ಮಾನವಿ : ತಾಲ್ಲೂಕಿನ ಮದ್ಲಾಪೂರು ಪಂಚಾಯತಿಗಳಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಕಾಮಗಾರಿಗಳನ್ನು ಕೇಂದ್ರ ಆಡಿಟ್ ತಂಡದ ಅಧಿಕಾರಿ ಶ್ರೀ ಕುಮುದ್ ದುಬೆ ರವರು ಭೇಟಿ ನೀಡಿ ಪರಿಶೀಲಿಸಿದರು.

 

ಮೊದಲಿಗೆ ಮದ್ಲಾಪೂರು ಗ್ರಾಮ ಪಂಚಾಯತಿ ಕಛೇರಿಗೆ ಭೇಟಿ ನೀಡಿ ಕಾಮಗಾರಿ ಕಡತ, 7 Register, NMMS ಹಾಜರಾತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಂಡರು.

ನಂತರ 1)ಮದ್ಲಾಪುರ್ ಗ್ರಾಮದ ಅಬ್ಬಯ್ಯ ನ ಹೊಲದಿಂದ ಬಸಯ್ಯ ನ ಹೊಲದವರೆಗೆ ನಾಲಾ ಅಭಿವೃದ್ಧಿ, 2)ಚಿಕಲ್ಪರ್ವಿ ಗ್ರಾಮದ ಸೀನಪ್ಪ ಹೊಲದಿಂದ ಕೊಡಗಿಡ್ಡ ಹಳ್ಳದವರೆಗೆ ನಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ಮಾಡುವುದರ ಜೊತೆಗೆ ಕಾಮಗಾರಿ ಕಡತಗಳನ್ನು ಪರಿಶೀಲನೆ ‌ಮಾಡಿದರು ಮತ್ತು ಅಳತೆ ಪ್ರಮಾಣ ಪರಿಶೀಲನೆ ಮಾಡಿದರು,

 

ನಂತರ ಪೋತ್ನಾಳ ‌ಗ್ರಾಮ ಪಂಚಾಯತಿಗೆ ಬೇಟಿ‌ ನೀಡಿ 7 ರಿಜಿಸ್ಟರ್ ಗಳ ಪರಿಶೀಲನೆ, ದೂರು ದಾಖಲೆಗಳ ರಿಜಿಸ್ಟರ್ , ಅಸ್ತಿವಹಿ ರೆಜಿಸ್ಟರ್, Ongoing ಕಾಮಗಾರಿ ಲೀಸ್ಟ್ ಪಡೆದುಕೊಂಡು ಪರಿಶೀಲನೆ ಮಾಡಿ, ಸಮಾಜಿಕ ಲೆಕ್ಕ ಪರಿಶೋದನ ಗ್ರಾಮ ಸಭೆ,ಗ್ರಾಮ ಪಂಚಾಯತಿಯ ನಡಾವಳಿಗಳು ಪರಿಶೀಲನೆ ಮಾಡಿದರು, ನಂತರ ಕೇಲವು ಕಾಮಗಾರಿ ಅಯ್ಕೆಮಾಡಿ‌, ಕಾಮಗಾರಿ ವೀಕ್ಷಣೆ ಗಾಗಿ ಕ್ಷೇತ್ರ ಬೇಟಿ ನೀಡಿದರು,

 

ಪೋತ್ನಾಳ ಗ್ರಾಮ ಪಂಚಾಯತಿಯ ಜೀನೂರು‌ ಕ್ಯಾಂಪಿನ ರಸ್ತೆಯಿಂದ ನರಸಯ್ಯನ ಹೊಲದವರೆಗೆ ನಾಲಾ ಹೂಳು ಎತ್ತುವ ಕಾಮಗಾರಿ ವೀಕ್ಷಣೆ ಮಾಡಿ, ಕಾಮಗಾರಿ ಕಡತಗಳ ಪರಿಶೀಲನೆ, ಕಾಮಗಾರಿ ಗುಣ ಮಟ್ಟ ಪರಿಶೀಲನೆ ಮಾಡಿದರು,

 

ಸದರಿ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ‌ ಶ್ರೀ ಖಾಲೀದ್ ಅಹಮದ್, ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಅಸ್ರಾ ಜಬೀನಾ ಖಾನ್ ಮತ್ತು ಅಕ್ತರ ಪಾಷ, ತಾಂತ್ರಿಕ‌ ಸಂಯೋಜಕರು, ತಾಂತ್ರಿಕ ಸಹಾಯಕರು, ಐಇಸಿ ಸಂಯೋಜಕರು, ಟಿಎಮ್ಎಸ್ ಸಂಯೋಜಕರು, ಸಾಮಾಜಿಕ ಲೆಕ್ಕ ಪರಿಶೋಧನ ಸಂಯೋಜಕರು ಹಾಗೂ ಗ್ರಾ.ಪಂ‌ ಸಿಬ್ಬಂದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *