ಮಸ್ಕಿ : ಘನತ್ಯಾಜ್ಯ ಮತ್ತು ಬಳಸಿದ ನೀರಿನ ನಿರ್ವಹಣೆಯನ್ನು ಯಶಸ್ವಿಗೊಳಿಸಲು ಸಮುದಾಯದ ಸಹಭಾಗಿತ್ವ ಅವಶ್ಯ-ಭಾಲಚಂದ್ರ ಜಾಬಶೆಟ್ಟಿ
ಪರಿಸರ ಸ್ನೇಹಿ ತ್ಯಾಜ್ಯ ತಿರುವು ಯೋಜನೆಯ ಅಳವಡಿಕೆಯಿಂದ ನಗರ ತ್ಯಾಜ್ಯ ನಿರ್ವಹಣಾ ವೆಚ್ಚದಲ್ಲಿ ಗಣನೀಯ ಉಳಿತಾಯ ಸಾಧ್ಯ ಎಂದು ಪ್ರಧಾನ ಸಂಪನ್ಮೂಲ ವ್ಯಕ್ತಿ ಭಾಲಚಂದ್ರ ಜಾಬಶೆಟ್ಟಿ ಹೇಳಿಸರು.
ಮಸ್ಕಿ ಪಟ್ಟಣದಲ್ಲಿ ಸ್ವಚ್ಛ ಭಾರತ ಮಿಷನ್ (ನಗರ) 2.O ಅಂಗವಾಗಿ ಪೌರಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರುಗಳಿಗಾಗಿ ಘನತ್ಯಾಜ್ಯ ವಸ್ತು ನಿರ್ವಹಣೆ ಹಾಗೂ ನೈರ್ಮಲ್ಯಕ್ಕೆ ಬಳಸಿದ ನೀರಿನ ನಿರ್ವಹಣೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ರಾಯಚೂರು ಜಿಲ್ಲಾಡಳಿತ, ನಗರಾಭಿವೃದ್ಧಿ ಕೋಶ, ಪುರಸಭೆ ಮಸ್ಕಿ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಮಸ್ಕಿ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಘನತ್ಯಾಜ್ಯ ಮತ್ತು ಬಳಸಿದ ನೀರಿನ ನಿರ್ವಹಣೆಯನ್ನು ಯಶಸ್ವಿಗೊಳಿಸಲು ಸಮುದಾಯದ ಸಹಭಾಗಿತ್ವ ಅತೀ ಅವಶ್ಯಕವಾಗಿದ್ದು ಸಮುದಾಯದ ಮನವೊಲಿಸಲು ಇಂಥ ಜಾಗೃತಿ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆಯೆಂದು ಎಂದರು.ತ್ಯಾಜ್ಯ ಸೃಷ್ಟಿಸುವವರು ಹಾಗೂ ತ್ಯಾಜ್ಯವನ್ನು ಸಂಸ್ಕರಿಸುವವರ ಮಧ್ಯೆ ಸಂಪರ್ಕವೇರ್ಪಡಿಸುವುದರಿಂದ ಆರ್ಥಿಕಲಾಭಪಡೆಯಬಹುದಲ್ಲದೆ ತ್ಯಾಜ್ಯದಿಂದಾಗಿ ಉಂಟಾಗುವ ಗಂಡಾಂತರಗಳನ್ನು ತಪ್ಪಿಸಬಹುದಾಗಿದೆಯೆಂದರು.
ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸುವುದರ ಜೊತೆಗೆ
ವೇಸ್ಟ್ ಡೈವರ್ಷನ್ ಪ್ಲಾನ್ ಅಳವಡಿಕೆಯಿಂದ ತ್ಯಾಜ್ಯ ಸಾಗಣೆ ವೆಚ್ಚದಲ್ಲಿ ಕಡಿತಗೊಳಿಸಬಹುದು ಹಾಗೂ ತ್ಯಾಜ್ಯದಲ್ಲಿರುವ ಸಂಪನ್ಮೂಲಗಳ ಕ್ರೋಢಿಕರಣದಿಂದ, ಜೈವಿಕ ಗೊಬ್ಬರ ತಯಾರಿಕೆಯಿಂದ ಆರ್ಥಿಕ ಲಾಭ ಪಡೆಯಬಹುದು, ತಾರಸಿ ತೋಟದಲ್ಲಿ ಸಾವಯವ ತರಕಾರಿ ಬೆಳೆಸಿ ಆರೋಗ್ಯ ವೃದ್ಧಿ ಪಡೆಯಬಹುದಾಗಿದೆ ಯೆಂದು ತಿಳಿಸಿದರು. ಪರಿಸರ ಸ್ನೇಹಿ ಸೂಕ್ಷ್ಮಾಣು ಬಳಕೆಯಿಂದ ಘನತ್ಯಾಜ್ಯ ಮತ್ತು ಬಳಸಿದ ನೀರಿನ ನಿರ್ವಹಣೆ ಕುರಿತ ವಿಧಾನಗಳನ್ನು ವಿಷದವಾಗಿ ವಿವರಿಸಿದರು.
ಬಚ್ಚಲು ನೀರು ಮತ್ತು ಶೌಚದ ನೀರನ್ನು ಸೂಕ್ತವಾಗಿ ನಿರ್ವಹಣೆ ಮಾಡದಿದ್ದಲ್ಲಿ ಅನುಭವಿಸಬೇಕಾದ ಗಂಭೀರ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು.
ಆಸುಪಾಸಿನಲ್ಲಿ ಮಲಿನ ನೀರು ಶೇಖರಗೊಳ್ಳದಂತೆ ನೋಡಿಕೊಂಡಲ್ಲಿ ಆರೋಗ್ಯ ಸುರಕ್ಷತೆ ಸಾಧ್ಯವಾಗುತ್ತದೆ. ವಿಕೇಂದ್ರಕೃತ ತ್ಯಾಜ್ಯ ನೀರು ನಿರ್ವಹಣೆ ಯಲ್ಲಿ ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿರುವ ಸಸಿಗಳನ್ನು ಉಪಯೋಗಿಸುವ ಪ್ರವೃತ್ತಿ ಇಮ್ಮಡಿಗೊಳ್ಳತ್ತಿದೆ. ಪ್ಲಾಂಟೆಡ್ ಫಿಲ್ಟರ್ ಮತ್ತು ಪ್ಲಾಂಟೆಡ್ ವೆಟ್ವೀಲ್ಲ ಮುಂತಾದ ಪರಿಸರ ಪೂರಕ ತಂತ್ರಗಳಿಂದ ತ್ಯಾಜ್ಯ ನೀರನ್ನು ಸಂಸ್ಕರಿಸಿ, ಶುದ್ಧೀಕರಿಸಿ ಕೃಷಿಯಲ್ಲಿ ಆಹಾರೇತರ ಬೆಳೆಗಳಿಗೆ ಉಪಯೋಗಿಸಿ ಆರ್ಥಿಕ ಅಭಿವೃದ್ಧಿಗೆ ನಾಂದಿ ಹಾಡಬಹುದಾಗಿದೆ.
ಈ ಸಂದರ್ಭದಲ್ಲಿ ತ್ಯಾಜ್ಯ ನೀರು ಸಂಸ್ಕರಣ ಸಸ್ಯಗಳ ಪ್ರಾತ್ಯಕ್ಷಿತೆಯಲ್ಲಿ ಅವುಗಳನ್ನು ಬಳಸುವ ಬೆಳೆಸುವ ವಿಧಾನಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಕಾಲೇಜಿನ ಪ್ರಾಚಾರ್ಯ ರಂಗಯ್ಯಶೆಟ್ಟಿ ,ಭಾಲಚಂದ್ರ ಜಾಬಶೆಟ್ಟಿ, ಪುರಸಭೆ ಉಪಾಧ್ಯಕ್ಷೆ ಶ್ರೀಮತಿ ಗೀತಮ್ಮ ಶಿವರಾಜ ಬುಕ್ಕಣ್ಣ,ನಾಗರಾಜ ಸಿ ಇ ಒ, ಉಪನ್ಯಾಸಕರಾದ ಮಾಂತೇಶ್ ಮಸ್ಕಿ, ರಂಗಯ್ಯ, ಸುಜಾತ ಕಿರಿಯ ಆರೋಗ್ಯ ನಿರೀಕ್ಷಕರು ಸೇರಿದಂತೆ ಇನ್ನಿತರರು ಇದ್ದರು

Leave a Reply

Your email address will not be published. Required fields are marked *