ರಾಯಚೂರು, ಫೆ 17-ಸಮಾಜದಲ್ಲಿ ಬಡವರಿಗೆ ಕ್ರೈಸ್ತ ಮಿಷನರಿಗಳು ಮಾಡಿದ ನೆರವಿನಿಂದ ಶಿಕ್ಷಣ ಮತ್ತು ಅವಕಾಶ ವಂಚಿತರು ಮುನ್ನೆೆಲೆಗೆ ಬರಲು ಅನುಕೂಲವಾಗಿದೆ ಎಂದು ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಕಲಬುರ್ಗಿ ಪೀಠದ ಆಯುಕ್ತ ಬಿ.ವೆಂಕಟಸಿಂಗ್ ಹೇಳಿದರು.
ಅವರು ಜಿಲ್ಲೆೆಯ ದೇವದುರ್ಗ ತಾಲೂಕಿನ ಸ್ವಗ್ರಾಾಮ ಬೊಮ್ಮನಾಳ ಗ್ರಾಾಮದಲ್ಲಿ ನಿರ್ಮಿಸುತ್ತಿಿರುವ ಕ್ರೈಸ್ತ ಸಮುದಾಯದ ಚರ್ಚ್ ಹೆಬ್ಬಾಾಗಿಲು ಅನಾವರಣಕ್ಕೆೆ ಚಾಲನೆ ನೀಡಿದ ಅವರು ಮೇಥೋಡಿಸ್‌ಟ್ ಸಮುದಾಯದವರಿಂದ ಸನ್ಮಾಾನ ಸ್ವೀಕರಿಸಿ ಮಾತನಾಡಿದರು. ದೇಶದ ಸ್ವಾಾತಂತ್ರ ಪೂರ್ವ ಮತ್ತು ನಂತರ ಗ್ರಾಾಮೀಣ ಪ್ರದೇಶದಲ್ಲಿ ಶಿಕ್ಷಣ ವಂಚಿತ ಸಮುದಾಯಗಳಿಗೆ ಶಿಕ್ಷಣ ಹಾಗೂ ವೈದ್ಯಕೀಯ ಸೌಲಭ್ಯ ನೀಡುವಲ್ಲಿ ತಮ್ಮದೆ ಆದ ಕೊಡುಗೆ ನೀಡಿರುವ ಕ್ರೈಸ್ತ ಸಮುದಾಯವನ್ನು ಜನಸಾಮಾನ್ಯರು ಮರೆತಿಲ್ಲ ಎಂದರು.
ಬೊಮ್ಮನಾಳ ಗ್ರಾಾಮದಲ್ಲಿ ಕಳೆದ ಐದು ದಶಕಗಳ ಹಿಂದೆ ಚರ್ಚ್ ನಿರ್ಮಿಸಲಾಗಿತ್ತು ಈಗ ಹಳೆಯದಾದ ಚರ್ಚ್ ಪುನರ್ ನಿರ್ಮಾಣಗೊಳ್ಳುತ್ತಿಿರುವುದು ಸಂತಸದ ವಿಚಾರ. ನಮ್ಮ ಕುಟುಂಬಕ್ಕೆೆ ಹಾಗೂ ನಮ್ಮ ಗ್ರಾಾಮದ ಕ್ರೈಸ್ತ ಸಮಯುದಾಯಕ್ಕೆೆ ಮೂರು ತಲೆಮಾರಿನ ಸಂಬಂಧ ಇದೆ. ನಮ್ಮ ಸ್ವಂತ ಮನೆಯನ್ನು ಪಾರ್ಥನೆ ಮಾಡಲು ಚರ್ಚ್‌ಗೆ ಬಿಟ್ಟುಕೊಡಲಾಗಿತ್ತು ಅದೇ ಹಳೆ ಮನೆಯಲ್ಲಿ ಈಗ ಕ್ರೈಸ್ತ ಸಮಯದಾಯದ ಸಮುದಾಯ ಭವನ ನಿರ್ಮಾಣವಾಗುತ್ತಿಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಏನೇ ಸಮಸ್ಯೆೆ ಇದ್ದರು, ಮಕ್ಕಳಿಗೆ ಶಿಕ್ಷಣದಿಂದ ಮಚತರನ್ನಾಾಗಿ ಮಾಡಬಾರದು ಎಂದು ಸಲಹೆ ಮಾಡಿದ ಅವರು ಗ್ರಾಾಮದಲ್ಲಿ ಎಲ್ಲಾ ಸಮುದಾಯದೊಂದಿಗೆ ಸಾಮರಸ್ಯ ಜೀವನ ನಡೆಸುವಂತೆ ಸಲಹೆ ನೀಡಿ ಇದೇ ಓಣಿಯಲ್ಲಿ ಹುಟ್ಟಿಿ ಬೆಳೆದು ಬಂದ ತಮ್ಮ ಬಾಲ್ಯದ ಜೀವನದ ನೆನಪು ಮೆಲಕು ಹಾಕಿದರು.
ಸಿರವಾರ ಜಿಲ್ಲಾ ಮೆಥೋಡಿಸ್‌ಟ್ ಚರ್ಚ್‌ಗಳ ಜಿಲ್ಲಾ ಮೇಲ್ವಿಿಚಾರಕರಾದ ಸುಂದರರಾಲ ಸಾಮ್ಯುಯಲ್ ಮಾತನಾಡಿ ಪರಮ ಪವಿತ್ರವಾದ ಯೇಸು ಪ್ರಭುವಿನ ಮಕ್ಕಳಾದ ನೀವು ಇಂದು ಇಂತಹ ಹಳ್ಳಿಿಯಲ್ಲಿ ಭವ್ಯ ಚರ್ಚ್ ನಿರ್ಮಾಣ ಮಾಡುತ್ತಿಿರುವುದು ಶ್ಲಾಾಘನೀಯ ಎಂದರು.
ಎಲ್ಲ ಸಮುದಾಯದವರೊಂದಿಗೆ ಸಮನ್ವಯತೆಯಿಂದ ಬದುಕು ಸಾಗಿಸಿ ಮಕ್ಕಳಿಗೆ ಶಿಕ್ಷಣ ನೀಡಲು ಹೇಳಿದರು.
ಈ ಹಿಂದೆ ಚರ್ಚ ನಿರ್ಮಾಣ ಮಾಡಿದ ಅದರ ಪುನರ್ ನಿರ್ಮಾಣ ಮಾಡುತ್ತಿಿರುವುದು ಗ್ರಾಾಮದಲ್ಲಿ ಕ್ರೈಸ್ತ ಸಮುದಾಯದವರು ಯೇಸು ಪ್ರಭೂವಿನಲ್ಲಿಟ್ಟಿಿರುವ ಪ್ರೀೀತಿಯೇ ಕಾರಣ ಎಂದು ಹೇಳಿದರು.
ಇದಕ್ಕೂ ಮುನ್ನ ತಮ್ಮ ಗ್ರಾಾಮದ ಹಿರಿಯ ಪತ್ರಕರ್ತರಾದ ಬಿ.ವೆಂಕಟಸಿಂಗ್ ಅವರು ಮಾಹಿತಿ ಆಯೋಗದ ಆಯುಕ್ತರಾದ ಹಿನ್ನೆೆಲೆಯಲ್ಲಿ ಮೆರವಣಿಗೆ ಮೂಲಕ ಸ್ವಾಾಗತಿಸಲಾಯಿತು.ಇದೇ ವೇಳೆ ಮಾಹಿತಿ ಆಯೋಗದ ಆಯುಕ್ತರಾದ ಬಿ.ವೆಂಕಟಸಿಂಗ್ ಅವರನ್ನು ಸನ್ಮಾಾನಿಸಿ ಅಭಿನಂದಿಸಲಾಯಿತು.ಈ ಸಂದರ್ಭದಲ್ಲಿ ರುಬೇನ್, ಜಾನಪ್ಪಘಿ, ಸಾಮ್ಯುವೆಲ್, ದೇವಪುತ್ರ ಗೆಜ್ಜಲಪ್ಪಘಿ, ಸುರೇಶ, ಜಯಪ್ಪಘಿ, ಆನಂದಪ್ಪಘಿ, ಶಾಂತರಾಜು, ರಾಜು, ಯೇಸಪ್ಪ ಮತ್ತಿಿತರರಿದ್ದರು.


