ಮಾನ್ವಿ : ಗ್ರಾಮೀಣ ಪ್ರದೇಶ ಯುವಕರು ದುಶ್ಚಟಗಳಿಗೆ ಬಲಿಯಾಗದೆ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಹಾಗೆ ತಂದೆ ತಾಯಿಗಳ ಸೇವೆಯೊಂದಿಗೆ ಗುರುಗಳ ಮಾರ್ಗದರ್ಶನದಲ್ಲಿ ನಡೆಯಬೇಕು ನಿನ್ನೆ ಕೊರವಿ ಗ್ರಾಮದಲ್ಲಿ ಹೊಸದಾಗಿ ಕೇಂದ್ರೀಯ ಶಸ್ತ್ರಪಡೆಗೆ ನೇಮಕವಾಗಿರುವ ಯುವಕರಿಗೆ ಹಾಗೂ ಅವರ ತಂದೆ ತಾಯಿಗಳಿಗೆ ಸನ್ಮಾನ ಕಾರ್ಯಕ್ರಮ ಸಮಾರಂಭದಲ್ಲಿ ಮಾನ್ವಿ ಯುವ ಬಳಗದ ಸಂಚಾಲಕ ಮಹೇಶ್ ನಾಯಕ್ ಬೆಟ್ಟದೂರ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು ಮುಸ್ತಫ ಗುರು ಮಾತನಾಡಿ ದೇಶದ ಸೈನಿಕರಿಗೆ ಯಾವುದೇ ತೊಂದರೆಯಾದರೆ ಇವರ ಜೊತೆ ನಮ್ಮ ಯುವ ಸಮೂಹ ಸೈನಿಕರಿಗೆ ಇವರ ಕುಟುಂಬದವರಿಗೆ ಬೆನ್ನ ಹಿಂದೆ ನಾವಿರುತ್ತೇವೆ
ಸನ್ಮಾನ ಸ್ವೀಕರಿಸಿ ಮಾತನಾಡಿದ ವೆಂಕಟೇಶ್ ನಾಯಕ ಕೊರವಿ ನಾನು ತಾಯಿಯ ಆಸೆಯಂತೆ ಕಷ್ಟಪಟ್ಟು ಅಭ್ಯಾಸ ಮಾಡಿ ತರಬೇತಿಗೆ ಶಿಬಿರಕ್ಕೆ ಹೋಗದೆ ತಾಯಿಯ ಜೊತೆ ಜಮೀನಿನಲ್ಲಿ ಕೆಲಸ ಮಾಡಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ದೈಹಿಕ ವೈದ್ಯಕೀಯ ಪರೀಕ್ಷೆಯಲ್ಲಿಯೂ ತೇರ್ಗಡೆಯಾಗಿ ಈಗ ಶಸಸ್ತ್ರ ಪಡೆಗೆ ಹೋಗುತ್ತಿರುವುದು ಸಂತಸ ತಂದಿದೆ ನನ್ನ ಗ್ರಾಮೀಣ ಪ್ರದೇಶದ ಯುವಕರು ದುಶ್ಚಟಗಳಿಗೆ ಬಲಿಯಾಗದೆ ಶರೀರವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು
ಜೆಲ್ಲಿ ಶಿವರಾಜ್ ನಾಯಕ ನೀರಮಾನ್ವಿ ಮಾತನಾಡಿ ನಮ್ಮ ತಂದೆ ಸ್ವಂತ ದುಡಿದು ನನ್ನನ್ನು ಚೆನ್ನಾಗಿ ಅಭ್ಯಾಸ ಮಾಡಿಸಿ ಈ ಮಟ್ಟಕ್ಕೆ ತಂದಿದ್ದಾರೆ ನಾನು ನಮ್ಮ ತಂದೆ ತಾಯಿಗಳ ಗುರುಗಳ ಋಣ ತೀರಿಸಲು ಸಾಧ್ಯವಿಲ್ಲ
ಕೇಂದ್ರೀಯ ಶಶಸ್ತ್ರ ಪಡೆಗಳ ತಾಲೂಕ ಅಧ್ಯಕ್ಷರಾದ ಬಸವರಾಜ್ ನಾಯಕ್ ಮುಸ್ಟೂರು ಮಾತನಾಡಿ ಮಾನ್ವಿ ತಾಲೂಕಿನ ಯುವಕರ ಬಳಗ ಸೈನಿಕರಗಷ್ಟೇ ಮೀಸಲಾಗದೆ ದೀನ ದಲಿತರ ಬಡವರ ಪರನಿಂತು ಕೆಲಸ ಮಾಡಿ ಕೊಡಬೇಕೆಂದರು ಈ ಮಾನ್ವಿ ತಾಲೂಕಿನ ಯುವಕರ ಬಳಗದ ಕಾರ್ಯ ಶ್ಲಾಘನೀಯವಾಗಿದೆ ಈ ಸಂದರ್ಭದಲ್ಲಿ ನಿವೃತ್ತ ಯೋಧರು ಹಾಲಿ ಯೋದರು ತಮ್ಮ ಅನಿಸಿಕೆ ಹಂಚಿಕೊಂಡರು ಈ ಒಂದು ಕಾರ್ಯಕ್ರಮದಲ್ಲಿ ತಾಲೂಕಿನ ಯುವ ಬಳಗ ಕೊರವಿ ಗ್ರಾಮದ ಹಿರಿಯ ಮುಖಂಡರು ಯುವಕರು ಹಾಗೂ ಸಾದಾಪುರ ಸೀಕಲ್ ನೀರಮಾನ್ವಿ ಗ್ರಾಮದ ದೇಶಪ್ರೇಮಿಗಳು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು
