಳ ಸುತ್ತುವರೆದ ಪ್ರದೇಶದ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಆದೇಶ ಹೊರಡಿಸಿದ್ದಾರೆ.

