ರಾಯಚೂರು ಫೆಬ್ರವರಿ 17 (ಕರ್ನಾಟಕ ವಾರ್ತೆ): ತಾಲ್ಲೂಕಿನ ಚಂದ್ರಬಂಡ ಹಾಗೂ ಬಾಯಿದೊಡ್ಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಕಾಮಗಾರಿಗಳನ್ನು ಕೇಂದ್ರ ಆಡಿಟ್ ತಂಡದ ಅಧಿಕಾರಿ ಕುಮುದ್ ದುಬೆ ಅವರು ಫೆ.16ರ ಸೋಮವಾರ ದಂದು ಭೇಟಿ ನೀಡಿ ಪರಿಶೀಲನೆ ಮಾಡಿದರು.
ಮೊದಲಿಗೆ ಚಂದ್ರಬಂಡ ಗ್ರಾಮ ಪಂಚಾಯತಿ ಕಚೇರಿಗೆ ಭೇಟಿ ನೀಡಿ ಕಾಮಗಾರಿ ಕಡತ, ನೋಂದಣಿ, ಎನ್.ಎಂ.ಎಂ.ಎಸ್. ಹಾಜರಾತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಂಡರು.
ನಂತರ ಅರಿಸಿಗೇರಾ ತಾಂಡದಲ್ಲಿರುವ ದನದ ಕೊಟ್ಟಿಗೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.
ನಂತರ ನಾಗನದೊಡ್ಡ ಗ್ರಾಮದಲ್ಲಿರುವ ಸಾಮಾಜಿಕ ಅರಣ್ಯದಲ್ಲಿ ಕಂದಕ ಬದು ನಿರ್ಮಾಣ, ದನದ ಕೊಟ್ಟಿಗೆ ಹಾಗೂ ಚಿಂತಲ ಕುಂಟ ಅಮೃತ ಸರೋವರ ಕೆರೆ ಕಾಮಗಾರಿಗಳನ್ನು ವೀಕ್ಷಿಸಿದರು.
ನಂತರ ಚಂದ್ರಬಂಡ ಗ್ರಾಮದಲ್ಲಿರುವ ಕೀರಾಕುಂಟ ಅಮೃತ ಸರೋವರ ಕೆರೆ ಕಾಮಗಾರಿಯನ್ನು ಪರಿವೀಕ್ಷಣೆ ಮಾಡಿದರು. ನಂತರ ಬಾಯಿ ದೊಡ್ಡ ಗ್ರಾಮ ಪಂಚಾಯತಿಯ ಕಡಗಂದೊಡ್ಡಿ ಗ್ರಾಮದ ಮೆಟಲ್ ರಸ್ತೆ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು.
ನಂತರ ಕುರಬದೊಡ್ಡಿ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕೂಲಿ ಕಾರ್ಮಿಕರ ಎನ್.ಎಂ.ಎಂ.ಎಸ್. ಹಾಜರಾತಿ, ಉದ್ಯೋಗ ಚೀಟಿ ಮತ್ತು ಕೆಲಸದ ಪ್ರಮಾಣವನ್ನು ಪರಿಶೀಲಿಸಿದರು. ನಂತರ cgandrababda ಗ್ರಾಮ ಪಂಚಾಯತಿಯ ಕಟ್ಲಟ್ಕೂರು ಗ್ರಾಮದಲ್ಲಿ ಚರಂಡಿ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ್, ಸಹಾಯಕ ನಿರ್ದೇಶಕರು ಹನುಮಂತ, ಪಂಚಾಯತ ಅಭಿವೃದ್ಧಿ ಅಧಿಕಾರಿ, ಡಿಪಿಎಮ್, ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು, ಐಇಸಿ ಸಂಯೋಜಕರು ಸೇರಿದಂತೆ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *