ಲಿಂಗಸಗೂರು : ಫೆ 18 ಸರಕಾರಿ ಶಾಲಾ ಕಟ್ಟಗಳು ಸುಸಜ್ಜಿತವಾಗಿದ್ದರೆ ಮಾತ್ರ ಮಕ್ಕಳು ಯಾವುದೇ ಅಡ್ಡಿ ಆತಂಕಗಳು ಇಲ್ಲದೆ ಶಿಕ್ಷಣ ಕಲಿಯಬಹುದು. ಪೋಷಕರೂ ಸಹ ನಿರ್ಭೀತಿಯಿಂದ ಸರಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಾರೆ. ಹೀಗಾಗಿ ತಾಲ್ಲೂಕಿನ ದೇವರಭೂಪುರ ಶಾಲಾ ಆವರಣದಲ್ಲಿ ಕೆ.ಕೆ.ಆರ್.ಡಿ.ಬಿ. ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಶಾಲಾ ಕಟ್ಟಡದ ವೀಕ್ಷಿಸಿದ ತಹಶಿಲ್ದಾರ ಕು.ಸತ್ಯಮ್ಮ ಕಟ್ಟಡದ ಗುಣಮಟ್ಟದ ವಿಚಾರದಲ್ಲಿ ದೂರು ಕೇಳಿಬಂದ ಹಿನ್ನಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ದೂರವಾಣಿ ಸಂಪರ್ಕದ ಮೂಲಕ ಮಾತನಾಡಿದ ಅವರು ಕಟ್ಟಡದ ಗುಣಮಟ್ಟದ ವಿಚಾರದಲ್ಲಿ ರಾಜೀ ಆಗಬಾರದು ಎಂದು ತಾಕೀತು ಮಾಡಿದರು. ಅದಲ್ಲದೇ ಈ ವಿಚಾರವಾಗಿ ಡಿಸಿಯವರಿಗೆ ಪತ್ರ ಬರೆಯಲಾಗುವುದು ಎಂದು ಎಚ್ಚರಿಕೆ‌ ನೀಡಿದರು. ಮೊದಲ ಬಾರಿಗೆ ಶಾಲೆಗೆ ಅಗಮಿಸಿದ ತಹಶಿಲ್ದಾರ ಅವರನ್ನ ಶಾಲಾ ಮುಖ್ಯ ಶಿಕ್ಷಕ ದವಲಸಾಬ ಗೋನವಾಟ್ಲ, ಹಾಗೂ ಸಹ ಶಿಕ್ಷಕರು ಗೌರವಿಸಿದರು. ಈ ಸಂದರ್ಭದಲ್ಲಿ ದೇವರಭೂಪುರ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *